ಅಂತಾರಾಷ್ಟ್ರೀಯ ಮಾರುಕಟ್ಟೆಯ ನೇರ ಪರಿಣಾಮ ! ಬಂಗಾರದ ಬೆಲೆಯಲ್ಲಿ ದಿಢೀರ್ ಕುಸಿತ
ಅಂತರಾಷ್ಟ್ರೀಯ ಮಾರುಕಟ್ಟೆಯನ್ನು ಆಧರಿಸಿ ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಗಳು ಮಂದ ಗತಿಯಲ್ಲಿ ಸಾಗುತ್ತಿದೆ. ಯುಎಸ್ ಫೆಡ್ ರಿಸರ್ವ್ ಬ್ಯಾಂಕಿನ ನೀತಿ ಮತ್ತು ದೃಷ್ಟಿಕೋನದ ನಂತರ, ಫ್ಯೂಚರ್ಸ್ ಮಾರುಕಟ್ಟೆಯು ನಿರಂತರ ಕುಸಿತ ಕಾಣುತ್ತಿದೆ.ಇದರೊಂದಿಗೆ ಚಿಲ್ಲರೆ ಮಾರುಕಟ್ಟೆಯಲ್ಲಿಯೂ ಇಳಿಕೆ ಕಂಡು ಬರುತ್ತಿದೆ.
ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಕುಸಿತ ಕಂಡಿದೆ. ಫ್ಯೂಚರ್ಸ್ ಮಾರುಕಟ್ಟೆಯಲ್ಲಿ ಬೆಳ್ಳಿ ಕುಸಿದಿದ್ದರೂ, ಚಿನ್ನವು ಸಾಮಾನ್ಯ ಏರಿಕೆಯನ್ನು ಕಂಡಿದೆ.
ಚಿನಿವಾರ ಪೇಟೆಯಲ್ಲಿನ ಇಂದಿನ ದರವನ್ನು ಗಮನಿಸುವುದಾದರೆ 999 ಶುದ್ಧತೆಯ 10 ಗ್ರಾಂ ಚಿನ್ನವು 466 ರೂಪಾಯಿ ಕುಸಿದು 75,547 ರೂಪಾಯಿಗೆ ತಲುಪಿದೆ.
ಬೆಳ್ಳಿ ಬೆಲೆಯಲ್ಲಿ ಕೂಡಾ 1,335 ರೂಪಾಯಿ ಇಳಿಕೆಯಾಗಿ 85,700 ರೂಪಾಯಿಗಳಿಗೆ ತಲುಪಿದೆ .
ಫ್ಯೂಚರ್ಸ್ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನಕ್ಕೆ 50 ರೂಪಾಯಿ ಏರಿಕೆಯಾಗಿ 75,701 ರೂಪಾಯಿಗಳಿಗೆ ತಲುಪಿದೆ. ಬೆಳ್ಳಿ ಪ್ರತಿ ಕೆಜಿಗೆ 225 ರೂಪಾಯಿ ಇಳಿಕೆಯಾಗಿ 86,962 ರೂಪಾಯಿಗಳಿಗೆ ತಲುಪಿದೆ.
ನಿಮ್ಮ ನಗರದಲ್ಲಿ ಇಂದಿನ ಬೆಲೆ ಎಷ್ಟು ಎಂದು ತಿಳಿಯಲು ಇಂಡಿಯಾ ಬುಲಿಯನ್ ಮತ್ತು ಜ್ಯುವೆಲರ್ಸ್ ಅಸೋಸಿಯೇಶನ್‌ನ ಅಧಿಕೃತ ವೆಬ್‌ಸೈಟ್‌ನ (ibjarates.com) ಪರಿಶೀಲಿಸಿ.