ಚಳಿಗಾಲದಲ್ಲಿ ಈ ವಸ್ತುವನ್ನು ಸೇವಿಸಿದರೆ ಗಂಟುಗಳಲ್ಲಿ ಸೇರಿ ಕುಳಿತಿರುವ ಯೂರಿಕ್ ಆಸಿಡ್ ಕರಗುವುದು ! ಕಿಡ್ನಿ ಸ್ಟೋನ್ ಕೂಡಾ ಒಡೆಯುವುದು
ಚಳಿಗಾಲದಲ್ಲಿ ಕೀಲು ಮತ್ತು ಗಂಟು ನೋವಿನಿಂದ ಬಳಲುತ್ತಿರುವವರಿಗೆ ನರಕವೇ ಸರಿ. ಚಳಿಗಾಲದಲ್ಲಿ ತಾಪಮಾನವು ಕಡಿಮೆಯಾಗಿರುತ್ತದೆ. ಶೀತ ಗಾಳಿಯಿಂದಾಗಿ ಜನರ ದೇಹದ ಉಷ್ಣತೆಯು ಕಡಿಮೆಯಾಗುತ್ತದೆ. ಆಗ ಕೀಲು ನೋವು ಗಂಟು ನೋವು ವಿಪರೀತವಾಗಿ ಹೆಚ್ಚಾಗುತ್ತದೆ.
ಚಳಿಗಾಲದಲ್ಲಿ ಯೂರಿಕ್ ಆಸಿಡ್ ಹೆಚ್ಚಾಗುವ ಅಪಾಯವೂ ಇರುತ್ತದೆ. ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾದಾಗ ಇದು ಕೀಲುಗಳ ಸುತ್ತಲೂ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತದೆ. ಇದು ವಿಪರೀತ ನೋವನ್ನು ಉಂಟು ಮಾಡುತ್ತದೆ.
ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಳವನ್ನು ತಡೆಗಟ್ಟಲು, ಯೂರಿಕ್ ಆಮ್ಲವನ್ನು ಕಡಿಮೆ ಮಾಡಲು ಸಹಾಯ ಮಾಡುವ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಆಗ ಮಾತ್ರ ಯೂರಿಕ್ ಆಸಿಡ್ ಅನ್ನು ಕರಗಿಸುವುದು ಸಾಧ್ಯವಾಗುತ್ತದೆ.
ಹಸಿ ಬೆಳ್ಳುಳ್ಳಿಯನ್ನು ಸೇವಿಸುವ ಮೂಲಕ ಯೂರಿಕ್ ಆಸಿಡ್ ಅನ್ನು ಸುಲಭವಾಗಿ ದೇಹದಿಂದ ಹೊರ ಹಾಕಬಹುದು. ಹಸಿ ಬೆಳ್ಳುಳ್ಳಿಯನ್ನು ಸೇವಿಸಿದರೆ ಅದು ಯೂರಿಕ್ ಆಸಿಡ್ ಮತ್ತು ಮೂತ್ರ ಪಿಂಡದ ಸಮಸ್ಯೆಯಿಂದ ಪರಿಹಾರ ನೀಡುತ್ತದೆ.
ಯೂರಿಕ್ ಆಸಿಡ್ ಅನ್ನು ಕಡಿಮೆ ಮಾಡಲು, ಪ್ರತಿದಿನ ಬೆಳಿಗ್ಗೆ 2-3 ಹಸಿ ಬೆಳ್ಳುಳ್ಳಿ ಎಸಳುಗಳನ್ನು ಅಗಿದು ತಿನ್ನಬೇಕು. ನಂತರ ಸ್ವಲ್ಪ ಬಿಸಿ ನೀರು ಕುಡಿಯಬೇಕು. ಹೀಗೆ ಮಾಡುವುದರಿಂದ ಯೂರಿಕ್ ಆಸಿಡ್ ಕಡಿಮೆಯಾಗುತ್ತದೆ. ಕಿಡ್ನಿ ಸ್ಟೋನ್ ಕೂಡಾ ಹೊರ ಹೋಗುತ್ತದೆ.
ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದುಗಳನ್ನು ಆಧರಿಸಿ ಬರೆಯಲಾಗಿದೆ. ಈ ಮಾಹಿತಿಯನ್ನು ಜೀ ನ್ಯೂಸ್ ಅನುಮೋದಿಸುವುದಿಲ್ಲ.