ಈ ರೋಗಗಳನ್ನು ಬುಡ ಸಮೇತ ಕಿತ್ತೆಸೆಯುವುದು ಒಂದು ತುಂಡು ಬೆಲ್ಲ !
ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುವಲ್ಲಿ ಬೆಲ್ಲ ಮಹತ್ತರ ಪಾತ್ರ ವಹಿಸುತ್ತದೆ. ಪ್ರತಿ ನಿತ್ಯ ಒಂದು ತುಂಡು ಬೆಲ್ಲ ಸೇವಿಸುತ್ತಾ ಬಂದರೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.
ಬೆಲ್ಲ ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಬೆಲ್ಲ ಪ್ರಮುಖ ಪಾತ್ರ ವಹಿಸುತ್ತದೆ. ಚಳಿಗಾಲದಲ್ಲಿ ಜನರು ಹೆಚ್ಚು ಬೆಲ್ಲವನ್ನು ಸೇವಿಸುತ್ತಾರೆ.
ಬೆಲ್ಲದಲ್ಲಿ ಕ್ಯಾಲ್ಸಿಯಂ, ರಂಜಕ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್‌ನಂತಹ ಸಾಕಷ್ಟು ಪೋಷಕಾಂಶಗಳು ಕಂಡು ಬರುತ್ತವೆ. ಇದು ದೇಹವನ್ನು ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಮೂಳೆಗಳನ್ನು ಸದೃಢವಾಗಿ ಇಡುತ್ತದೆ.
ಚಳಿಗಾಲದಲ್ಲಿ ಬಾಧಿಸುವ ನೆಗಡಿ ಮತ್ತು ಕೆಮ್ಮಿನಿಂದ ಮುಕ್ತಿ ಪಡೆಯಲು ಬೆಲ್ಲ ಸೇವಿಸಬಹುದು.
ಚರ್ಮವನ್ನು ಸ್ವಚ್ಛವಾಗಿಡಲು ಮತ್ತು ಮುಖದ ಕಾಂತಿ ಹೆಚ್ಚಿಸಲು ಬೆಳ್ಳ ಸಹಕಾರಿ. ಮಾತ್ರವಲ್ಲ ಕೀಲು ನೋವಿನ ಸಮಸ್ಯೆಯನ್ನು ಕೂಡಾ ಇದು ನಿವಾರಿಸುತ್ತದೆ.