ಊಟಕ್ಕಿಂತ 15 ನಿಮಿಷ ಮುನ್ನ ಈ ಹಣ್ಣನ್ನು ಸೇವಿಸಿ!ಬ್ಲಡ್ ಶುಗರ್ ನಾರ್ಮಲ್ ಆಗಿಯೇ ಉಳಿಯುತ್ತದೆ !ಇದು ಸಾಬೀತಾದ ಸತ್ಯ
ರಕ್ತದಲ್ಲಿನ ಸಕ್ಕರೆ ಮಟ್ಟ ಅಥವಾ ಬ್ಲಡ್ ಶುಗರ್ ಹೆಚ್ಚಾಗಿದ್ದಾಗ ಅದನ್ನು ನಿಯಂತ್ರಣ ದಲ್ಲಿಯೇ ಉಳಿಸುವ ಆಹಾರವನ್ನು ಸೇವಿಸಬೇಕಾಗುತ್ತದೆ.ಇಲ್ಲವಾದರೆ ಬ್ಲಡ್ ಶುಗರ್ ಹೆಚ್ಚಳವಾಗಿ ಬೇರೆ ಬೇರೆ ರೋಗಗಳಿಗೆ ಕಾರಣವಾಗಬಹುದು.
ಕಿತ್ತಳೆ ಹಣ್ಣಿನಂತೆಯೇ ಕಂಡು ಬರುವ ಚಕೋತಾ ಹಣ್ಣು ಮಧುಮೇಹವನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತದೆ.ಈ ಹಣ್ಣು ಬಿಳಿ - ಗುಲಾಬಿ, ಗುಲಾಬಿ -ಕೆಂಪು ಅಥವಾ ಕೆಂಪು ತಿರುಳುಗಳೊಂದಿಗೆ ಕಂಡುಬರುತ್ತದೆ.
ಈ ಹಣ್ಣಿನಲ್ಲಿ ವಿಟಮಿನ್ ಸಿ,ಉತ್ಕರ್ಷಣ ನಿರೋಧಕಗಳು ಮತ್ತು ಅಪಾರ ಪ್ರಮಾಣದ ಫೈಬರ್ ಅಡಗಿದೆ. ಕೆಂಪು ಗುಲಾಬಿ ಬಣ್ಣ ಹೊಂದಿರುವ ಚಕೊತಾ ಹೆಚ್ಚಿನ ಪ್ರಮಾಣದ ಲೈಕೋಪೀನ್ ಅನ್ನು ಹೊಂದಿರುತ್ತದೆ. ಇದು ಜೀವಕೋಶಗಳಿಗೆ ನೈಸರ್ಗಿಕ ಅಗತ್ಯ ಪೋಷಕಾಂಶವಾಗಿದೆ.
ಚಕೊತಾ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಹಣ್ಣು. ಇದರಲ್ಲಿರುವ GI ಸುಮಾರು 25. ಹಾಗಾಗಿ ಈ ಹಣ್ಣು ರಕ್ತದಲ್ಲಿನ ಸಕ್ಕರೆಯನ್ನು ಏರಲು ಬಿಡುವುದಿಲ್ಲ.
ಒಂದು ಅಧ್ಯಯನದ ಪ್ರಕಾರ ಊಟಕ್ಕೆ 15 ನಿಮಿಷ ಮೊದಲು ಚಕೊತಾ ಹಣ್ಣಿನ ತಿರುಳನ್ನು ಸೇವಿಸಿದರೆ ಆಹಾರ ಸೇವನೆ ನಂತರವೂ ಬ್ಲಡ್ ಶುಗರ್ ಹೆಚ್ಚಾಗುವುದಿಲ್ಲ ಎನ್ನಲಾಗಿದೆ. ಇದು ಇನ್ಸುಲಿನ್ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಇದು ಬ್ಲಡ್ ಶುಗರ್ ಕಂಟ್ರೋಲ್ ಮಾಡುವುದರ ಜೊತೆಗೆ ಕೊಲೆಸ್ಟ್ರಾಲ್, ಕರುಳಿನ ಕ್ಯಾನ್ಸರ್ ಅಪಾಯವನ್ನು ಕೂಡಾ ಕಡಿಮೆ ಮಾಡುತ್ತದೆ. ನಿತ್ಯ ಚಕೊತಾ ಹಣ್ಣು ಸೇವಿಸಿದರೆ LDL ಅಥವಾ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು 15.5% ರಷ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಕೂಡಾ ಕಡಿಮೆ ಮಾಡುತ್ತದೆ.
ಪ್ರತಿ ಊಟಕ್ಕೂ ಮೊದಲು ಈ ಹಣ್ಣನ್ನು ತಿಂದರೆ ಅಥವಾ ಇದರ ಜ್ಯೂಸ್ ಸೇವಿಸಿದರೆ ತೂಕ ಕಳೆದುಕೊಳ್ಳುವ ಪ್ರಕ್ರಿಯೆ ಕೂಡಾ ವೇಗವಾಗಿ ನಡೆಯುತ್ತದೆ.
ಸೂಚನೆ :ಈ ಮೇಲಿನ ಲೇಖನವು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ, ZEE NEWS ಅದನ್ನು ಖಚಿತಪಡಿಸುವುದಿಲ್ಲ