Corona Vaccine ಹಾಕಿಸುವ ಮುನ್ನ ಹಾಗೂ ನಂತರ ಏನು ಮಾಡ್ಬೇಕು ಮತ್ತು ಏನ್ಮಾಡಬಾರದು? ಇಲ್ಲಿವೆ ಸರ್ಕಾರದ New Guidelines
ಸ್ಟೆಪ್1: ಈ ಮೊದಲು ಯಾವುದಾದರೊಂದು ವ್ಯಾಕ್ಸಿನ್ ನಿಂದ ಅಲರ್ಜಿ ಸಂಭವಿಸಿದೆಯಾ?: ಆರೋಗ್ಯ ಸಚಿವಾಲಯದ ಪ್ರಕಾರ ಕೊವಿಡ್ 19 (Covid-19) ಲಸಿಕೆ ಹಾಕಿಸಿಕೊಳ್ಳಲು ಬರುವ ವ್ಯಕ್ತಿಗೆ ಈ ಮೊದಲು ಯಾವುದಾದರೊಂದು ವ್ಯಾಕ್ಸಿನ್ ನಿಂದ ಅಲರ್ಜಿ ಅಥವಾ ರಿಯಾಕ್ಷನ್ ಬಂದಿದೆಯಾ ಎಂಬುದನ್ನು ಕೇಳಬೇಕು. ಒಂದು ವೇಳೆ ವ್ಯಕ್ತಿಗೆ ಈ ಮೊದಲು ಅಲರ್ಜಿ ಬಂದಿದ್ದರೆ, ವ್ಯಕ್ತಿಯನ್ನು ನೇರವಾಗಿ ಅಲರ್ಜಿ ಸ್ಪೆಶಾಲಿಸ್ಟ್ ಬಳಿಗೆ ಕಳುಹಿಸಬೇಕು. ಅವರ ಸಲಹೆಯ ಮೇರೆಗೆ ಮಾತ್ರ ಮುಂದುವರೆಯಬೇಕು.
ಸ್ಟೆಪ್2: ವ್ಯಾಕ್ಸಿನ್ ತಯಾರಕ ಕಂಪನಿಗಳು ಮುನ್ನೆಚ್ಚರಿಕಾ ಕ್ರಮವಾಗಿ ಸೂಚಿಸಿರುವಂತೆ ವ್ಯಕ್ತಿಯ ಆರೋಗ್ಯ ಸ್ಥಿತಿಯ ಕುರಿತು ಸಮೀಕ್ಷೆ ನಡೆಸಬೇಕು. ಇದರಲ್ಲಿ ಪ್ರೆಗ್ನೆನ್ಸಿ ಹಾಗೂ ಕಾಂಪ್ರಮೈಸ್ದ್ ಇಮ್ಯೂನ್ ಸಿಸ್ಟಮ್ ಹಾಗೂ ಹಿರಿಯ ನಾಗರಿಕರಲ್ಲಿ ಗಂಭೀರ ಕಾಯಿಲೆಗಳು ಶಾಮೀಲಾಗಿವೆ. ಈ ವ್ಯಕ್ತಿಗಳು ಲಸಿಕಾಕರಣಕ್ಕೆ ಯೋಗ್ಯರಾಗಿದ್ದಾರೆ ಆದರೆ ಅವರಿಗೆ ಅವಶ್ಯಕ ಮಾಹಿತಿ ಒದಗಿಸಬೇಕು ಹಾಗೂ ಕೌನ್ಸೆಲಿಂಗ್ ಒದಗಿಸಬೇಕು.
ಸ್ಟೆಪ್3: ವ್ಯಾಕ್ಸಿನ್ ಹಾಕಿಸಿದ ಬಳಿಕ ಕೆಲ ಅಡ್ಡಪರಿಣಾಮಗಳು ಕಾಣಿಸಿಕೊಳ್ಳುತ್ತವೆ. ಇದರರ್ಥ ಶರೀರದಲ್ಲಿ ವ್ಯಾಕ್ಸಿನ್ ಕಾರ್ಯನಿರ್ವಹಿಸುತ್ತಿದೆ ಎಂದರ್ಥ. ಈ ಅಡ್ಡ ಪರಿಣಾಮಗಳಲ್ಲಿ ಕೈನೋವು, ಲಘು ಜ್ವರ, ಆಯಾಸ, ತಲೆನೋವು, ಸ್ನಾಯುನೋವು ಹಾಗೂ ಕೀಲುನೋವುಗಳು ಶಾಮೀಲಾಗಿವೆ.
ಸ್ಟೆಪ್4:ಆರೋಗ್ಯ ಸಚಿವಾಲಯದ ನೂತನ ಮಾರ್ಗಸೂಚಿತಲ ಅನುಸಾರ, ಈ ಅಡ್ಡ ಪರಿಣಾಮಗಳ ಕುರಿತು ವ್ಯಕ್ತಿಗೆ ಮಾಹಿತಿ ನೀಡಿದ ನಂತರವೇ ರೋಗಿಗಳಿಗೆ ವ್ಯಾಕ್ಸಿನ್ ಹಾಕಿಸಬೇಕು.
ಸ್ಟೆಪ್5: ವ್ಯಾಕ್ಸಿನ್ ಹಾಕಿದ ಬಳಿಕ 15 ನಿಮಿಷಗಳ ಕಾಲ ವ್ಯಕ್ತಿಯ ಮೇಲೆ ನಿಗಾ ಇಡುವುದು ಅವಶ್ಯಕವಾಗಿದೆ. ಇನ್ನೊಂದೆಡೆ ಇದಕ್ಕೂ ಮೊದಲು ವ್ಯಾಕ್ಸಿನ್ ಹಾಕಿಸಿಕೊಂಡು ಅಲರ್ಜಿ ಎದುರಿಸಿದ ವ್ಯಕ್ತಿಯ ಮೇಲೆ ಮುಂದಿನ 30 ನಿಮಿಷಗಳ ಕಾಲ ನಿಗಾವಹಿಸಬೇಕು. ಇದಲ್ಲದೆ ಮನೆಗೆ ತೆರಳಿದ ಬಳಿಕ ಒಂದು ವೇಳೆ ರಿಯಾಕ್ಷನ್ ಉಂಟಾದರೆ ವ್ಯಕ್ತಿ ಏನು ಮಾಡಬೇಕು ಎಂಬುದರ ಕುರಿತು ಕೂಡ ವ್ಯಕ್ತಿಗೆ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಬೇಕು.
ಸ್ಟೆಪ್6: ವ್ಯಾಕ್ಸಿನ್ ಹಾಕಿಕೊಂಡ ಬಳಿಕ ಓರ್ವ ವ್ಯಕ್ತಿಯಲ್ಲಿ ಯಾವುದೇ ಅನಪೇಕ್ಷಿತ ಅಥವಾ ಗಂಭೀರ ರಿಯಾಕ್ಷನ್ ಅಥವಾ ಲರ್ಜಿ ಕಾಣಿಸಿಕೊಂಡರು ಅವರು ಅದನ್ನು ತಕ್ಷಣ ಮೆಡಿಕಲ್ ಸೂಪರ್ವೈಸರ್ ಗಮನಕ್ಕೆ ತರಬೇಕು.