ಬೆಳಿಗ್ಗೆ ಮೊಸರಿನೊಂದಿಗೆ ಈ ವಸ್ತು ಬೆರೆಸಿ ತಿನ್ನಿ ತಕ್ಷಣ ನಾರ್ಮಲ್ ಆಗಿ ಬಿಡುತ್ತದೆ ಬ್ಲಡ್ ಶುಗರ್ ! ಈಗಲೇ ಟ್ರೈ ಮಾಡಿ
ಎಷ್ಟೋ ಬಾರಿ ಔಷಧಗಳನ್ನು ಸೇವಿಸಿತ್ತಿದ್ದರೂ ಬ್ಲಡ್ ಶುಗರ್ ನಿಯಂತ್ರಣಕ್ಕೆ ಬರುವುದಿಲ್ಲ. ಹೀಗಾದಾಗ ಅದಕ್ಕಿರುವ ಏಕೈಕ ಮಾರ್ಗ ಎಂದರೆ ನಮ್ಮ ಆಹಾರ ಪದ್ದತಿಯನ್ನು ಬದಲಿಸಿಕೊಳ್ಳುವುದು.
ಬೆಳಿಗ್ಗೆ ಲೋ ಫ್ಯಾಟ್ ಮೊಸರಿಗೆ ಕೆಲವು ಪದಾರ್ಥಗಳನ್ನು ಬೆರೆಸಿ ಸೇವಿಸಿದರೆ ಮಧುಮೇಹವನ್ನು ಸಂಪೂರ್ಣವಾಗಿ ನಿಯಂತ್ರಿಸುವುದು ಸಾಧ್ಯವಾಗುತ್ತದೆ.
ಬೇಯಿಸಿದ ಕಡಲೆ ಕಾಳನ್ನು ಮೊಸರಿನೊಂದಿಗೆ ಸೇವಿಸಬಹುದು.ಒಂದು ಬಟ್ಟಲು ಬೇಯಿಸಿದ ಕಡಲೆಕಾಳನ್ನು ಲೋ ಫ್ಯಾಟ್ ಮೊಸರಿಗೆ ಸೇರಿಸಿ ಸೇವಿಸಬೇಕು. ರುಚಿ ಹೆಚ್ಚು ಮಾಡಲು ಉಪ್ಪು ಮತ್ತು ಕರಿಮೆಣಸನ್ನು ಸೇರಿಸಬಹುದು.
ಒಂದರಿಂದ ಎರಡು ಟೀಚಮಚ ಇಸಾಬ್ಗೋಲ್ ಅನ್ನು ಮೊಸರಿಗೆ ಬೆರೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಇದು ಹೈ ಬ್ಲಡ್ ಶುಗರ್ ಅನ್ನು ಕಡಿಮೆ ಮಾಡುತ್ತದೆ.
ಇನ್ನು ಹಸಿ ತರಕಾರಿಗಳಾದ ಸೌತೆಕಾಯಿ, ಟೊಮೆಟೊ, ಸೌತೆಕಾಯಿ ಮತ್ತು ಈರುಳ್ಳಿ ಇತ್ಯಾದಿಗಳನ್ನು ಮೊಸರಿನೊಂದಿಗೆ ತೆಗೆದುಕೊಳ್ಳಬಹುದು.
ಮಧುಮೇಹ ರೋಗಿಗಳು ಬೆಳಿಗ್ಗೆ ಮೊಸರಿನೊಂದಿಗೆ ದಾಳಿಂಬೆಯನ್ನು ಸೇವಿಸಬಹುದು.ಇದು ಬ್ಲಡ್ ಶುಗರ್ ಅನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.