ಯೂರಿಕ್ ಆಸಿಡ್ ಮೂತ್ರದ ಮೂಲಕವೇ ಹೊರ ಹೋಗಬೇಕಾದರೆ ಈ ತರಕಾರಿಯ ಜ್ಯೂಸ್ ಕುಡಿಯಿರಿ! ದಿನಕ್ಕೊಂದೇ ಲೋಟ

Thu, 25 Apr 2024-11:14 am,

ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ ಪ್ರತಿ ಡೆಸಿಲಿಟರ್‌ಗೆ ಸುಮಾರು 3.5 ರಿಂದ 7.2 ಮಿಲಿಗ್ರಾಂ ಯೂರಿಕ್ ಆಮ್ಲ ಇರಬೇಕು.ಯೂರಿಕ್ ಆಸಿಡ್ ದೇಹದಲ್ಲಿ ಇದಕ್ಕಿಂತ ಹೆಚ್ಚಾದರೆ ಹಲವು ಸಮಸ್ಯೆಗಳು ಎದುರಾಗುವ ಅಪಾಯವಿರುತ್ತದೆ.

ಯೂರಿಕ್ ಆಸಿಡ್ ಮಟ್ಟವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಲು ಈ  ಜ್ಯೂಸ್ ಅನ್ನು ದಿನಕ್ಕೆ ಒಂದು ಲೋಟ ಕುಡಿದರೆ ಸಾಕು. ಈ ಜ್ಯೂಸ್ ಅನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಇದಕ್ಕೆ ಬೇಕಾಗುವ ಸಾಮಗ್ರಿಗಳೆಂದರೆ ಚಿಕ್ಕ ಗಾತ್ರದ ಸೌತೆಕಾಯಿ - 1, ಕ್ಯಾರೆಟ್ - 1, ಬೀಟ್ರೂಟ್ - 1

ಮೊದಲು ಎಲ್ಲಾ ತರಕಾರಿಗಳನ್ನು ಸಣ್ಣ ಗಾತ್ರದಲ್ಲಿ ಕತ್ತರಿಸಿ,ಗ್ರೈಂಡರ್ ಸಹಾಯದಿಂದ ರಸವನ್ನು ತೆಗೆಯಿರಿ. ರುಚಿಗೆ ಬೇಕಾಗುವಷ್ಟು ಬ್ಲಾಕ್ ಸಾಲ್ಟ್ ಬೆರೆಸಿ. ಈ ರಸವನ್ನು ಕುಡಿಯುವುದರಿಂದ ಯೂರಿಕ್ ಆಸಿಡ್ ಮ್ಲವನ್ನು ನಿಯಂತ್ರಿಸಬಹುದು.  

ಯೂರಿಕ್ ಆಮ್ಲವನ್ನು ನಿಯಂತ್ರಿಸಲು, ಯಾವುದೇ ಸಮಯದಲ್ಲಿಯಾದರೂ ಈ ಜ್ಯೂಸ್ ಸೇವಿಸಬಹುದು. ಆದರೆ, ಉತ್ತಮ ಫಲಿತಾಂಶಕ್ಕಾಗಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಸಾಕು.

ಸೌತೆಕಾಯಿಯಲ್ಲಿರುವ ಗುಣಗಳು ದೇಹದಿಂದ ಪ್ಯೂರಿನ್‌ಗಳನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿಯಾಗಿದೆ.ಅದರ ಸಹಾಯದಿಂದ, ಹರಳುಗಳನ್ನು ಹೊರಹಾಕುವಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಹಾಯ ಮಾಡುತ್ತದೆ.

ಬೀಟ್ರೂಟ್ ಮೂತ್ರಪಿಂಡದ ಆರೋಗ್ಯವನ್ನು ಹೆಚ್ಚಿಸುವ ಗುಣವನ್ನು ಹೊಂದಿದೆ. ಇದರೊಂದಿಗೆ ದೇಹದಲ್ಲಿ ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಬಹುದು.ಅಲ್ಲದೆ pH ಮಟ್ಟವನ್ನು ಸಮತೋಲನಗೊಳಿಸಬಹುದು.  ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಿ. Zee Kannada News ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link