ದೊಡ್ಡ ದೊಡ್ಡ ಕಾಯಿಲೆಗಳನ್ನು ನಿಮ್ಮಿಂದ ದೂರ ಇರಿಸುತ್ತೆ ಒಂದು ಸೇಬು

Fri, 02 Oct 2020-11:58 am,

ನವದೆಹಲಿ: 'ಆಪಲ್ ಎ ಡೇ, ಕೀಪ್ಸ್ ಅ ಡಾಕ್ಟರ್ ಅವೇ' ಎಂದು ಹೇಳುವುದನ್ನು ನೀವು ಕೇಳಿರಬೇಕು. ಅಂದರೆ ಪ್ರತಿದಿನ ಸೇಬನ್ನು ತಿನ್ನುವುದು ನಿಮ್ಮನ್ನು ಎಲ್ಲಾ ಕಾಯಿಲೆಗಳಿಂದ ದೂರವಿರಿಸುತ್ತದೆ. ವಿವಿಧ ರೀತಿಯ ಪೋಷಕಾಂಶಗಳಿಂದ ತುಂಬಿದ ಸೇಬುಗಳನ್ನು ಸೇವಿಸುವುದರಿಂದ ನೀವು ಆರೋಗ್ಯವಂತರಾಗುತ್ತೀರಿ ಮತ್ತು ನಿಮ್ಮ ಜೀರ್ಣಕ್ರಿಯೆಯನ್ನು ಆರೋಗ್ಯವಾಗಿರು ಸಹಕಾರಿಯಾಗಿದೆ. ಸೇಬಿನ ಸೇವನೆಯು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸೇಬು ತಿನ್ನುವುದರ ಪ್ರಯೋಜನಗಳನ್ನು ತಿಳಿದ ನಂತರ ಅದನ್ನು ನಿಮ್ಮ ಬೆಳಿಗ್ಗೆ ಆಹಾರದಲ್ಲಿ (Morning diet) ಸೇರಿಸಲು ನೀವು ಎಂದಿಗೂ ಮರೆಯುವುದಿಲ್ಲ. ಟ್ರೈಟರ್ಪೆನಾಯ್ಡ್ಸ್ ಸಂಯುಕ್ತವು ಸೇಬು ಸಿಪ್ಪೆಯಲ್ಲಿ ಕಂಡುಬರುತ್ತದೆ. ಈ ಸಂಯುಕ್ತವು ಕ್ಯಾನ್ಸರ್ ಉಂಟುಮಾಡುವ ಕೋಶಗಳನ್ನು ನಾಶಮಾಡಲು ಕೆಲಸ ಮಾಡುತ್ತದೆ.

ಸೇಬು ತಿನ್ನುವ ಮೂಲಕ, ನಿಮ್ಮ ಹಸಿವನ್ನು ದೀರ್ಘಕಾಲದವರೆಗೆ ನಿಯಂತ್ರಿಸಲಾಗುತ್ತದೆ ಮತ್ತು ದೇಹವು ಜೀರ್ಣಕ್ರಿಯೆಗೆ ಸಾಕಷ್ಟು ಸಮಯವನ್ನು ಪಡೆಯುತ್ತದೆ. ಇದನ್ನು ನಿರಂತರವಾಗಿ ಮಾಡುವುದರಿಂದ ನಿಮ್ಮ ತೂಕ ನಷ್ಟವೂ ಪ್ರಾರಂಭವಾಗುತ್ತದೆ.

ಸೇಬುಗಳನ್ನು ತಿನ್ನುವುದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಸೇಬಿನಲ್ಲಿರುವ ಪೆಕ್ಟಿನ್ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತೆಗೆದುಹಾಕುತ್ತದೆ. ವಿಶೇಷವಾಗಿ ಮಲಬದ್ಧತೆ ಮತ್ತು ಅತಿಸಾರದಂತಹ ಸಂದರ್ಭದಲ್ಲಿ ಸೇಬು ತಿನ್ನುವುದು ತುಂಬಾ ಪ್ರಯೋಜನಕಾರಿ.

ನಮ್ಮ ಆರೋಗ್ಯದ ಹೊರತಾಗಿ, ಸೇಬು ಮೂಳೆಗಳಿಗೆ ತುಂಬಾ ಪ್ರಯೋಜನಕಾರಿ. ವಾಸ್ತವವಾಗಿ ಫ್ಲೇವನಾಯ್ಡ್ ಫ್ಲೋರಿಜಿನ್ ಆಪಲ್ ಸಿಪ್ಪೆಯಲ್ಲಿ ಕಂಡುಬರುತ್ತದೆ, ಅದು ಋತುಬಂಧದ ಸಮಯದಲ್ಲಿ ಮೂಳೆಗಳಿಗೆ ಹಾನಿಯಾಗದಂತೆ ರಕ್ಷಿಸುತ್ತದೆ.

ಆಸ್ತಮಾ ರೋಗಿಗಳು ಸೇಬು ಅಥವಾ ಸೇಬಿನ ರಸವನ್ನು ಸೇವಿಸುವುದರಿಂದ ಸಾಕಷ್ಟು ಪ್ರಯೋಜನವನ್ನು ಪಡೆಯುತ್ತಾರೆ. ಆಸ್ತಮಾ ದಾಳಿಯನ್ನು ತಡೆಗಟ್ಟುವಲ್ಲಿ ಸೇಬು ಪರಿಣಾಮಕಾರಿ ಎಂದು ವಿವಿಧ ಸಂಶೋಧನೆಗಳು ತೋರಿಸಿವೆ. ಇದರಲ್ಲಿ ಕಂಡುಬರುವ ಫ್ಲೇವನಾಯ್ಡ್‌ಗಳು ಶ್ವಾಸಕೋಶವನ್ನು ಬಲಪಡಿಸುತ್ತವೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link