ಈ ಎಲೆಯನ್ನು ರಾತ್ರಿ ಮಲಗುವ ಮುನ್ನ ಜಗಿದು ರಸ ಕುಡಿದು ಬಿಡಿ !ಎಷ್ಟೇ ಹೈ ಇದ್ದರೂ ನಾರ್ಮಲ್ ಆಗುತ್ತದೆ ಬ್ಲಡ್ ಶುಗರ್!
ಮಧುಮೇಹವನ್ನು ನಿಯಂತ್ರಿಸಲು ಔಷಧಿಯೇ ಆಗ ಬೇಕಿಲ್ಲ.ಕೆಲವು ನೈಸರ್ಗಿಕ ಪರಿಹಾರಗಳು ಕೂಡಾ ಶುಗರ್ ಅನ್ನು ನಿಯಂತ್ರಣಕ್ಕೆ ತರಲು ಸಹಾಯ ಮಾಡುತ್ತದೆ.
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಾರ್ಮಲ್ ಆಗಿಸಲು ಸಹಾಯ ಮಾಡುವ ಅನೇಕ ವಸ್ತುಗಳು ನಮ್ಮ ಸುತ್ತಲೇ ಇವೆ.ಅವುಗಳನ್ನು ಬಳಸುವ ಬಗೆ ನಾವು ತಿಳಿದಿರಬೇಕು ಅಷ್ಟೇ.
ಪೇರಳೆ ಎಲೆ ಮಧುಮೇಹ ತಡೆಗೆ ಬೆಸ್ಟ್ ಮನೆ ಮದ್ದು.ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ರಾತ್ರಿ ಮಲಗುವ ಮುನ್ನ ಪೇರಳೆ ಎಲೆಗಳನ್ನು ಜಗಿಯುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಣದಲ್ಲಿರುತ್ತದೆ.
ಪೇರಳೆ ಎಲೆಗಳನ್ನು ರಾತ್ರಿ ಹೊತ್ತು ಅಗಿದು ರಸ ನುಂಗುವುದರಿಂದ ಹೆಚ್ಚಿನ ಮತ್ತು ವೇಗದ ಪ್ರಯೋಜನವಾಗುವುದು.ಈ ರಸ ಹೊಟ್ಟೆ ಸೇರಿದ ನಂತರ,ರಾತ್ರಿಯಿಡೀ ಕೆಲಸ ಮಾಡುತ್ತದೆ.ಈ ಮೂಲಕ ಮತ್ತು ಬೆಳಗಿನ ತನಕ ಬ್ಲಡ್ ಶುಗರ್ ನಾರ್ಮಲ್ ಆಗುತ್ತದೆ.
ಮಧುಮೇಹ ನಿಯಂತ್ರಣಕ್ಕೆ ಪೇರಳೆ ಎಲೆಗಳನ್ನು ಆರಿಸುವಾಗ ಅದು ಸಂಪೂರ್ಣವಾಗಿ ಮಾಗಿರಬಾರದು ಎನ್ನುವುದು ನೆನಪಿರಲಿ.ಅಲ್ಲದೆ, ದೊಡ್ಡ ಗಾತ್ರಕ್ಕೂ ಅದು ಬೆಳೆದಿರಬಾರದು.ಬದಲಿಗೆ ಹಸಿ ಮತ್ತು ಸಣ್ಣ ಗಾತ್ರದ ಎಲೆಗಳನ್ನು ಆರಿಸಬೇಕಾಗುತ್ತದೆ.
ಮೂರರಿಂದ ನಾಲ್ಕು ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ಶುದ್ಧ ನೀರಿನಲ್ಲಿ ಚೆನ್ನಾಗಿ ತೊಳೆದು, ಒಂದೊಂದಾಗಿ ಅಗಿಯುತ್ತಲೇ ಇರಿ. ಹೀಗೆ ಜಗಿಯುವಾಗ ಬಿಡುಗಡೆಯಾದ ರಸವನ್ನು ನುಂಗಿ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.