ತೂಕ ಇಳಿಕೆಗೆ ರಾಮಬಾಣ ಈ ಬೆಟ್ಟದ ನೆಲ್ಲಿಕಾಯಿ ಮುರಬ್ಬ
1. ಕಣ್ಣಿನ ಆರೋಗ್ಯಕ್ಕೆ ಆಮ್ಲಾ ತುಂಬಾ ಲಾಭಕಾರಿಯಾಗಿದೆ. ಇನ್ನೊಂದೆಡೆ ಒಂದು ವೇಳೆ ನೀವು ಖಾಲಿ ಹೊಟ್ಟೆ ಬೆಟ್ಟದ ನೆಲ್ಲಿಕಾಯಿಯ ಮುರಬ್ಬ ಸೇವಿಸಿದರೆ, ನಿಮ್ಮ ಕಣ್ಣಿನ ಕಾಂತಿ ಹೆಚ್ಚಾಗುತ್ತದೆ.
2. ನೆಲ್ಲಿಕಾಯಿ ಮುರಬ್ಬ ತಿನ್ನುವುದರಿಂದ ಕೂದಲಿಗೆ ಬಹಳಷ್ಟು ಪ್ರಯೋಜನಗಳು ಸಿಗುತ್ತವೆ.ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಮುರ್ದಬ್ಬ ಸೇವಿಸಿದರೆ ಕೂದಲು ಕಪ್ಪಾಗಿ ದಟ್ಟವಾಗುತ್ತದೆ.
3. ಬೆಟ್ಟದ ನೆಲ್ಲಿಕಾಯಿ ಮುರಬ್ಬ ಹೃದ್ರೋಗಿಗಳಿಗೆ ತುಂಬಾ ಲಾಭದಾಯಕವಾಗಿದೆ. ದಿನದಿತ್ಯ ಇದನ್ನು ನೀವು ಸೇವಿಸಿದರೆ, ನಿಮ್ಮಲ್ಲಿ ಹೃದ್ರೋಗಗಳ ಅಪಾಯ ಕಡಿಮೆಯಾಗುತ್ತದೆ.
4. ಬೆಟ್ಟದ ನೆಲ್ಲಿಕಾಯಿ ಮುರಬ್ಬ ತೂಕ ಇಳಿಕೆಗೂ ಕೂಡ ಸಹಕಾರಿಯಾಗಿದೆ. ಈ ನೆಲ್ಲಿಕಾಯಿಯಲ್ಲಿ ಹೇರಳ ಪ್ರಮಾಣದಲ್ಲಿ ಅಮೈನೊ ಆಸಿಡ್ ಗಳು ಕಂಡುಬರುತ್ತವೆ. ಇವು ನಮ್ಮ ಶರೀರದ ಚಯಾಪಚಯ ಕ್ರಿಯಯನ್ನು ಸುಧಾರಿಸುತ್ತವೆ.
5. ಆಮ್ಲಾ ಮುರಬ್ಬ ತ್ವಚೆಯ ಆರೋಗ್ಯಕ್ಕೆ ತುಂಬಾ ಲಾಭಕಾರಿಯಾಗಿದೆ. ನಿತ್ಯ ಬೆಳಗ್ಗೆ ಬೆಟ್ಟದ ನೆಲ್ಲಿಕಾಯಿ ಮುರಬ್ಬ ಸೇವಿಸುವುದರಿಂದ ತ್ವಚೆಯಲ್ಲಿರುವ ಸುಕ್ಕುಗಳು, ಮೊಡವೆಗಳು ಹಾಗೂ ಚರ್ಮ ಕಲೆಗಳು ನಿವಾರಣೆಯಾಗುತ್ತವೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)