ಈ ಕಾಳು ನೆನೆಸಿದ ನೀರು ಕುಡಿಯಿರಿ ಸಾಕು.. ಕೀಲುಗಳಲ್ಲಿನ ಯುರಿಕ್ ಆಸಿಡ್ ಕರಗಿ ದೇಹದಿಂದ ಹೊರ ಹೋಗುವುದು!
ಕೊತ್ತಂಬರಿ ಬೀಜದ ನೀರು ಕುಡಿಯುವುದರಿಂದ ಅದ್ಭುತವಾದ ಆರೋಗ್ಯ ಪ್ರಯೋಜನಗಳಿವೆ. ಕೊತ್ತಂಬರಿ ಬೀಜಗಳಲ್ಲಿ ಔಷಧೀಯ ಗುಣಗಳು ಹೇರಳವಾಗಿದೆ.
ಇದರ ಸೇವನೆಯಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ. ಆಸಿಡಿಟಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕೊತ್ತಂಬರಿ ಬೀಜದ ನೀರು ಬೇಸಿಗೆಯಲ್ಲಿ ದೇಹಕ್ಕೆ ರಕ್ಷಣೆ ನೀಡುತ್ತದೆ. ದೇಹದಿಂದ ವಿವಿಧ ರೀತಿಯ ತ್ಯಾಜ್ಯವನ್ನು ತೆಗೆದುಹಾಕಲು ಇದು ಉಪಯುಕ್ತವಾಗಿದೆ. ದೇಹಕ್ಕೆ ತಾಜಾತನವನ್ನು ನೀಡುತ್ತದೆ.
ಅಧಿಕ ತೂಕವನ್ನು, ವಿಶೇಷವಾಗಿ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಕೊತ್ತಂಬರಿ ಬೀಜದ ನೀರು ಉಪಯುಕ್ತವಾಗಿದೆ. ಬೆಳಿಗ್ಗೆ ಖಾಲಿ ಹೊಟ್ಟೆಗೆ ಕೊತ್ತಂಬರಿ ಬೀಜದ ನೀರು ಕುಡಿಯುವುದು ಒಳ್ಳೆಯದು.
ಕೊತ್ತಂಬರಿ ಬೀಜದ ನೀರು ಸೇವನೆಯಿಂದ ವಿವಿಧ ರೋಗಗಳಿಂದ ರಕ್ಷಿಸುತ್ತದೆ. ದೇಹವನ್ನು ಸದೃಢವಾಗಿ ಮತ್ತು ಆರೋಗ್ಯಕರವಾಗಿಡಲು ಮತ್ತು ನಿರ್ವಿಶಗೊಳಿಸಲು ಇದು ಉಪಯುಕ್ತವಾಗಿದೆ.
ಯುರಿಕ್ ಆಸಿಡ್ ಕಡಿಮೆ ಮಾಡಲು ಸಹ ಕೊತ್ತಂಬರಿ ಬೀಜದ ನೀರು ಪ್ರಯೋಜನಕಾರಿಯಾಗಿದೆ. ಯುರಿಕ್ ಆಸಿಡ್ ಮಟ್ಟ ಅಧಿಕಾವಾದಾಗ ಪ್ರತಿನಿತ್ಯ ಕೊತ್ತಂಬರಿ ಬೀಜದ ನೀರು ಕುಡಿದರೆ ಒಳ್ಳೆಯದು. ಕೊತ್ತಂಬರಿ ಬೀಜಗಳನ್ನು ರಾತ್ರಿ ನೆನೆಯಿಟ್ಟು ಬೆಳಗ್ಗೆ ಆ ನೀರು ಕುಡಿದರೆ ಗಂಟುಗಳಲ್ಲಿನ ಯುರಿಕ್ ಆಸಿಡ್ ಕರಗಿ ಹೋಗುವುದು.
ರೋಗನಿರೋಧಕ ಶಕ್ತಿಯನ್ನು ಕೊತ್ತಂಬರಿ ಬೀಜದ ನೀರು ಬಲಪಡಿಸುತ್ತದೆ. ಪ್ರತಿದಿನ ನಿಯಮಿತವಾಗಿ ಕುಡಿಯುವ ಅಭ್ಯಾಸ ರೂಢಿಸಿಕೊಂಡರೆ, ಅದ್ಭುತ ಪ್ರಯೋಜನಗಳನ್ನು ಪಡೆಯುತ್ತೀರಿ.
ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.