Coronavirus Fake News Alert: `Corona Vaccine ಹಾಕಿಸಿಕೊಂಡ 2 ವರ್ಷಗಳೊಳಗೆ ಸಾವು!` ಏನಿದರ ಹಿಂದಿನ ಸತ್ಯಾಸತ್ಯತೆ?

Tue, 25 May 2021-9:52 pm,

1. ಸಾಮಾಜಿಕ ಮಾಧ್ಯಮಗಳ ಮೇಲೆ ವದಂತಿ - ಸಾಮಾಜಿಕ ಮಾಧ್ಯಮದ ಮೇಲೆ ಪ್ರಕಟಿಸಲಾಗಿರುವ ಒಂದು ಚಿತ್ರದಲ್ಲಿ ಕೊವಿಡ್-19 ವ್ಯಾಕ್ಸಿನ್ (Covid-19 Vaccine) ಕುರಿತು ಹೇಳಲಾಗಿರುವ ಸಂಗತಿಯನ್ನು ಪ್ರೆಸ್ ಇನ್ಫಾರ್ಮೆಶನ್ ಬ್ಯೂರೋ (PIB)ಖಂಡಿಸಿದೆ.  ಈ ಚಿತ್ರ ರೂಪದ ಸಂದೇಶದಲ್ಲಿ ನೊಬೆಲ್ ಪ್ರಶಸ್ತಿ ವಿಜೇತ ಲುಕ್ ಮೊಂಟಾಗ್ನಿಯರ್ (Luc Montagnier) ಅವರ ಹೆಸರನ್ನು ಉಲ್ಲೇಖಿಸಿ ವ್ಯಾಕ್ಸಿನ್ ಹಾಕಿಸಿಕೊಂಡ ಯಾವುದೇ ವ್ಯಕ್ತಿ ಬದುಕುವ ಸಾಧ್ಯತೆ ಇಲ್ಲ ಎಂದು ಹೇಳಲಾಗಿದೆ.

2. ಈ ವದಂತಿಯನ್ನು ಖಂಡಿಸಿದ PIB - ಭಾರತ ಸರ್ಕಾರದ ಪ್ರೆಸ್ ಇನ್ಫಾರ್ಮಶನ್ ಬ್ಯೂರೋ ಈ ಸಂದೇಶದ ಕುರಿತು ಖಂಡನೆ ವ್ಯಕ್ತಪಡಿಸಿದ್ದು, ಇದೊಂದು ಆಧಾರ ರಹಿತ ಪೋಸ್ಟ್ ಆಗಿದೆ ಎಂದಿದೆ. ಕೊವಿಡ್-19 ಲಸಿಕೆಗಳು ಸಂಪೂರ್ಣ ಸುರಕ್ಷಿತವಾಗಿವೆ ಎಂದು ಸರ್ಕಾರ ಹೇಳಿದೆ. ಇದಲ್ಲದೆ ಈ ರೀತಿಯ ಕಂಟೆಂಟ್ ಪ್ರಸಾರವನ್ನು ಮಾಡಬಾರದು ಎಂದು ಜನರಿಗೆ ಸರ್ಕಾರ ಆಗ್ರಹಿಸಿದೆ.

3. ಸಾವು ಗ್ಯಾರಂಟಿಯ ವದಂತಿ ಶುದ್ಧ ಸುಳ್ಳು - ಫ್ರಾನ್ಸ್ ನ ನೊಬೆಲ್ ಪ್ರಶಸ್ತಿ ವಿಜೇತ ಲುಕ್ ಮೊಂಟಾಗ್ನಿಯರ್ ಅವರನ್ನು ಉಲ್ಲೇಖಿಸಿ ಮಾಡಲಾಗಿರುವ ಈ ಫೇಕ್ ಇ-ಮೇಲ್ ನಲ್ಲಿ ಕೊರೊನಾ ವ್ಯಾಕ್ಸಿನ್ ಹಾಕಿಸಿಕೊಂಡವರ ಸಾವು ನಿಶ್ಚಿತ ಎಂದು ಹೇಳಲಾಗುತ್ತಿದೆ. ಆದರೆ, ದಿಒಂದು ಸಂಪೂರ್ಣ ತಪ್ಪು ಹಾಗೂ ಭ್ರಾಂತಿ ಹುಟ್ಟಿಸುವ ಮಾಹಿತಿಯಾಗಿದೆ. ಝೀ ಹಿಂದೂಸ್ತಾನ್ ಕನ್ನಡ ಕೂಡ ಈ ರೀತಿಯ ವದಂತಿಗಳಿಂದ ದೂರು ಉಳಿಯಲು ತನ್ನ ಓದುಗರಿಗೆ ಸಲಹೆ ನೀಡುತ್ತದೆ.

4. ಭಾರತದಲ್ಲಿ ಕೊರೊನಾ ಮಹಾಮಾರಿಯ ಕಾರಣ 3 ಲಕ್ಷಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ -ಪ್ರಸ್ತುತ ದೇಶಾದ್ಯಂತ ಕೊರೊನಾ ಒಟ್ಟು ಸೋಂಕಿತರ ಸಂಖ್ಯೆ 2 ಕೋಟಿ 69 ಲಕ್ಷಕ್ಕಿಂತಲೂ ಹೆಚ್ಚಾಗಿದೆ. ಇದುವರೆಗೆ ಸುಮಾರು 3 ಲಕ್ಷ 6 ಸಾವಿರಕ್ಕೂ ಅಧಿಕ ಜನರು ಈ ಮಾರದ ವೈರಸ್ ದಾಳಿಗೆ ಬಲಿಯಾಗಿದ್ದಾರೆ(Coronavirus Death).

5. ಸಾವುಗಳ ಸಂಖ್ಯೆಯಲ್ಲಿ ಮೂರನೇ ಸ್ಥಾನದಲ್ಲಿದೆ ಭಾರತ (India) - ದೇಶದಲ್ಲಿ ಸಾವಿನ ಸಂಖ್ಯೆಯನ್ನು ಗಮನಿಸಿದರೆ, ಅಮೇರಿಕಾ (America) ಹಾಗೂ ಬ್ರೆಜಿಲ್ (Brezil) ಬಳಿಕ ವಿಶ್ವದಲ್ಲಿ ಭಾರತ ಮೂರನೇ ಸ್ಥಾನವನ್ನು ತಲುಪಿದ್ದು, ಕೊರೊನಾ ವೈರಸ್ ಸೋಂಕಿನಿಂದ ಅಲ್ಲಿಯೂ ಕೂಡ ಮೂರು ಲಕ್ಷಕ್ಕೂ ಅಧಿಕ ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಅಮೇರಿಕಾದಲ್ಲಿ 6 ಲಕ್ಷ 4 ಸಾವಿರದ 82 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ, ಬ್ರೆಜಿಲ್ ನಲ್ಲಿ 4 ಲಕ್ಷ 49 ಸಾವಿರದ 185 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link