ಕರೋನಾ ಲಕ್ಷಣ ಕಂಡುಬಂದರೆ ತಪ್ಪಿಯೂ ಈ ಮಾತ್ರೆಗಳನ್ನು ತೆಗೆದುಕೊಳ್ಳಬೇಡಿ..!
ಹೃದಯ ರೋಗಿಗಳಿಗೆ ಅಪಾಯಕಾರಿ ಎಂದು ಪರಿಗಣಿಸಲಾದ ಇಬುಪ್ರೊಫೇನ್ (Ibuprofen) ನಂತಹ ಕೆಲವು ನೋವು ನಿವಾರಕಗಳು ಕೋವಿಡ್ -19 ರೋಗಲಕ್ಷಣಗಳನ್ನು ಉಲ್ಬಣಗೊಳಿಸಬಹುದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಹೇಳಿದೆ. ಇವು ಮೂತ್ರಪಿಂಡ ವೈಫಲ್ಯದ ಅಪಾಯವನ್ನು ಹೆಚ್ಚಿಸಬಹುದು.
ನಾನ್ 'ಸ್ಟಿರಾಯ್ಡ್ ಆಂಟಿ ಇನ್ ಫ್ಲೆಮೇಟರಿ ಔಷಧಿಗಳನ್ನು ತೆಗೆದುಕೊಳ್ಳುವ ಬದಲು ಅನಾರೋಗ್ಯದ ಸಮಯದಲ್ಲಿ ಪ್ಯಾರಸಿಟಮಾಲ್ (Paracetamol) ತೆಗೆದುಕೊಳ್ಳಬೇಕು ಎಂದು ಐಸಿಎಂಆರ್ ಸೂಚಿಸಿದೆ.
ಹೃದಯ ರೋಗಿಗಳು, ಮಧುಮೇಹ ಅಥವಾ ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳಿಗೆ ಕರೋನಾ ಸೋಂಕು ಹರಡುವ ಅಪಾಯ ಅಧಿಕವಾಗಿರುವುದಿಲ್ಲ. ಆದರೆ, ಕರೋನಾಗೆ ಸಂಬಂಧಪಟ್ಟ ಯಾವುದೇ ಲಕ್ಷಣ ಕಂಡು ಬಂದರೂ ತಕ್ಷಣ ಕರೋನಾ ಪರೀಕ್ಷೆಗೆ ಒಳಗಾಗುವುದು ಅವಶ್ಯಕ.
ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ದುರ್ಬಲ ಹೃದಯ ಹೊಂದಿರುವ ಕೆಲವು ಜನರು ಹೆಚ್ಚು ತೀವ್ರವಾದ ರೋಗಲಕ್ಷಣಗಳನ್ನು ಹೊಂದಿರಬಹುದು. ಅವರಿಗೆ ಹೆಚ್ಚುವರಿ ಕಾಳಜಿ ಅಗತ್ಯ ಎಂದು ಐಸಿಎಂಆರ್ ಹೇಳಿದೆ.