ಆತಂಕ, ಒತ್ತಡದಿಂದ ಪರಿಹಾರಕ್ಕಾಗಿ ಚಳಿಗಾಲದಲ್ಲಿ ರಾತ್ರಿ ಮಲಗುವ ಮುನ್ನ ಇವುಗಳನ್ನು ತಪ್ಪದೇ ಸೇವಿಸಿ
ನೀವು ಸದೃಢವಾಗಿರಲು ಉತ್ತಮವಾಗಿರುವ ಆಹಾರಗಳ ಸೇವನೆ ಬಹಳ ಮುಖ್ಯ. ಅಂತೆಯೇ, ಆತಂಕ, ಒತ್ತಡಗಳಿಂದ ಪರಿಹಾರವನ್ನು ಪಡೆಯಲು ಸಹ ಕೆಲವು ಆಹಾರಗಳನ್ನು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಆರೋಗ್ಯ ತಜ್ಞರ ಪ್ರಕಾರ, ಚಳಿಗಾಲದಲ್ಲಿ ರಾತ್ರಿ ಮಲಗುವ ಮೊದಲು ಕೆಲವು ಆಹಾರಗಳನ್ನು ಸೇವಿಸುವುದರಿಂದ ಆತಂಕ, ಒತ್ತಡದಂತಹ ಸಮಸ್ಯೆಗಳಿಂದ ದೂರ ಉಳಿಯಬಹುದು ಎಂದು ಹೇಳಲಾಗುತ್ತದೆ. ಅಂತಹ ಆಹಾರಗಳಾವುವೆಂದರೆ...
ಬಾದಾಮಿ: ಪ್ರತಿದಿನ ಮಲಗುವ ಮೊದಲು ಒಂದೆರಡು ಬಾದಾಮಿ ತಿನ್ನುವುದರಿಂದ ಉತ್ತಮ ನಿದ್ರೆಯನ್ನು ಪಡೆಯಬಹುದು. ಮಾತ್ರವಲ್ಲ, ಇದರೊಂದಿಗೆ ಒತ್ತಡದಿಂದಲೂ ಪರಿಹಾರ ಪಡೆಯಬಹುದು ಎನ್ನಲಾಗುತ್ತದೆ.
ಅರಿಶಿನದ ಹಾಲು: ರಾತ್ರಿ ಮಲಗುವ ಮೊದಲು ಒಂದು ಲೋಟ ಬೆಚ್ಚಗಿನ ಅರಿಶಿನದ ಹಾಲು ಕುಡಿಯುವುದರಿಂದ ಒಳ್ಳೆಯ ನಿದ್ರೆ ಬರುತ್ತದೆ. ಜೊತೆಗೆ ಇದು ಮನಸ್ಸಿನ ಉದ್ವಿಗ್ನತೆಯನ್ನು ನಿವಾರಿಸುವಲ್ಲಿಯೂ ಪ್ರಯೋಜನಕಾರಿಯಾಗಿದೆ.
ಬಾಳೆಹಣ್ಣು: ಬಾಳೆಹಣ್ಣು ಕಾರ್ಬೋಹೈಡ್ರೇಟ್‌ಗಳಲ್ಲಿ ಸಮೃದ್ಧವಾಗಿದೆ. ನಿಯಮಿತವಾಗಿ ರಾತ್ರಿ ವೇಳೆ ಊಟದ ಬಳಿಕ ಬಾಳೆಹಣ್ಣು ಸೇವಿಸುವುದರಿಂದ ಹೊಟ್ಟೆಯ ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಪರಿಹಾರ ದೊರೆಯುತ್ತದೆ. ಇದು ಮನಸ್ಸನ್ನು ಶಾಂತವಾಗಿರಲು ಕೂಡ ಸಹಕಾರಿ ಎನ್ನಲಾಗುತ್ತದೆ.
ಜೇನು: ಆಯುರ್ವೇದದ ಪ್ರಕಾರ, ರಾತ್ರಿ ಮಲಗುವ ಮೊದಲು ಜೇನು ತುಪ್ಪವನ್ನು ತಿನ್ನುವುದನ್ನು ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಜೇನುತುಪ್ಪ ಸೇವನೆಯ ಧನಾತ್ಮಕ ಪರಿಣಾಮವಾಗಿ ಒತ್ತಡದಿಂದಲೂ ಮುಕ್ತಿ ದೊರೆಯುತ್ತದೆ ಎಂದು ಹೇಳಲಾಗುತ್ತದೆ.
ಕಿಚಡಿ: ರಾತ್ರಿ ವೇಳೆ ಹಗುರವಾದ ಆಹಾರಗಳ ಸೇವನೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ನಿಮಗೆ ತಿಳಿದೇಯಿದೆ. ರಾತ್ರಿ ವೇಳೆ ಕಿಚಡಿ ತಿನ್ನುವುದರಿಂದು ಇದು ಹೊಟ್ಟೆಗೆ ಮಾತ್ರವಲ್ಲದೆ ಮನಸ್ಸಿಗೂ ಹಿತವಾದ ಭಾವನೆಯನ್ನುಂಟು ಮಾಡುತ್ತದೆ. ಒತ್ತಡವನ್ನು ಕಡಿಮೆ ಮಾಡಲು ಸಹಾಯಕವಾಗಿದೆ ಎನ್ನಲಾಗುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.