ರಾತ್ರಿ ಮಲಗುವ ಮುನ್ನ ಈ ಪುಟ್ಟ ಹಣ್ಣನ್ನು ಹೀಗೆ ಸೇವಿಸಿ !ಬೆಳಗ್ಗೆ ಯೂರಿಕ್ ಆಸಿಡ್ ಸರಾಗವಾಗಿ ದೇಹದಿಂದ ಹೊರ ಬೀಳುವುದು
ನಾವಿಲ್ಲಿ ಹೇಳುತ್ತಿರುವ ಅಂಜೂರದ ಹಣ್ಣಿನ ಬಗ್ಗೆ. ರಕ್ತದಲ್ಲಿನ ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಲು ಅಂಜೂರದ ಹಣ್ಣುಗಳು ಹೆಚ್ಚಿನ ಪ್ರಮಾಣದಲ್ಲಿ ಪ್ರಯೋಜನಕಾರಿ. ಇದನ್ನು ಸೇವಿಸಿದರೆ ಮೂಳೆಗಳಲ್ಲಿ ಅಂಟಿ ಕುಳಿತಿರುವ ಯೂರಿಕ್ ಆಸಿಡ್ ಕರಗಿ ಮೂತ್ರದ ಮೂಲಕ ದೇಹದಿಂದ ಸರಾಗವಾಗಿ ಹೊರ ಬರುತ್ತದೆ.
ಅಂಜೂರದ ಹಣ್ಣುಗಳು ಹೆಚ್ಚಿನ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತವೆ, ಇದು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.ಇದರೊಂದಿಗೆ ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಬಹುದು.
ನಿಯಮಿತವಾಗಿ ಅಂಜೂರವನ್ನು ಸೇವಿಸುತ್ತಾ ಬಂದರೆ ಇದು ಕೀಲುಗಳಲ್ಲಿ ಸ್ಫಟಿಕಗಳಂತೆ ಶೇಖರಣೆಯಾಗಿರುವ ಯೂರಿಕ್ ಆಸಿಡ್ ಕರಗುತ್ತದೆ. ಹೀಗೆ ಯೂರಿಕ್ ಆಸಿಡ್ ಕರಗುವುದರೊಂದಿಗೆ ಕೀಲು ನೋವು ಕೂಡಾ ಮಾಯವಾಗುತ್ತದೆ.
ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಲು, ನೀರಿನಲ್ಲಿ ನೆನೆ ಹಾಕಿದ ಅಂಜೂರವನ್ನು ಸೇವಿಸಬೇಕು.ಇದಕ್ಕಾಗಿ 2 ರಿಂದ 3 ಅಂಜೂರವನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಅದನ್ನು ಸೇವಿಸಬೇಕು.
ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಲು, ಅಂಜೂರವನ್ನು ಹಾಲಿನಲ್ಲಿ ಬೇಯಿಸಿ ಕೂಡಾ ತಿನ್ನಬಹುದು. ಇದಕ್ಕಾಗಿ ರಾತ್ರಿ ಮಲಗುವ ಮುನ್ನ 1 ಗ್ಲಾಸ್ ಹಾಲಿನಲ್ಲಿ 2 ರಿಂದ 3 ಅಂಜೂರದ ಹಣ್ಣುಗಳನ್ನು ಹಾಕಿ ಚೆನ್ನಾಗಿ ಕುದಿಸಿ.ನಂತರ ಅದನ್ನು ಸೇವಿಸಿ.ಇದು ನಿಮ್ಮ ರಕ್ತದಲ್ಲಿನ ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡುತ್ತದೆ.
ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.