ಈ ಸ್ಟೋನ್ ಬ್ರೇಕರ್ ಎಲೆಯನ್ನು ಒಮ್ಮೆ ಬಳಸಿದರೆ ಸಾಕು ಕಿಡ್ನಿ ಸ್ಟೋನ್ ಪುಡಿಯಾಗಿ ಮೂತ್ರದೊಂದಿಗೆ ಹೊರ ಬರುವುದು!ನೋವಿನಿಂದಲೂ ಸಿಗುವುದು ಮುಕ್ತಿ
ಕಿಡ್ನಿ ಸ್ಟೋನ್ ಇದ್ದಾಗ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ.ಮೂತ್ರ ಪಿಂಡದ ಕಲ್ಲುಗಳ ಗಾತ್ರ ದೊಡ್ಡದಾದಂತೆ ಆಪರೇಶನ್ ಮೂಲಕ ಸ್ಟೋನ್ ಅನ್ನು ಹೊರ ತೆಗೆಯುವ ಸಲಹೆ ನೀಡಲಾಗುತ್ತದೆ.
ಕಿಡ್ನಿಸ್ಟೋನ್ ಇದ್ದವರು ಈ ಎಲೆಯನ್ನು ಬಳಸಿದರೆ ಆಪರೇಶನ್ ಇಲ್ಲದೆ ಕಿಡ್ನಿ ಸ್ಟೋನ್ ಅನ್ನು ಕಿಡ್ನಿಯಿಂದ ಜಾರಿ ಹೊರ ಹೋಗುವಂತೆ ಮಾಡುತ್ತದೆ.
ಈ ಎಲೆಯನ್ನು ಸ್ಟೋನ್ ಬ್ರೇಕರ್ ಎಂದು ಕರೆಯಲಾಗುತ್ತದೆ.ಕಾಡು ಬಸಳೆ,ಪತ್ರ ಜೀವ,ಗಂಡು ಕಾಳಿಂಗ,ಅಸ್ತಿ ಬಕ್ಷ,ಪರ್ಣ ಬೀಜ ಎಂದು ಬೇರೆ ಬೇರೆ ಹೆಸರುಗಳಲ್ಲಿ ಕರೆಯಲಾಗುತ್ತದೆ.
ಈ ಎಲೆಯಲ್ಲಿ ಫೀನೈಲ್ ಆಲ್ಕೈಲ್ ಈಥರ್ ಬಯೋಆಕ್ಟಿವ್ ಸಂಯುಕ್ತಗಳು ಹೇರಳವಾಗಿ ಕಂಡು ಬರುತ್ತವೆ.ಇದು ಕಿಡ್ನಿ ಸ್ಟೋನ್ ಕರಗಳು ಸಹಾಯ ಮಾಡುತ್ತದೆ.
ಈ ಎಲೆಗಳನ್ನು ಒಂದು ಲೋಟ ನೀರಿನಲ್ಲಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.ನಂತರ, ಇದನ್ನು ಫಿಲ್ಟರ್ ಮಾಡಿ ಕುಡಿಯಿರಿ.ಒಂದರಿಂದ ಎರಡು ತಿಂಗಳ ಕಾಲ ನಿಯಮಿತವಾಗಿ ಈ ಎಲೆಯ ಜ್ಯೂಸ್ ಕುಡಿಯುವುದರಿಂದ ಸ್ಟೋನ್ ಕರಗಿ ಹೋಗುತ್ತದೆ.
ಕಿಡ್ನಿ ಸ್ಟೋನ್ ನಿಂದಾಗಿ ಹೊಟ್ಟೆ ನೋವು ಜಾಸ್ತಿಯಾದರೆ ಈ ಎಲೆಯ ರಸದೊಂದಿಗೆ ಒಣ ಶುಂಠಿಯನ್ನು ಬೆರೆಸಿ ಸೇವಿಸಿ.ಇದು ದೇಹದಲ್ಲಿರುವ ಟಾಕ್ಸಿನ್‌ಗಳನ್ನು ಸಹ ತೆಗೆದುಹಾಕುತ್ತದೆ.
ಈ ಎಲೆಗಳನ್ನು ತವಾ ಮೇಲೆ ಹಾಕಿ ಸ್ವಲ್ಪ ಬಿಸಿ ಮಾಡಿ ಹಾಗೆಯೇ ಬಿಸಿ ನೀರಿನೊಂದಿಗೆ ಅಗಿದು ತಿಂದರೆ ಕಿಡ್ನಿಯಿಂದ ಸ್ಟೋನ್ ಹಾಗೆಯೇ ಜಾರಿ ದೇಹದಿಂದ ಹೊರ ಹೋಗುತ್ತದೆ.
ಸೂಚನೆ : ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. zee kannada news ಇದನ್ನು ಖಚಿತಪಡಿಸುವುದಿಲ್ಲ.