ನಿರಂತರ ಕುಸಿತ ಕಾಣುತ್ತಿದೆ ಬಂಗಾರದ ಬೆಲೆ !ಮತ್ತೆ ಹಿಂದಿನ ದರದಲ್ಲಿ ಬಂಗಾರ ಖರೀದಿಸುವ ಕಾಲ ಸನ್ನಿಹಿತ
ಒಂದೆಡೆ ಷೇರು ಮಾರುಕಟ್ಟೆ ಕುಸಿಯುತ್ತಿದ್ದರೆ ಮತ್ತೊಂದೆಡೆ ಚಿನ್ನದ ಬೆಲೆ ಕೂಡಾ ನಿರಂತರವಾಗಿ ಇಳಿಯುತ್ತಾ ಸಾಗಿದೆ. ಸತತವಾಗಿ ದಾಖಲೆ ನಿರ್ಮಿಸುತ್ತಿದ್ದ ಚಿನ್ನ ಬೆಳ್ಳಿ ಬೆಲೆ ಇದೀಗ ಕುಸಿಯಲಾರಂಭಿಸಿದೆ.
ಸತತ ಮೂರು ದಿನಗಳಲ್ಲಿ ಚಿನ್ನದ ಬೆಲೆ ಇಳಿಯುತ್ತಲೇ ಇದೆ.ಕಳೆದ ಮೂರು ದಿನಕ್ಕೆ ಹೋಲಿಸಿದರೆ ಬಂಗಾರದ ಬೆಲೆಯಲ್ಲಿ ಸರಿ ಸುಮಾರು 2500 ರೂ.ವರೆಗೆ ಇಳಿಕೆ ಕಂಡು ಬಂದಿದೆ.
ಇಂದು ಮಾರುಕಟ್ಟೆಯಲ್ಲಿ 22 ಕ್ಯಾರಟ್ ಆಭರಣ ಚಿನ್ನ ಗ್ರಾಮ್ ಗೆ 6,935 ರೂಪಾಯಿ ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) 7,565 ಆಗಿದೆ. ಇನ್ನು ಎಂಟು ಗ್ರಾಂ ಚಿನ್ನಕ್ಕೆ ಲೆಕ್ಕ ಹಾಕಿ ನೋಡಿದರೆ 18 ಕ್ಯಾರಟ್ ಆಭರಣ ಚಿನ್ನದ ಬೆಲೆ 45,392 ಆಗಿದ್ದರೆ, 22 ಕ್ಯಾರಟ್ ಆಭರಣ ಚಿನ್ನದ ಬೆಲೆ - 55,480 ರೂ ಆಗುತ್ತದೆ.
ವಿವಿಧ ನಗರಗಳ ಚಿನ್ನದ ಬೆಲೆಯನ್ನು ಗಮಿನಿಸುವುದಾದರೆ 22 ಕ್ಯಾರಟ್ ಬಂಗಾರದ ಬೆಲೆ ಬೆಂಗಳೂರು - 6,935, ಚೆನ್ನೈ - 6,935, ಮುಂಬೈ - 6,935, ಕೊಲ್ಕತ್ತಾ -6,935,ಆಗಿದೆ.
ಇನ್ನು ನಿಮ್ಮ ನಗರದ ಬಂಗಾರದ ಇಂದಿನ ನಿಖರವಾದ ಬೆಲೆಯನ್ನು ತಿಳಿಯಲು ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಶನ್‌ನ ಅಧಿಕೃತ ವೆಬ್‌ಸೈಟ್ ibjarates.com ಅನ್ನು ಸಂಪರ್ಕಿಸಬಹುದು.