ಈ ಹಣ್ಣನ್ನು ಸೇವಿಸಿದ ತಕ್ಷಣ ಕರಗುವುದು ಮೂಳೆಗಳಲ್ಲಿ ಅಂಟಿ ಕೊಂಡಿರುವ ಯೂರಿಕ್ ಆಸಿಡ್ !ಕೀಲು ನೋವಿನಿಂದಲೂ ಸಿಗುವುದು ಮುಕ್ತಿ!
ಯೂರಿಕ್ ಆಸಿಡ್ ಸಮಸ್ಯೆಯಿಂದ ಮುಕ್ತಿ ಪಡೆಯಲು ಅನೇಕ ರೀತಿಯ ಔಷಧಿ ಸಿಗುತ್ತದೆ. ಆದರೆ ಕೆಲವೊಂದು ಮನೆ ಮದ್ದನ್ನು ಅನುಸರಿಸುವ ಮೂಲಕವೂ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಕಲ್ಲಂಗಡಿ ಸೇವನೆ ಮೂಲಕವೂ ಯೂರಿಕ್ ಆಸಿಡ್ ಅನ್ನು ಕರಗಿಸಬಹುದು.
ಕಲ್ಲಂಗಡಿ ಹಣ್ಣಿನಲ್ಲಿ ಸಿಟ್ರುಲಿನ್ ನಂತಹ ಪೋಷಕಾಂಶಗಳು ಇರುತ್ತವೆ.ಇದು ಯೂರಿಕ್ ಆಸಿಡ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.ಬೇಸಿಗೆಯಲ್ಲಿ ಪ್ರತಿದಿನ ಕಲ್ಲಂಗಡಿ ಜ್ಯೂಸ್ ಕುಡಿಯುವುದರಿಂದ ಯೂರಿಕ್ ಆಸಿಡ್ ಸಮಸ್ಯೆ ನಿವಾರಣೆಯಾಗುತ್ತದೆ.
ಕಲ್ಲಂಗಡಿ ಉತ್ತಮ ಪ್ರಮಾಣದ ನೀರನ್ನು ಹೊಂದಿರುತ್ತದೆ. ಇದರಿಂದಾಗಿ ಇದು ನಿಮ್ಮ ದೇಹದಲ್ಲಿ ಸಂಗ್ರಹವಾಗಿರುವ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ.ಇದು ದೇಹದಲ್ಲಿ ಪ್ಯೂರಿನ್ ಚಯಾಪಚಯವನ್ನು ವೇಗಗೊಳಿಸಿ ಅದನ್ನು ದೇಹದಿಂದ ಹೊರಹಾಕುತ್ತದೆ.
ಕಲ್ಲಂಗಡಿ ತಿಂದಾಗ, ಅದು ಹೊಟ್ಟೆಯಲ್ಲಿ ಜಲಸಂಚಯನವನ್ನು ಹೆಚ್ಚಿಸುವ ಮೂಲಕ ಚಯಾಪಚಯ ದರವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ನಿಮ್ಮ ದೇಹದಲ್ಲಿ ಪ್ರೋಟೀನ್ ಜೀರ್ಣಕ್ರಿಯೆಯ ವೇಗವು ಸರಿಯಾಗಿ ಆಗುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ಯೂರಿಕ್ ಆಸಿಡ್ ಹೆಚ್ಚಾಗುವುದಿಲ್ಲ.
ಮೂಳೆಗಳಲ್ಲಿ ಪ್ಯೂರಿನ್‌ಗಳು ಸಂಗ್ರಹವಾದಾಗ, ಅದು ಗೌಟ್‌ಗೆ ಕಾರಣವಾಗುತ್ತದೆ, ಇದು ಅತೀವ ನೋವನ್ನು ಉಂಟು ಮಾಡುತ್ತದೆ.ಕಲ್ಲಂಗಡಿ ದೇಹದಲ್ಲಿ ರಕ್ತ ಪರಿಚಲನೆ ಉತ್ತಮವಾಗಲು ಸಹಾಯ ಮಾಡುತ್ತದೆ. ಹೀಗಾದಾಗ ನೋವು ಕೂಡಾ ಕಡಿಮೆಯಾಗುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.