ಈ ಆಹಾರ ಸೇವಿಸಿದರೆ ಸಾಕು ಜೀವನ ಪರ್ಯಂತ ಇರುವುದಿಲ್ಲ ಕೂದಲು ಉದುರುವ ಸಮಸ್ಯೆ !

Wed, 15 Nov 2023-12:48 pm,

ಕೂದಲು ಉದುರುವಿಕೆಯಿಂದ ಬಳಲುತ್ತಿರುವವರು ತಮ್ಮ ಆಹಾರದಲ್ಲಿ ಮೆಂತ್ಯೆಯನ್ನು ಸೇರಿಸಿಕೊಳ್ಳಬೇಕು. ಮೆಂತ್ಯೆ ಬೀಜಗಳನ್ನು ತರಕಾರಿಗಳು ಮತ್ತು ದ್ವಿದಳ ಧಾನ್ಯಗಳಿಗೆ ಸೇರಿಸಬಹುದು. ಮೆಂತ್ಯೆ ಬೀಜಗಳು ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ ಮತ್ತು ಕೂದಲು ಉದುರುವಿಕೆಯನ್ನು ತಡೆಯುತ್ತದೆ.

ಕೂದಲು ಉದುರುವುದನ್ನು ತಡೆಯಲು ನೆಲ್ಲಿಕಾಯಿ ಬೆಸ್ಟ್ ಮನೆ ಮದ್ದು.   ನೆಲ್ಲಿಕಾಯಿಯನ್ನು ಬೇಯಿಸಿ ತಿನ್ನಬಹುದು. ಅಥವಾ ಹಸಿ ನೆಲ್ಲಿಕಾಯಿಯನ್ನು ತಿನ್ನಬಹುದು. ಇದು ತೂಕವನ್ನು ಕಡಿಮೆ ಮಾಡಲು ತುಂಬಾ ಪರಿಣಾಮಕಾರಿಯಾಗಿದೆ.  

ನುಗ್ಗೆ ಸೊಪ್ಪಿನ  ಪುಡಿ ಕೂದಲು ಉದುರುವುದನ್ನು ತಡೆಯುತ್ತದೆ. ನುಗ್ಗೆ ಸೊಪ್ಪಿನ ಪುಡಿಯಲ್ಲಿರುವ ಪೋಷಕಾಂಶಗಳು ಕೂದಲಿಗೆ ತುಂಬಾ ಸಹಕಾರಿ. ಕೂದಲಿನ ಸಮಸ್ಯೆಯಿಂದ ಮುಕ್ತಿ ಹೊಂದಲು ನುಗ್ಗೆ ಸೊಪ್ಪಿನ ಪುಡಿಯನ್ನು ಸೇವಿಸಬೇಕು.   

ಕೂದಲಿನ ಹಾನಿಯನ್ನು ಕಡಿಮೆ ಮಾಡಲು ಜಾಯಿಕಾಯಿ ತುಂಬಾ ಸಹಕಾರಿ. ದಪ್ಪ, ಕಪ್ಪು ಮತ್ತು ಹೊಳೆಯುವ ಕೂದಲನ್ನು ಪಡೆಯಲು, ಪ್ರತಿದಿನ ಜಾಯಿಕಾಯಿಯನ್ನು ಸೇವಿಸಬೇಕು.  

ಒಣ ಹಣ್ಣುಗಳಲ್ಲಿ, ಆಕ್ರೋಟ್ ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಪ್ರತಿನಿತ್ಯ ವಾಲ್ ನಟ್ಸ್ ತಿನ್ನುವುದರಿಂದ ಕೂದಲು ದಟ್ಟವಾಗಿ ಬೆಳೆಯುವುದು ಮಾತ್ರವಲ್ಲ ಕಪ್ಪಾಗುತ್ತದೆ. ಇದರಲ್ಲಿ ಒಮೆಗಾ 3 ಫ್ಯಾಟಿ ಆಸಿಡ್ ಇದ್ದು ಕೂದಲು ಉದುರುವುದನ್ನು ತಡೆಯುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link