ಬೆಳಿಗ್ಗೆ ಎದ್ದ ಕೂಡಲೇ ಎರಡು ಹನಿ ನಿಂಬೆ ರಸವನ್ನು ಇದರ ಜೊತೆ ಸೇವಿಸಿ !ಕೀಲುಗಳಲ್ಲಿ ಸೇರಿಕೊಂಡಿರುವ ಯೂರಿಕ್ ಆಸಿಡ್ ಮೂತ್ರದ ಮೂಲಕವೇ ಹೊರ ಬರುವುದು!
ದೇಹದಲ್ಲಿ ಹೆಚ್ಚಾಗಿರುವ ಯೂರಿಕ್ ಆಸಿಡ್ ಅನ್ನು ಕಿಡ್ನಿ ದೇಹದಿಂದ ಹೊರ ಹಾಕುವುದು ಸಾಧ್ಯವಾಗದೇ ಹೋದಾಗ ಅದು ದೇಹದ ಸಂಧುಗಳಲ್ಲಿ ಹರಳಿನ ರೂಪದಲ್ಲಿ ಸೇರಿಕೊಳ್ಳುತ್ತದೆ.
ಯುರಿಕ್ ಆಸಿಡ್ ಹೆಚ್ಚಾದಾಗ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ.ಅಲ್ಲದೆ ಕಿಡ್ನಿ ಸ್ಟೋನ್ ಅಪಾಯ ಕೂಡಾ ಹೆಚ್ಚಾಗುತ್ತದೆ.
ಯೂರಿಕ್ ಆಸಿಡ್ ಕರಗಿಸಲು ನಿಂಬೆ ಅತ್ಯಂತ ಸುಲಭ ಮತ್ತು ಪರಿಣಾಮಕಾರಿ ಮನೆ ಮದ್ದು. ಇದು ಯೂರಿಕ್ ಆಸಿಡ್ ಅನ್ನು ಕರಗಿಸಲು ಸಹಾಯ ಮಾಡುತ್ತದೆ.
ಯೂರಿಕ್ ಆಸಿಡ್ ಅನ್ನು ನಿಯಂತ್ರಿಸಲು 15-20 ಪುದೀನಾ ಎಲೆಗಳನ್ನು ಒಂದು ಲೋಟ ನೀರಿಗೆ ಹಾಕಿ 10 ನಿಮಿಷ ಕುದಿಸಿ.ನಂತರ,ಈ ನೀರಿಗೆ ಒಂದೆರಡು ಹನಿ ನಿಂಬೆ ರಸ ಬೆರೆಸಿ ಸೇವಿಸಿ.
ನಿತ್ಯ ಖಾಲಿ ಹೊಟ್ಟೆಯಲ್ಲಿ ಈ ಪಾನೀಯವನ್ನು ಸೇವಿಸುತ್ತಾ ಬಂದರೆ ದೇಹದ ಸಂಧುಗಳಲ್ಲಿ ಹರಳಿನ ರೂಪದಲ್ಲಿ ಸೇರಿಕೊಂಡಿರುವ ಯೂರಿಕ್ ಆಸಿಡ್ ಕರಗುವುದು.
ಇಲ್ಲಿ ನಿಂಬೆ ಮತ್ತು ಪುದಿನಾ ಎರಡೂ ನಿರ್ವಿಶೀಕರಣ ಮತ್ತು ಮೂತ್ರವರ್ಧಕ ಗುಣಲಕ್ಷಣಗಳನ್ನು ಒಳಗೊಂಡಿದೆ.ಹಾಗಾಗಿ ಯೂರಿಕ್ ಆಸಿಡ್ ಕರಗಿ ಮೂತ್ರದ ಮೂಲಕವೇ ದೇಹದಿಂದ ಹೊರ ಹೋಗುತ್ತದೆ.ಇದರಿಂದ ಕಿಡ್ನಿ ಸ್ಟೋನ್ ಭಯ ಕೂಡಾ ಇರುವುದಿಲ್ಲ.
ಸೂಚನೆ: ಪ್ರಿಯ ಓದುಗರೇ,ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.