ಅರಶಿನವನ್ನು ಈ ರೀತಿ ಬಳಸಿದರೆ ಒಂದೇ ವಾರದಲ್ಲಿ ತೂಕ ಇಳಿಯುವುದು ಗ್ಯಾರಂಟಿ !

Tue, 20 Feb 2024-10:48 am,

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅರಿಶಿನ ನೀರನ್ನು ಕುಡಿಯುವುದರಿಂದ ಚಯಾಪಚಯ ಸುಧಾರಿಸುತ್ತದೆ. ಇದು ಹೊಟ್ಟೆಯಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಸುಡುವಲ್ಲಿ ಸಹಾಯ ಮಾಡುತ್ತದೆ. ಒಂದು ಲೋಟ ನೀರಿನಲ್ಲಿ ಹಸಿ ಅರಿಶಿನ ತುಂಡುಗಳನ್ನು ಸೇರಿಸಿ ಚೆನ್ನಾಗಿ ಕುದಿಸಿ. ಈ ನೀರು ಕುದ್ದು ಅರ್ಧದಷ್ಟಾದಾಗ ಫಿಲ್ಟರ್ ಮಾಡಿ.ನಂತರ ಅದಕ್ಕೆ ಸ್ವಲ್ಪ ನಿಂಬೆ ಅಥವಾ ಜೇನುತುಪ್ಪ ಸೇರಿಸಿ ಸೇವಿಸಿ.   

ತೂಕ ಇಳಿಸಿಕೊಳ್ಳಲು ಅರಿಶಿನ ಮತ್ತು ಶುಂಠಿಯನ್ನು ಜೊತೆಯಾಗಿ ಸೇವಿಸಬಹುದು. ಈ ಎರಡರ ಮಿಶ್ರಣವು ದೇಹದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಕೊಬ್ಬನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ. ಒಂದು ಕಪ್ ನೀರಿಗೆ ಒಂದು ಇಂಚು ಶುಂಠಿ ಮತ್ತು ಎರಡು ಚಿಟಿಕೆ ಅರಿಶಿನ ಹಾಕಿ ಕುದಿಸಿ. ಈ ನೀರನ್ನು ಚಹಾದಂತೆ ಸೇವಿಸಿ. 

ಅರಿಶಿನ ಮತ್ತು ಜೇನುತುಪ್ಪದ ಮಿಶ್ರಣವು ತೂಕ ನಷ್ಟದಲ್ಲಿ ಪರಿಣಾಮಕಾರಿಯಾಗಿದೆ. ಒಂದು ಬಟ್ಟಲಿನಲ್ಲಿ ಒಂದು ಚಮಚ ಜೇನುತುಪ್ಪವನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಹಸಿ ಅರಿಶಿನ ಬೆರೆಸಿ ತಿನ್ನಿ.   

ಇನ್ನು ಅರಿಶಿನ ಹಾಲನ್ನು ಸೇವಿಸಿದರೂ ತೂಕ ನಷ್ಟಕ್ಕೆ ಸಹಾಯವಾಗುತ್ತದೆ. ಒಂದು ಲೋಟ ಬಿಸಿ ಹಾಲಿಗೆ ಒಂದು ಚಮಚ ಅರಿಶಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.ಪ್ರತಿ ರಾತ್ರಿ ಮಲಗುವ ಮುನ್ನ ಇದನ್ನು ಸೇವಿಸಿ.   

ಅರಿಶಿನದೊಂದಿಗೆ ಚಕ್ಕೆಯನ್ನು ಸೇವಿಸಿದರೂ ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.  ಇವೆರಡನ್ನು ಒಟ್ಟಿಗೆ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಬಹುದು. ಬಾಣಲೆಯಲ್ಲಿ ಒಂದು ಕಪ್ ನೀರನ್ನು ತೆಗೆದುಕೊಂಡು ಅದಕ್ಕೆ ಒಂದು ತುಂಡು ಚಕ್ಕೆ ಮತ್ತು ಚಿಟಿಕೆ ಅರಿಶಿನ ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಈ ನೀರನ್ನು ಫಿಲ್ಟರ್ ಮಾಡಿ ಸೇವಿಸಿ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದರಿಂದ  ತೂಕವನ್ನು ನಿಯಂತ್ರಣದಲ್ಲಿರುತ್ತದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link