ತೂಕ ಹೆಚ್ಚಳದಿಂದ ನಿಮ್ಮ ಲುಕ್ ಬದಲಾಗಿದೆಯೇ ? ನಿತ್ಯ ಈ ಒಂದು ವಸ್ತು ಸೇವಿಸಿ

Mon, 29 May 2023-5:18 pm,

ಭಾರತದ ಜನರು ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ತೂಕವನ್ನು ಹೆಚ್ಚಿಸಿಕೊಳ್ಳುತ್ತಾರೆ. ಬೊಜ್ಜು ಸಮಸ್ಯೆ ಇವರನ್ನು ಕಾಡುತ್ತದೆ.  ಇದು ದೀರ್ಘಾವಧಿಯಲ್ಲಿ ಅಧಿಕ ರಕ್ತದೊತ್ತಡ, ಹೃದ್ರೋಗ ಮತ್ತು ಮಧುಮೇಹದಂತಹ ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.  

ಹೊಟ್ಟೆ ಮತ್ತು ಸೊಂಟದ ಸುತ್ತಲೂ ಕೊಬ್ಬು ಹೆಚ್ಚಾಗಲು ಪ್ರಾರಂಭಿಸಿದಾಗ, ನಿಮ್ಮ ದೈನಂದಿನ ಆಹಾರವನ್ನು ಬದಲಾಯಿಸುವ ಸಮಯ ಎನ್ನುವುದನ್ನು ಅರ್ಥಮಾಡಿಕೊಳ್ಳಿ. ಪ್ರತಿನಿತ್ಯ ವಾಲ್ ನಟ್ಸ್ ತಿಂದರೆ ಕ್ರಮೇಣ ತೂಕ ಕಡಿಮೆಯಾಗುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು.

ಕಬ್ಬಿಣ, ಕ್ಯಾಲ್ಸಿಯಂ, ತಾಮ್ರ, ಪ್ರೋಟೀನ್, ಮೆಗ್ನೀಸಿಯಮ್, ಒಮೆಗಾ 3 ಕೊಬ್ಬಿನಾಮ್ಲಗಳು, ವಿಟಮಿನ್ ಗಳು ಮತ್ತು ರಂಜಕಗಳಂತಹ ಅಗತ್ಯ ಪೋಷಕಾಂಶಗಳು ವಾಲ್ನಟ್ ನಲ್ಲಿ ಕಂಡುಬರುತ್ತವೆ.  

ಒಮ್ಮೆ ವಾಲ್ ನಟ್ ತಿಂದರೆ ಹೆಚ್ಚು ಹೊತ್ತು ಹಸಿವಾಗುವುದಿಲ್ಲ. ಶಕ್ತಿಯೂ ಹಾಗೆಯೇ ಇರುತ್ತದೆ. ಇದರಿಂದಾಗಿ ಹೆಚ್ಚುತ್ತಿರುವ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ವಾಲ್‌ನಟ್ಸ್ ತಿನ್ನುವುದರಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಅದಕ್ಕಾಗಿಯೇ ವಿದ್ಯಾರ್ಥಿಗಳಿಗೆ ಇದನ್ನು ತಿನ್ನಲು ಸಲಹೆ ನೀಡುತ್ತಾರೆ.  

ನಿತ್ಯವೂ ವಾಲ್ ನಟ್ಸ್ ತಿಂದರೆ ಖಿನ್ನತೆ, ಉದ್ವೇಗ, ಒತ್ತಡದಂತಹ ಸಮಸ್ಯೆಗಳು ಬರುವುದಿಲ್ಲ.

ವಾಲ್ ನಟ್ಸ್ ತಿನ್ನುವುದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ ಮತ್ತು ಹೃದಯಾಘಾತವನ್ನು ತಡೆಯಬಹುದು. 

( ಸೂಚನೆ : ಈ ಲೇಖನವು ಸಾಮಾನ್ಯ ಮಾಹಿತಿಗಾಗಿ ಮಾತ್ರ. ಇದು ಯಾವುದೇ ಔಷಧಿ ಅಥವಾ ಚಿಕಿತ್ಸೆಗೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ವಿವರಗಳಿಗಾಗಿ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link