Covid Relaxation: ಸುಮಾರು 5 ತಿಂಗಳ ನಂತರ ಪ್ರವಾಸಿಗರಿಗೆ ತೆರೆದ ಪದ್ಮನಾಭಪುರಂ ಅರಮನೆ
ಕರೋನಾ 2 ನೇ ತರಂಗ ಸೋಂಕಿನಿಂದಾಗಿ ಏಪ್ರಿಲ್ 20 ರಂದು ಪದ್ಮನಾಭಪುರಂ ಅರಮನೆಯನ್ನು ಮುಚ್ಚಲಾಯಿತು. ಕರೋನಾ ಸಾಂಕ್ರಾಮಿಕ ರೋಗವು ಕಡಿಮೆಯಾದ ಹಿನ್ನಲೆಯಲ್ಲಿ ಸುಮಾರು 146 ದಿನಗಳ ನಂತರ ಸೆಪ್ಟೆಂಬರ್ 14ರಿಂದ ಪದ್ಮನಾಭಪುರಂ ಅರಮನೆಯನ್ನು ಮತ್ತೆ ತೆರೆಯಲಾಯಿತು.
ಪದ್ಮನಾಭಪುರಂ ಅರಮನೆಯು ಕನ್ಯಾಕುಮಾರಿ ಜಿಲ್ಲೆಯ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಕರೋನಾದ ಎರಡನೇ ತರಂಗದಿಂದಾಗಿ ಅರಮನೆಯನ್ನು ಏಪ್ರಿಲ್ 21 ರಿಂದ ಮುಚ್ಚಲಾಗಿತ್ತು.
ಕೇರಳದ ಗಡಿಯಾಗಿರುವ ತಮಿಳುನಾಡಿನ ಕನ್ಯಾಕುಮಾರಿ (Kanyakumari) ಜಿಲ್ಲೆಯಲ್ಲಿರುವ ಐತಿಹಾಸಿಕ ಪದ್ಮನಾಭಪುರಂ ಅರಮನೆಯು ಕೇರಳ ಸರ್ಕಾರದ ನಿಯಂತ್ರಣದಲ್ಲಿದೆ.
ಇದನ್ನೂ ಓದಿ- Liquor Rule: ಇಲ್ಲಿ ಎಣ್ಣೆ ಬೇಕು ಅಂದ್ರೆ ಇರಲೇಬೇಕು ಈ ಪ್ರಮಾಣಪತ್ರ
ಈ ಅರಮನೆಯನ್ನು ಕ್ರಿ.ಶ. 1601 ರಲ್ಲಿ ನಿರ್ಮಿಸಲಾಗಿದೆ.
ಕ್ರಿ.ಶ 1795 ರವರೆಗೆ, ಪದ್ಮನಾಭಪುರವು ತಿರುವಾಂಕೂರಿನ ರಾಜಧಾನಿಯಾಗಿತ್ತು.
ಇದನ್ನೂ ಓದಿ- France: ಬಟ್ಟೆ ಇಲ್ಲದೆ ತಿರುಗಾಡಲು ನಿರ್ಬಂಧವಿಲ್ಲ, ಆದರೆ ಪಾವತಿಸಬೇಕು ಬೆತ್ತಲೆ ತೆರಿಗೆ
ಅರಮನೆ ಸಂಕೀರ್ಣವು ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ವೆಲಿ ಬೆಟ್ಟದ ಮೇಲೆ 185 ಎಕರೆ ಪ್ರದೇಶದಲ್ಲಿದೆ. ಇದು ಕೇರಳದ ರಾಜಧಾನಿ ತಿರುವನಂತಪುರಂನಿಂದ (Thiruvananthapuram) 52 ಕಿಮೀ ದೂರದಲ್ಲಿದೆ. ಇದು ತಕ್ಕಲದಿಂದ 2 ಕಿಮೀ ದೂರದಲ್ಲಿದೆ. ದೂರದಲ್ಲಿದೆ.
ರಾಜ್ಯ ಪುನರ್ನಿರ್ಮಾಣ ಕಾಯಿದೆ 1956 ರ ಪ್ರಕಾರ, ಅರಮನೆಯು ಕೇರಳ ಸರ್ಕಾರದ ನಿಯಂತ್ರಣಕ್ಕೆ ಒಳಪಟ್ಟಿತು. ಅರಮನೆಯು ಕೇರಳದ ಪುರಾತತ್ವ ಸರ್ವೇಕ್ಷಣೆಯ ರಕ್ಷಣೆಯಲ್ಲಿದೆ.