ಯಾರು ಹಾಕಿಸಬಾರದು ಕೋವಿಶೀಲ್ಡ್, ಕೋವಾಕ್ಸಿನ್ ಇಲ್ಲಿದೆ ಫಾಕ್ಟ್ ಶೀಟ್ ಮಾಹಿತಿ
ಕೆಲವೊಂದು ಕಡೆಗಳಲ್ಲಿ ಲಸಿಕೆ ಹಾಕಿಸಿದ ನಂತರ ಅಡ್ಡ ಪರಿಣಾಮಗಳು ಕಂಡು ಬಂದಿವೆಯಂತೆ. ಇದಾದ ನಂತರ ಕೋವಿಶೀಲ್ಡ್ (Covishield) ಮತ್ತು ಕೋವಾಕ್ಸಿನ್ (Covaxin) ಕಡೆಯಿಂದ ಫಾಕ್ಟ್ ಶೀಟನ್ನು ಜಾರಿಗೊಳಿಸಲಾಗಿದೆ. ಇದರಲ್ಲಿ ಯಾರೆಲ್ಲಾ ಕೋವಾಕ್ಸಿನ್ ಲಸಿಕೆ ಹಾಕಿಸಿಕೊಳ್ಳಬಾರದು ಎನ್ನುವುದನ್ನು ತಿಳಿಸಲಾಗಿದೆ.
ಲಸಿಕೆಯ ಯಾವುದಾದರೂ ವಿಶೇಷ ಇಂಗ್ರೀಡಿಯೆಂಟ್ ನಿಂದ ಅಲರ್ಜಿ ಇದ್ದರೆ ಅಂಥವರು ಲಸಿಕೆ ಹಾಕಿಸಬಾರದು ಎಂದು ಇದೀಗ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ತನ್ನ ಫ್ಯಾಕ್ಟ್ ಶೀಟ್ ನಲ್ಲಿ ಹೇಳಿದೆ.
ಮೊದಲ ಡೋಸ್ ಪಡೆದ ಮೇಲೆ ರಿಯಾಕ್ಷನ್ ಕಂಡು ಬಂದಿದ್ದರೆ ಲಸಿಕೆ ಹಾಕದಂತೆ ಸೂಚಿಸಲಾಗಿದೆ. ಅಲ್ಲದೆ ಕರೋನಾ ಪಾಸಿಟಿವ್ ಇದ್ದರೆ ಅಥವಾ ಜ್ವರ ಇದ್ದರೆ ಅಂತವರು ಕೂಡಾ ಲಸಿಕೆ ಹಾಕದಂತೆ ಸೂಚಿಸಲಾಗಿದೆ.
ಫ್ಯಾಕ್ಟ್ ಶೀಟ್ ನಲ್ಲಿ ಗರ್ಭವತಿ ಮಹಿಳೆಯರು ಮತ್ತು ಹಾಲುಣಿಸುವ ಮಹಿಳೆಯರು ಕೂಡಾ ವಾಕ್ಸಿನ್ ಹಾಕಿಸದಂತೆ ತಿಳಿಸಲಾಗಿದೆ.
ಲಸಿಕೆ ಹಾಕಿಸಿಕೊಳ್ಳುವ ಮೊದಲು, ಹೆಲ್ತ್ ಕೇರ್ ಪ್ರೋವೈಡರ್ ಗೆ ನಿಮ್ಮ ಆರೋಗ್ಯ ಸಂಬಂಧ ಎಲ್ಲಾ ಮಾಹಿತಿ ಒದಗಿಸುವಂತೆ ಎರಡೂ ಲಸಿಕಾ ತಯಾರಕ ಕಂಪನಿಗಳು ಹೇಳಿವೆ. ನಿಮ್ಮ ಆರೋಗ್ಯ ಸ್ಥಿತಿಯನ್ನು ಸರಿಯಾಗಿ ತಿಳಿಸಿದ ನಂತರವೇ ಲಸಿಕೆ ಪಡೆದುಕೊಳ್ಳುವಂತೆ ಸೂಚಿಸಲಾಗಿದೆ.