Cow Milk Vs Buffalo Milk: ಹಸುವಿನ ಹಾಲು Vs ಎಮ್ಮೆ ಹಾಲು ಯಾವುದು ಹೆಚ್ಚು ಆರೋಗ್ಯಕರ?
ಹಸುವಿನ ಹಾಲಿನಲ್ಲಿ ಎಮ್ಮೆ ಹಾಲಿಗಿಂತ ಪ್ರೊಟೀನ್, ಕೊಬ್ಬು, ಕಾರ್ಬೋಹೈಡ್ರೇಟ್ಸ್ ಎಲ್ಲವೂ ಸಮ ಪ್ರಮಾಣದಲ್ಲಿರುತ್ತದೆ. ಹಸುವಿನ ಹಾಲಿನಲ್ಲಿ ಕ್ಯಾಲೋರಿ ಕಡಿಮೆ ಇದ್ದು, ತೂಕ ನಷ್ಟಕ್ಕೆ ಡಯಟ್ ಮಾಡುವವರೆಗೆ ಇದು ಒಳ್ಳೆಯದು.
ಎಮ್ಮೆ ಹಾಲು ಹಸುವಿನ ಹಾಲಿಗಿಂತ ಹೆಚ್ಚು ಮಂದವಿರುತ್ತದೆ. ಹೀಗಾಗಿ ಬೇಗನೆ ಜೀರ್ಣವಾಗುವುದಿಲ್ಲ. ಕೆಲವರಿಗೆ ಎಮ್ಮೆ ಹಾಲು ಕುಡಿದರೆ ಅಜೀರ್ಣ ಸಮಸ್ಯೆ ಉಂಟಾಗುತ್ತದೆ. ಹಸುವಿನ ಹಾಲು ಬೇಗನೆ ಜೀರ್ಣವಾಗುತ್ತದೆ.
ಎಮ್ಮೆ ಹಾಲಿಗಿಂತ ಹಸುವಿನ ಹಾಲಿನಲ್ಲಿ ವಿಟಮಿನ್ ‘A’ ಅಧಿಕವಿದೆ. ಇದು ಕಣ್ಣುಗಳ ಆರೋಗ್ಯಕ್ಕೆ, ಮೂಳೆಗಳ ಬೆಳವಣಿಗೆಗೆ, ರೋಗ ನಿರೋಧಕ ಶಕ್ತಿ ಹೆಚ್ಚಿಸಲು ತುಂಬಾನೇ ಅವಶ್ಯಕ. ಹೀಗಾಗಿ ಮಕ್ಕಳಿಗೆ ಹಸುವಿನ ಹಾಲು ತುಂಬಾನೇ ಉತ್ತಮವೆಂದು ಹೇಳಲಾಗುತ್ತದೆ.
ಹಸುವಿನ ಹಾಲಿನಲ್ಲಿ ಎಮ್ಮೆ ಹಾಲಿಗಿಂತ ಕೊಲೆಸ್ಟ್ರಾಲ್ ತುಂಬಾ ಕಡಿಮೆ ಇರುತ್ತದೆ. ಕೊಲೆಸ್ಟ್ರಾಲ್ ಹೆಚ್ಚಾದರೆ ಕೊಬ್ಬಿನಂಶ ಹೆಚ್ಚಾಗುವುದು. ಇದರಿಂದ ಹೃದಯಾಘಾತದ ಅಪಾಯ ಹೆಚ್ಚು. ಹೃದಯ ಸಮಸ್ಯೆ ಇರುವವರು ಎಮ್ಮೆ ಹಾಲಿಗಿಂತ ಹಸುವಿನ ಹಾಲು ಕುಡಿಯುವುದು ಉತ್ತಮ.
ಎಮ್ಮೆ ಹಾಲು ಕುಡಿದರೆ ಚೆನ್ನಾಗಿ ನಿದ್ದೆ ಬರುತ್ತದೆ. ನಿದ್ರಾ ಹೀನತೆ ಸಮಸ್ಯೆಯಿಂದ ಬಳಲುತ್ತಿರುವವರು ಹಸುವಿನ ಹಾಲಿಗಿಂತ ಎಮ್ಮೆ ಹಾಲು ಕುಡಿದರೆ ಸುಖ ನಿದ್ರೆ ಬರುತ್ತದೆ. ಕೋವಾ, ಮೊಸರು, ಪನ್ನೀರ್ ಮತ್ತು ಮಲೈ ಮಾಡಲು ಎಮ್ಮೆ ಹಾಲು ಒಳ್ಳೆಯದು.