ಈ ಎಲೆಯ ಚಹಾ ಕುಡಿದರೆ ದೇಹ ಸಣ್ಣಗಾಗುವುದರ ಜೊತೆಗೆ ನಿಯಂತ್ರಣದಲ್ಲಿರುತ್ತದೆ ಶುಗರ್
ಹುಣಸೆ ಎಲೆಗಳನ್ನು ನೀರಿನಲ್ಲಿ ಹಾಕಿ ಕುದಿಸಿ. ಅದಕ್ಕೆ ಅರಿಶಿನ, ಶುಂಠಿ ಮತ್ತು 2-3 ಪುದೀನಾ ಎಲೆಗಳನ್ನು ಸೇರಿಸಿ. ಈ ಎಲ್ಲಾ ವಸ್ತುಗಳನ್ನು ಚೆನ್ನಾಗಿ ಕುದಿಸಿದ ಮೇಲೆ ಫಿಲ್ಟರ್ ಮಾಡಿ. ಈಗ ಜೇನುತುಪ್ಪ ಬೆರೆಸಿದ ಉಗುರುಬೆಚ್ಚಗಿನ ಚಹಾವನ್ನು ಕುಡಿಯಿರಿ.
ಹುಣಸೆ ಎಲೆಗಳ ಚಹಾವು ತೂಕ ನಷ್ಟಕ್ಕೆ ಪ್ರಯೋಜನಕಾರಿಯಾಗಿದೆ. ಈ ಚಹಾದಲ್ಲಿ ಸ್ಥೂಲಕಾಯ ವಿರೋಧಿ ಗುಣಗಳು ಕಂಡುಬರುತ್ತವೆ. ಅವು ಚಯಾಪಚಯವನ್ನು ಹೆಚ್ಚಿಸುತ್ತದೆ. ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಹುಣಸೆ ಎಲೆಗಳಲ್ಲಿ ಆಂಟಿಆಕ್ಸಿಡೆಂಟ್‌ಗಳು ಮತ್ತು ಫ್ಲೇವನಾಯ್ಡ್‌ಗಳು ಇರುತ್ತವೆ. ಇವು ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೇ ಮಾಡಲು ಸಹಾಯ ಮಾಡುತ್ತದೆ. ಈ ಚಹಾವು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ.
ಹುಣಸೆ ಎಲೆಗಳ ಚಹಾವನ್ನು ಕುಡಿಯುವುದು ಜೀರ್ಣಾಂಗ ವ್ಯವಸ್ಥೆಗೆ ಪ್ರಯೋಜನಕಾರಿಯಾಗಿದೆ. ಇದನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ.
ಹುಣಸೆ ಎಲೆಗಳಲ್ಲಿ ಉತ್ಕರ್ಷಣ ನಿರೋಧಕಗಳು ಇರುತ್ತವೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹುಣಸೆ ಎಲೆಗಳ ಚಹಾ ಕುಡಿಯುವುದರಿಂದ ಶೀತ ಮತ್ತು ಜ್ವರದಂತಹ ಸಾಂಕ್ರಾಮಿಕ ರೋಗಗಳ ಅಪಾಯ ಕೂಡಾ ಕಡಿಮೆಯಾಗುತ್ತದೆ.