ಫಿಟ್ ಆಗಿರಲು ನಿಮ್ಮ ರಾತ್ರಿ ಭೋಜನದಲ್ಲಿರಲಿ ಈ ತರಕಾರಿಗಳು
ಉತ್ತಮ ಆರೋಗ್ಯಕ್ಕೆ ಸೋರೆಕಾಯಿ ಎಷ್ಟು ಪ್ರಯೋಜನಕಾರಿ ಎಂದು ನಿಮಗೆ ತಿಳಿದೇ ಇದೆ. ನಿಮ್ಮ ರಾತ್ರಿ ಭೋಜನದಲ್ಲಿ ಸೋರೆಕಾಯಿ ತಿನ್ನುವುದರಿಂದ ದುಪ್ಪಟ್ಟು ಪ್ರಯೋಜನಗಳನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ.
ಎಲ್ಲಾ ಋತುವಿನಲ್ಲೂ ಬಹಳ ಸುಲಭವಾಗಿ ಲಭ್ಯವಿರುವ ಹಣ್ಣು ಬಾಳೆಹಣ್ಣು. ತೂಕ ಇಳಿಕೆಗೆ ಬಾಳೆಹಣ್ಣು ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ರಾತ್ರಿ ವೇಳೆ ಊಟದ ಸಮಯದಲ್ಲಿ ಬಾಳೆ ಹಣ್ಣನ್ನು ತಿನ್ನುವುದರಿಂದ ಹೊಟ್ಟೆಯ ಕೊಬ್ಬು ಕರಗುತ್ತದೆ ಎನ್ನಲಾಗುವುದು.
ಪಾಲಕ್ ಸೊಪ್ಪಿನಲ್ಲಿ ಕಬ್ಬಿಣದಂಶವಿರುವುದರಿಂದ ಇದನ್ನು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರಿಗೆ ಪಾಲಕ್ ಸೊಪ್ಪನ್ನು ವರದಾನ ಎಂದು ಪರಿಗಣಿಸಲಾಗುತ್ತದೆ. ರಾತ್ರಿ ಭೋಜನದಲ್ಲಿ ಪಾಲ ಸೊಪ್ಪನ್ನು ನಿಮ್ಮ ಭಾಗವಾಗಿಸುವುದರಿಂದ ಹೆಚ್ಚಿನ ಪ್ರಯೋಜನ ಲಭ್ಯವಾಗುತ್ತದೆ.
ತೂಕ ಇಳಿಕೆಗಾಗಿ ಪ್ರಯತ್ನಿಸುತ್ತಿರುವವರು ನಿತ್ಯ ನಿಮ್ಮ ರಾತ್ರಿ ಭೋಜನದಲಿ ಬ್ರೊಕೊಲಿಯನ್ನು ತಿನ್ನಲು ಪ್ರಯತ್ನಿಸಬಹುದು.
ಸೌತೆಕಾಯಿಯನ್ನು ಹಲವು ರೋಗಗಳಿಗೆ ರಾಮಬಾಣ ಎಂದು ಪರಿಗಣಿಸಲಾಗಿದೆ. ನಿತ್ಯ ರಾತ್ರಿ ಭೋಜನದ ವೇಳೆ ಸೌತ್ಕಾಯಿನನು ಸೇವಿಸುವುದರಿಂದ ಇದು ತೂಕ ಇಳಿಕೆಗೂ ಕೂಡ ಸಹಕಾರಿ ಎಂದು ಹೇಳಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.