ಮನೆಯ ಈ ದಿಕ್ಕಿನಲ್ಲಿ ಟಾಯ್ಲೆಟ್, ಬಾತ್ ರೂಂ ಇದ್ದರೆ ಉದ್ಯೋಗದಲ್ಲಿ ಪ್ರಗತಿ ಸಾಧ್ಯವೇ ಇಲ್ಲ!ಬಿಟ್ಟೂ ಬಿಡದೆ ಕಾಡುವುದು ಸಮಸ್ಯೆಗಳು
ಮನೆಯಲ್ಲಿ ಶೌಚಾಲಯ ಸರಿಯಾದ ದಿಕ್ಕಿನಲ್ಲಿರುವುದು ಮುಖ್ಯ.ಇಲ್ಲದಿದ್ದರೆ ವೃತ್ತಿಯಲ್ಲಿ ಪ್ರಗತಿಯಾಗುವುದಿಲ್ಲ ಅಥವಾ ಮಕ್ಕಳ ಅಧ್ಯಯನದಲ್ಲಿ ಉತ್ತಮ ಫಲಿತಾಂಶ ಸಿಗುವುದಿಲ್ಲ.
ವಾಸ್ತು ಶಾಸ್ತ್ರದ ಪ್ರಕಾರ, ದಕ್ಷಿಣ ಮತ್ತು ನೈಋತ್ಯ ದಿಕ್ಕನ್ನು ವಿಸರ್ಜನೆಗೆ ಉತ್ತಮವೆಂದು ಪರಿಗಣಿಸಲಾಗುತ್ತದೆ.ಅಂದರೆ ಮನೆಯ ದಕ್ಷಿಣ ದಿಕ್ಕಿನಲ್ಲಿ ಶೌಚಾಲಯ ಕಟ್ಟಿಕೊಳ್ಳುವುದು ಉತ್ತಮ.
ಇದು ಸಾಧ್ಯವಾಗದೆ ಹೋದರೆ ಶೌಚಾಲಯದ ಕಮೋಡ್ ನಲ್ಲಿ ಕುಳಿತುಕೊಳ್ಳುವಾಗ ಮುಖವು ದಕ್ಷಿಣಕ್ಕೆ ಇರುವಂತೆ ನೋಡಿಕೊಳ್ಳಿ.ಇದು ಮನೆಗೆ ಸಮೃದ್ಧಿಯನ್ನು ತರುತ್ತದೆ. ನಕಾರಾತ್ಮಕ ಶಕ್ತಿ ದೂರವಾಗುತ್ತದೆ.
ಮನೆಯ ಉತ್ತರ ದಿಕ್ಕಿನಲ್ಲಿ ಎಂದಿಗೂ ಶೌಚಾಲಯವನ್ನು ನಿರ್ಮಿಸಬೇಡಿ. ಇದರಿಂದ ಕುಟುಂಬದ ಸದಸ್ಯರು ಉದ್ಯೋಗದಲ್ಲಿ ಸಮಸ್ಯೆ ಎದುರಿಸುತ್ತಾರೆ. ಆದಾಯದಲ್ಲಿ ಆಗಾಗ ಅಡಚಣೆಗಳು ಉಂಟಾಗುತ್ತವೆ.ಕಠಿಣ ಪರಿಶ್ರಮ ಮತ್ತು ಲಕ್ಷಾಂತರ ಪ್ರಯತ್ನಗಳ ಹೊರತಾಗಿಯೂ,ವೃತ್ತಿಜೀವನದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತಿಲ್ಲ.ಈಶಾನ್ಯ ದಿಕ್ಕಿನಲ್ಲಿಯೂ ಶೌಚಾಲಯ ನಿರ್ಮಿಸಬಾರದು.
ಟಾಯ್ಲೆಟ್-ಬಾತ್ರೂಮ್ ರಾಹುಗೆ ಸಂಬಂಧಿಸಿದ್ದಾಗಿದೆ.ಆದ್ದರಿಂದ, ಶೌಚಾಲಯವನ್ನು ಕೊಳಕಾಗಿ ಇರಲು ಬಿಡಬೇಡಿ.ಕೊಳಕು ಶೌಚಾಲಯವು ರಾಹುವಿನ ಕೋಪಕ್ಕೆ ಗುರಿಯಾಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ, ZEE NEWS ಅದನ್ನು ಖಚಿತಪಡಿಸುವುದಿಲ್ಲ.