ಹಿತ್ತಲಲ್ಲಿ ಸಿಗುವ ಈ ಎಲೆಯೊಂದೇ ಸಾಕು ದುಂಡಾಗಿರುವ ಹೊಟ್ಟೆಯನ್ನು ಚಪ್ಪಟೆ ಮಾಡಲು!ಸೇವಿಸುವ ರೀತಿ ಕೂಡಾ ಹೀಗೆಯೇ ಇರಲಿ
ಕರಿಬೇವನ್ನು ಈ ರೀತಿ ಸೇವಿಸಿದರೆ ಕೆಲವೇ ದಿನಗಳಲ್ಲಿ ದೇಹದ ತೂಕ ಕಡಿಮೆಯಾಗುವುದು.ಈ ಸಣ್ಣ ಸಣ್ಣ ಎಲೆಗಳನ್ನು ಸೇವಿಸುವ ಮೂಲಕ ಸೊಂಟ ಮತ್ತು ಹೊಟ್ಟೆಯ ಭಾಗದಲ್ಲಿ ಸಂಗ್ರಹವಾಗಿರುವ ಬೊಜ್ಜನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ.
ಬೊಜ್ಜು ಒಂದು ಆರೋಗ್ಯ ಸಮಸ್ಯೆ.ಬೊಜ್ಜು ರಕ್ತದೊತ್ತಡವನ್ನು ಹೆಚ್ಚಿಸಬಹುದು,ಮಧುಮೇಹಕ್ಕೆ ಕಾರಣವಾಗಬಹುದು.ಮಾತ್ರವಲ್ಲ ಸ್ಥೂಲಕಾಯತೆಯು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.
ಸ್ಥೂಲಕಾಯದಿಂದ ಬಳಲುತ್ತಿರುವವರು ಖಾಲಿ ಹೊಟ್ಟೆಯಲ್ಲಿ ಪ್ರತಿದಿನ 5-6 ಕರಿಬೇವಿನ ಎಲೆಗಳನ್ನು ಜಗಿಯಬೇಕು.ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.ಈ ಮೂಲಕ ತೂಕ ನಷ್ಟ ವೇಗವಾಗಿ ಸಂಭವಿಸುತ್ತದೆ
ಬೆಳಗ್ಗೆ ಎದ್ದ ನಂತರ ಒಂದು ಹಿಡಿ ಕರಿಬೇವಿನ ಸೊಪ್ಪನ್ನು ರುಬ್ಬಿಕೊಳ್ಳಿ. ಈ ಚಟ್ನಿಯನ್ನು ಖಾಲಿ ಹೊಟ್ಟೆಯಲ್ಲಿಯೇ ಸೇವಿಸಬೇಕು. ನಂತರ ಸ್ವಲ್ಪ ನೀರು ಕುಡಿಯಬಹುದು.
ವಿಟಮಿನ್ ಎ, ವಿಟಮಿನ್ ಬಿ ಮತ್ತು ವಿಟಮಿನ್ ಸಿ ಯಂತಹ ಅಂಶಗಳು ಕರಿಬೇವಿನ ಎಲೆಗಳಲ್ಲಿ ಕಂಡುಬರುತ್ತವೆ.ಕರಿಬೇವಿನ ಎಲೆಗಳಲ್ಲಿ ಕ್ಯಾಲೋರಿಗಳು ತುಂಬಾ ಕಡಿಮೆಯಿರುವುದರಿಂದ ತೂಕ ಇಳಿಸಲು ಸಹಾಯ ಮಾಡುತ್ತದೆ.
ಕರಿಬೇವಿನ ಎಲೆಗಳ ಚಟ್ನಿ ತಿನ್ನುವುದರಿಂದ ಕಡುಬಯಕೆಗಳನ್ನು ಕಡಿಮೆ ಮಾಡುತ್ತದೆ.ಇದು ಅನಾರೋಗ್ಯಕರ ಆಹಾರ ಸೇವನೆಯನ್ನು ತಪ್ಪಿಸುತ್ತದೆ. ಈ ಮೂಲಕ ತೂಕವನ್ನು ನಿಯಂತ್ರಣದಲ್ಲಿಡುತ್ತದೆ.
ಸೂಚನೆ:ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.