ರಾತ್ರಿ ಊಟಕ್ಕೆ ಈ ತರಕಾರಿ ತಿನ್ನಿ!ಬ್ಲಡ್ ಶುಗರ್ ನಾರ್ಮಲ್ ಆಗುವುದು ಖಚಿತ ! ತಿಂಗಳವರೆಗೆ ನಿಯಂತ್ರಣದಲ್ಲಿಯೇ ಇರುವುದು ರಕ್ತದ ಸಕ್ಕರೆ !
ಮಧುಮೇಹ ಇದ್ದಾಗ ಮೊದಲು ಮಾಡಬೇಕಾದ ಕೆಲಸವೆಂದರೆ ಸೇವಿಸುವ ಆಹಾರದ ಬಗ್ಗೆ ಕಾಳಜಿ ವಹಿಸುವುದು.ಇಲ್ಲವಾದರೆ ಬ್ಲಡ್ ಶುಗರ್ ಏರುಪೇರು ಆಗುವುದು ಖಂಡಿತಾ.
ಕೆಲವು ಆಹಾರ ಸೇವನೆ ಮಾಡುವುದರಿಂದ ಬ್ಲಡ್ ಶುಗರ್ ಥಟ್ ಅಂತ ಇಳಿದು ಬಿಡುತ್ತದೆ.ಅಂಥಹ ಆಹಾರ ಪದಾರ್ಥ ಸೇವಿಸುವುದರಿಂದ ಶುಗರ್ ಯಾವತ್ತಿಗೂ ನಾರ್ಮಲ್ ಆಗಿ ಉಳಿಯುತ್ತದೆ.
ಪುಟ್ಟ ತರಕಾರಿಯಾಗಿರುವ ತೊಂಡೆಕಾಯಿ ಸೇವನೆ ಶುಗರ್ ಅನ್ನು ನಾರ್ಮಲ್ ಮಾಡುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ಶುಗರ್ ನಿಯಂತ್ರಣ ಮಾಡುವ ಅಂಶಗಳು ತೊಂಡೆಕಾಯಿಯಲ್ಲಿ ಕಂಡು ಬರುತ್ತದೆ. ಕ್ಯಾಲ್ಸಿಯಂ,ವಿಟಮಿನ್ ಬಿ1, ವಿಟಮಿನ್ ಬಿ2,ವಿಟಮಿನ್ ಸಿ,ವಿಟಮಿನ್ ಎ, ಪೊಟ್ಯಾಸಿಯಮ್ ಮತ್ತು ನಾರಿನಂಶದಂತಹ ಗುಣಗಳು ಶುಗರ್ ಅನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಹಾಯ ಮಾಡುತ್ತದೆ.
ತೊಂಡೆಕಾಯಿಯಲ್ಲಿ ಹೇರಳವಾದ ಫೈಬರ್ ಅಂಶವಿದ್ದು,ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.ಶುಗರ್ ಕಡಿಮೆಯಾಗಲು ಇದೂ ಒಂದು ಕಾರಣ.
ತೊಂಡೆಕಾಯಿಯ ಗ್ಲೈಸೆಮಿಕ್ ಇಂಡೆಕ್ಸ್ ಕೂಡಾ ಕಡಿಮೆ.ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಶಾಶ್ವತವಾಗಿ ನಿಯಂತ್ರಿಸಲು ಸಹಾಯ ಮಾಡುತ್ತದೆ.
ಈ ತರಕಾರಿಯನ್ನು ಹೀಗೆಯೇ ತಿನ್ನಬೇಕು ಎನ್ನುವ ನಿಯಮವಿಲ್ಲ.ನಿಮ್ಮ ಅನುಕೂಲಕ್ಕೆ ತಕ್ಕಂತೆ ಹೇಗೆ ಬೇಕಾದರೂ ಸೇವಿಸಬಹುದು.ಆದರೆ ಎಣ್ಣೆ,ಮಸಾಲೆ ಕಡಿಮೆಯಿದ್ದರೆ ಸಾಕು.
ಇನ್ನು ರಾತ್ರಿ ಊಟಕ್ಕೆ ತೊಂಡೆಕಾಯಿ ಸೇವಿಸಿದರೆ ಇದು ಬೆಳಗ್ಗೆಯಷ್ಟರಲ್ಲಿ ಶುಗರ್ ಅನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರುತ್ತದೆ ಎನ್ನಲಾಗಿದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ