ಯೂರಿಕ್ ಆಸಿಡ್ ಹರಳುಗಳನ್ನು ಕರಗಿಸಿ ಮೂತ್ರದ ಮೂಲಕ ಹೊರ ಹಾಕುತ್ತದೆ ಈ ಎಲೆ ! ಕಿಡ್ನಿ ಸ್ಟೋನ್ ಅನ್ನು ಕೂಡಾ ಪುಡಿ ಮಾಡುವುದು
ಯೂರಿಕ್ ಆಸಿಡ್ ಮಟ್ಟವನ್ನು ನಿಯಂತ್ರಿಸುವಲ್ಲಿ ಅಮೃತ ಬಳ್ಳಿ ಬಹಳ ಪ್ರಯೋಜನಕಾರಿ. ಶತಮಾನಗಳಿಂದಲೂ ಈ ಎಲೆಯನ್ನು ಆಯುರ್ವೇದದಲ್ಲಿ ಔಷಧವಾಗಿ ಬಳಸಲಾಗುತ್ತಿದೆ.ಇದರಲ್ಲಿರುವ ಔಷಧೀಯ ಗುಣಗಳು ಯೂರಿಕ್ ಆಮ್ಲವನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಅಮೃತ ಬಳ್ಳಿ ಎಲೆಗಳ ರಸವು ಯೂರಿಕ್ ಆಸಿಡ್ ಮತ್ತು ಸಂಧಿವಾತದ ಚಿಕಿತ್ಸೆಯಲ್ಲಿ ಸಾಕಷ್ಟು ಪರಿಣಾಮಕಾರಿ. ಅಲ್ಲದೆ ಕಿಡ್ನಿ ಸ್ಟೋನ್ ಅನ್ನು ಕೂಡಾ ಪುಡಿ ಮಾಡುತ್ತದೆ ಎಂದು ಅನೇಕ ಅಧ್ಯಯನಗಳಲ್ಲಿ ಕೂಡಾ ಸಾಬೀತಾಗಿದೆ.
ಇದು ಕೀಲುಗಳಲ್ಲಿನ ನೋವು ಮತ್ತು ಊತವನ್ನು ನಿವಾರಿಸಲು ಸಹಾಯ ಮಾಡುತ್ತದೆ.ಈ ಮೂಲಕ ಯೂರಿಕ್ ಆಸಿಡ್ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ.
ದೇಹದಲ್ಲಿನ ಯೂರಿಕ್ ಆಸಿಡ್ ಮಟ್ಟವನ್ನು ನಿಯಂತ್ರಿಸಲು,ಅಮೃತ ಬಳ್ಳಿ ಎಲೆಗಳ ಕಷಾಯವನ್ನು ಕುಡಿಯಬಹುದು. ಇದು ಯೂರಿಕ್ ಆಸಿಡ್ ಅನ್ನು ದೇಹದಿಂದ ಹೊರ ಹಾಕುತ್ತದೆ.
ಅಮೃತ ಬಳ್ಳಿ ಎಲೆಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ.ಬೆಳಿಗ್ಗೆ ಇದನ್ನು ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿಕೊಳ್ಳಿ.ಈಗ ಒಂದು ಲೋಟ ನೀರು ಅರ್ಧದಷ್ಟು ಆಗುವವರೆಗೆ ಕುದಿಸಬೇಕು. ನಂತರ,ಅದನ್ನು ಫಿಲ್ಟರ್ ಮಾಡಿ ಮತ್ತು ಕುಡಿಯಿರಿ.
ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಮೃತ ಬಳ್ಳಿ ಎಳೆಗಳ ಕಷಾಯವನ್ನು ನಿಯಮಿತವಾಗಿ ಸೇವಿಸುವುದರಿಂದ ಯೂರಿಕ್ ಆಸಿಡ್ ನಿಯಂತ್ರಿಸುವಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಹಾಯವಾಗುತ್ತದೆ.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.