ಧಂತೇರಸ್‌ನಲ್ಲಿ ಕೊತ್ತಂಬರಿ ಸೊಪ್ಪಿನ ಪರಿಹಾರದಿಂದ ಮನೆಯಲ್ಲಿ ವರ್ಷವಿಡೀ ತುಂಬಿರಲಿದೆ ಸುಖ-ಸಂಪತ್ತು
ಧಂತೇರಸ್ ದಿನದಂದು ಮನೆಯಲ್ಲಿ ಸುಖ, ಸಂಪತ್ತು ಪಡೆಯಲು ಹಲವು ಪರಿಹಾರಗಳನ್ನು ಕೈಗೊಳ್ಳಲಾಗುತ್ತದೆ.
ಐದು ದಿನಗಳ ದೀಪಾವಳಿಯ ಮೊದಲ ದಿನ ಧಂತೇರಸ್ ಅನ್ನು ಆಚರಿಸಲಾಗುತ್ತದೆ. ಈ ವರ್ಷ ಧಂತೇರಸ್ ಹಬ್ಬವನ್ನು ನವೆಂಬರ್ 10, 2023ರಂದು ಆಚರಿಸಲಾಗುತ್ತಿದೆ.
ಧಂತೇರಸ್‌ನಲ್ಲಿ ಚಿನ್ನ, ಬೆಳ್ಳಿ, ಪಾತ್ರೆಗಳು, ಭೂಮಿ ಮತ್ತು ಆಸ್ತಿಯನ್ನು ಖರೀದಿಸುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ.
ಧಂತೇರಸ್ ದಿನದಂದು ಕೆಲವು ಪರಿಹಾರಗಳನ್ನು ಕೈಗೊಳ್ಳುವುದರಿಂದ ಅಂತಹ ಮನೆಯಲ್ಲಿ ವರ್ಷವಿಡೀ ಸುಖ-ಸಂಪತ್ತು ತುಂಬಿ ತುಳುಕುತ್ತದೆ ಎಂದು ನಂಬಲಾಗಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಧಂತೇರಸ್‌ನಲ್ಲಿ ಕೊತ್ತಂಬರಿ ಸೊಪ್ಪಿನ ಪರಿಹಾರ ಕೈಗೊಳ್ಳುವುದರಿಂದ ಆ ಮನೆಯಲ್ಲಿ ವರ್ಷವಿಡೀ ಲಕ್ಷ್ಮಿ ದೇವಿಯ ಆಶೀರ್ವಾದದ ಜೊತೆಗೆ ಸುಖ-ಸಂಪತ್ತಿಗಾಗಿ ಯಾವುದೇ ಕೊರತೆ ಇರುವುದಿಲ್ಲ ಎಂದು ಹೇಳಲಾಗುತ್ತದೆ. ಆ ಪರಿಹಾರಗಳೆಂದರೆ...
ಧಂತೇರಸ್‌ನಲ್ಲಿ ಕೊತ್ತಂಬರಿ ಸೊಪ್ಪಿನ ಸಂಪೂರ್ಣ ಕಟ್ಟನ್ನು ಖರೀದಿಸಿ ಅದನ್ನು ಲಕ್ಷ್ಮಿ ದೇವಿಗೆ ಮತ್ತು ಧನ್ವಂತರಿಗೆ ಅರ್ಪಿಸಿ. ಇದರ ನಂತರ, ಈ ಕೊತ್ತಂಬರಿ ಸೊಪ್ಪನ್ನು ಮನೆಯ ಕೆಲವು ಸ್ಥಳದಲ್ಲಿ ಮಣ್ಣಿನಲ್ಲಿ ಹೂತುಹಾಕಿ. ಅದರಲ್ಲಿ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಉಳಿಸಿ ಕೆಂಪು ಬಟ್ಟೆಯಲ್ಲಿ ಕಟ್ಟಿ ಹಣ ಇಡುವ ಜಾಗದಲ್ಲಿ ಇಡಿ.
ಧಂತೇರಸ್‌ನಲ್ಲಿ ಕೊತ್ತಂಬರಿ ಸೊಪ್ಪನ್ನು ಖರೀದಿಸಿ ದೀಪಾವಳಿ ಹಬ್ಬದಂದು ಸಂಪತ್ತಿನ ದೇವತೆ ಲಕ್ಷ್ಮಿ ದೇವಿಗೆ ಅರ್ಪಿಸಿ. ಇದರಿಂದ ಮನೆಯಲ್ಲಿ ಸಂತೋಷ ತುಂಬಿರಲಿದೆ ಎನ್ನಲಾಗುತ್ತದೆ.
ಧಂತೇರಸ್‌ನಲ್ಲಿ ಕೊತ್ತಂಬರಿ ಬೀಜವನ್ನು ಧನ್ವಂತರಿ ದೇವರ ಮುಂದೆ ಇತ್ತು ದೀಪಾವಳಿಯವರೆಗೂ ಹಾಗೆ ಬಿಡಿ. ಗೋವರ್ಧನ ಪೂಜೆಯ ದಿನ ಆ ಬೀಜವನ್ನು ತೆಗೆದು ಒಂದು ಕುಂಡದಲ್ಲಿ ಹೂತುಹಾಕಿ. ಅದು ಬೆಳೆದಂತೆ ಮನೆಯಲ್ಲಿ ಪ್ರಗತಿಯನ್ನು ಕಾಣಬಹುದು ಎಂದು ಹೇಳಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.