ಈ ಹಣ್ಣುಗಳ ಸೇವನೆಯಿಂದ ಸಾಧ್ಯವಾಗುತ್ತೆ ತ್ವರಿತ ತೂಕ ಇಳಿಕೆ
ವಿಟಮಿನ್ ಸಿ, ಫೈಬರ್ ನಲ್ಲಿ ಸಮೃದ್ಧವಾದ ಕಿತ್ತಳೆ ಹಣ್ಣು ಆರೋಗ್ಯಕರ ತೂಕ ಇಳಿಕೆಗೂ ತುಂಬಾ ಪ್ರಯೋಜನಕಾರಿ ಆಗಿದೆ.
ಬೇಸಿಗೆ ಕಾಲದಲ್ಲಿ ದೇಹವನ್ನು ತಂಪಾಗಿಡಲು ಕಲ್ಲಂಗಡಿ ಹಣ್ಣನ್ನು ಹೆಚ್ಚು ಸೇವಿಸಲಾಗುತ್ತದೆ. ಆದರೆ, ಈ ಹಣ್ಣು ತೂಕ ಇಳಿಕೆಯಲ್ಲೂ ತುಂಬಾ ಸಹಕಾರಿ ಎಂದು ಹೇಳಲಾಗುತ್ತದೆ.
ನಿತ್ಯ ಒಂದು ಸೇಬು ತಿನ್ನುವುದರಿಂದ ವೈದ್ಯರಿಂದ ದೂರ ಉಳಿಯಬಹುದು ಎಂದು ನಿಮಗೆ ತಿಳಿದಿರಬಹುದು. ಆದರೆ, ಆರೋಗ್ಯಕರ ತೂಕ ಇಳಿಕೆಗೂ ಕೂಡ ಸೇಬು ಸಹಕಾರಿ ಎಂದು ನಿಮಗೆ ತಿಳಿದಿದೆಯೇ...
ಯಾವುದೇ ಋತುಮಾನದಲ್ಲೂ ಬಹಳ ಸುಲಭವಾಗಿ ಲಭ್ಯವಿರುವ ಪರಂಗಿ ಹಣ್ಣು ಸಹ ತೂಕ ಇಳಿಕೆಯಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಕಡಿಮೆ ಕ್ಯಾಲೋರಿ ಹೊಂದಿರುವ ಈ ಹಣ್ಣನ್ನು ನಿತ್ಯ ಸೇವಿಸುವುದರಿಂದ ತ್ವರಿತವಾಗಿ ತೂಕ ಕಳೆದುಕೊಳ್ಳಬಹುದು.
ವಿಟಮಿನ್ ಸಿ ಸಮೃದ್ಧವಾದ ದ್ರಾಕ್ಷಿಯಲ್ಲಿ ಕೂಡ ಕಡಿಮೆ ಕ್ಯಾಲೋರಿಗಳು ಕಂಡು ಬರುತ್ತವೆ. ಇದನ್ನು ತ್ವರಿತ ತೂಕ ಇಳಿಕೆಯಲ್ಲೂ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.