Coronavirus ವಿರುದ್ಧದ ಹೋರಾಟದಲ್ಲಿ ಆಸ್ಪತ್ರೆಯಾಗಿ ಮಾರ್ಪಟ್ಟ ರೈಲು, ಇಲ್ಲಿವೆ Isolation Coach PICS
ಅವಶ್ಯಕತೆ ಇದ್ದರೆ ಇಂತಹ ಸುಮಾರು 3 ಲಕ್ಷ ಐಸೋಲೆಶನ್ ವಾರ್ಡ್ ಗಳನ್ನು ಸಿದ್ಧಪಡಿಸುವುದಾಗಿ ಭಾರತೀಯ ರೇಲ್ವೆ ಹೇಳಿದ್ದು, ಇದಕ್ಕೆ ಬೇಕಾದ ಎಲ್ಲ ಅವಶ್ಯಕತೆಗಳು ತನ್ನ ಬಳಿ ಇದೆ ಎಂದು ಹೇಳಿದೆ.
ಈ ಕುರಿತು ಯೋಜನೆ ರೂಪಿಸಿರುವ ಭಾರತೀಯ ರೈಲು ವಿಭಾಗ ಪ್ರತಿ ಝೋನ್ ನಲ್ಲಿ ಪ್ರತಿ ವಾರ 10 ಕೋಚ್ ಗಳನ್ನು ಐಸೋಲೆಶನ್ ವಾರ್ಡ್ ಗಳನ್ನಾಗಿ ಪರಿವರ್ತಿಸಲಾಗುವುದು ಎಂದು ಹೇಳಿದೆ.
ಕೋಚ್ ನಲ್ಲಿ ವೈದ್ಯಕೀಯ ಉಪಕರಣಗಳಿಗಾಗಿ ಪ್ರತ್ಯೇಕ ಕಂಪಾರ್ಟ್ ಮೆಂಟ್ ಗಳನ್ನು ಸಿದ್ಧಪಡಿಸಲಾಗಿದ್ದು, ಕಂಪಾರ್ಟ್ಮೆಂಟ್ ನಲ್ಲಿ ಇಲೆಕ್ಟ್ರಿಕ್ ಪಾಯಿಂಟ್ ಗಲಿವೆ. ಪ್ರತ್ಯೇಕ ಕೋಚ್ ನಲ್ಲಿ ಇಂತಹ ಒಟ್ಟು 10 ಐಸೋಲೆಶನ್ ವಾರ್ಡ್ ಗಳನ್ನು ತಯಾರಿಸಲಾಗಿದೆ.
ಐಸೋಲೆಶನ್ ಕೋಚ್ ತಯಾರಿಗಾಗಿ ಬಾತ್ ರೂಮ್, ಪಾದಚಾರಿ ಹಾಗೂ ಇತರೆ ಭಾಗಗಳಲ್ಲಿಯೂ ಕೂಡ ಬದಲಾವಣೆ ಮಾಡಲಾಗಿದೆ. ಕೋಚ್ ನಲ್ಲಿ ಸ್ನಾನಕ್ಕಾಗಿ ಒಂದು ಬಕೆಟ್ ಹಾಗೂ ಹ್ಯಾಂಡ್ ಶಾವರ್ ವ್ಯವಸ್ಥೆಯನ್ನು ಮಾಡಲಾಗಿದೆ.
ರೋಗಿಗಳಿಗಾಗಿ ಕ್ಯಾಬಿನ್ ತಯಾರಿಸಲು ಮಧ್ಯದಲ್ಲಿರುವ ಬರ್ತ ಅನ್ನು ಒಂದೆಡೆ ವಾಲಿಸಲಾಗಿದೆ. ರೋಗಿಯ ಎದುರಿಗೆ ಇರುವ ಎಲ್ಲ ಮೂರು ಬರ್ತ್ ಗಳನ್ನು ತೆಗೆದುಹಾಕಲಾಗಿದೆ. ಬರ್ತ ಮೇಲೇರಲು ಅಳವಡಿಸಲಾಗಿದ್ದ ಏಣಿಯನ್ನು ತೆಗೆದು ಹಾಕಲಾಗಿದೆ.
ರೈಲಿನ ಕೋಚ್ ಅನ್ನು ಸ್ಯಾನಿಟೈಸ್ ಗೊಳಿಸಿ ಎರಡೂ ಟಾಯ್ಲೆಟ್ ಗಳನ್ನು ಬಾಥ್ ರೂಮ್ ಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಜೊತೆಗೆ ನೂತನವಾಗಿ ಫ್ಲೋರಿಂಗ್ ಕೂಡ ಮಾಡಲಾಗುತ್ತಿದೆ.
ಈ ಬೋಗಿಗಳಲ್ಲಿ ವೈದ್ಯರು, ದಾಯಿಯರು ಹಾಗೂ ಪ್ಯಾರಾಮೆಡಿಕಲ್ ಸ್ಟಾಫ್ ಗಳಿಗೆ ಪ್ರತ್ಯೇಕ ಕ್ಯಾಬಿನ್ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.