ಕೋಚಿಂಗ್ ಇಲ್ಲದೆ 2 ಬಾರಿ UPSC ಯಶಸ್ಸು; 21ನೇ ವಯಸ್ಸಿನಲ್ಲಿ IPS, ನಂತರ IAS!

Sat, 04 Nov 2023-5:40 pm,

ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿರುವ UPSC ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಪ್ರತಿಯೊಬ್ಬ ಅಭ್ಯರ್ಥಿಯ ಕನಸಾಗಿರುತ್ತದೆ. ಈ ಸವಾಲಿನ ಪರೀಕ್ಷೆಯಲ್ಲಿ ಕೆಲವೇ ಕೆಲವು ಜನರು ಯಶಸ್ವಿಯಾಗುತ್ತಾರೆ, ಆದರೆ ದಿವ್ಯಾ ತನ್ವರ್ ಈ ಪರೀಕ್ಷೆಯಲ್ಲಿ 2 ಬಾರಿ ಉತ್ತೀರ್ಣರಾಗಿ ಸರ್ಕಾರದಲ್ಲಿ ಗೌರವಾನ್ವಿತ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ದಿವ್ಯಾ ತನ್ವಾರ್ 2021ರಲ್ಲಿ UPSC ಪರೀಕ್ಷೆ ತೆಗೆದುಕೊಂಡಾಗ, ತಮ್ಮ ಮೊದಲ ಪ್ರಯತ್ನದಲ್ಲೇ ಅಖಿಲ ಭಾರತ 438ನೇ ರ್ಯಾಂಕ್ ಗಳಿಸಿದರು. ಕೇವಲ 21ನೇ ವಯಸ್ಸಿನಲ್ಲಿ ದಿವ್ಯಾ ದೇಶದ ಕಠಿಣ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಐಪಿಎಸ್ ಅಧಿಕಾರಿ ಹುದ್ದೆಗೆ ಆಯ್ಕೆಯಾಗಿದ್ದರು. ಈ ಪರೀಕ್ಷೆಗೆ ಅವರು ಯಾವುದೇ ಕೋಚಿಂಗ್ ತೆಗೆದುಕೊಂಡಿರಲಿಲ್ಲ. ಸ್ವಂತ ಪರಿಶ್ರಮದಿಂದ ಕಷ್ಟಪಟ್ಟು ತಾವೇ ಓದಿ ಯಶಸ್ಸು ಸಾಧಿಸಿದರು. ಆದರೆ ತಮ್ಮ ಕನಸಿನ ಐಎಎಸ್ ಪಾಸ್ ಮಾಡಲು ಅವರು ಮತ್ತೊಮ್ಮೆ ಪ್ರಯತ್ನಿಸಿದ್ದರು. 2022ರಲ್ಲಿಅಖಿಲ ಭಾರತ 105ನೇ ಶ್ರೇಯಾಂಕ ಪಡೆಯುವ ಮೂಲಕ IAS ಅಧಿಕಾರಿಯಾಗಿ ತಮ್ಮ ಕನಸು ನನಸು ಮಾಡಿಕೊಂಡರು.

ದಿವ್ಯಾ ಹರಿಯಾಣದ ಮಹೇಂದ್ರಗಢ ನಿವಾಸಿ. ತಮ್ಮ ಆರಂಭಿಕ ಶಿಕ್ಷಣದಲ್ಲಿ ಸರ್ಕಾರಿ ಶಾಲೆಗಳಲ್ಲಿ ಓದಿದ ದಿವ್ಯಾ, ಹೆಚ್ಚಿನ ಶಿಕ್ಷಣಕ್ಕಾಗಿ ಮಹೇಂದ್ರಗಢದ ನವೋದಯ ವಿದ್ಯಾಲಯಕ್ಕೆ ಸೇರಿದರು. ನಂತರ ದಿವ್ಯಾ ಅವರು ವಿಜ್ಞಾನ ವಿಭಾಗದಲ್ಲಿ ಪದವಿ ಪಡೆದರು. ಬಳಿಕ ಅವರು UPSCಗೆ ತಯಾರಿ ಆರಂಭಿಸಿದರು. ಆದರೆ ಅವರ ಮನೆಯ ಆರ್ಥಿಕ ಸ್ಥಿತಿ ಚೆನ್ನಾಗಿರಲಿಲ್ಲ. ದಿವ್ಯಾರ ತಂದೆ 2011ರಲ್ಲಿ ನಿಧನರಾದರು, ಇದು ಅವರ ಕುಟುಂಬಕ್ಕೆ ಬಹಳ ಕಷ್ಟದ ಸಮಯವಾಗಿತ್ತು.

ದಿವ್ಯಾರ ತಾಯಿ ಬಬಿತಾ ತನ್ವಾರ್ ಆಕೆಗೆ ತುಂಬಾ ಬೆಂಬಲ ನೀಡುತ್ತಿದ್ದರು. ಏಕೆಂದರೆ ದಿವ್ಯಾ ಅವರು ಬ್ರೈಟ್ ಸ್ಟೂಡೆಂಟ್ ಆಗಿದ್ದರು. ಯಾವುದೇ ತರಬೇತಿ ಕಾರ್ಯಕ್ರಮಕ್ಕೆ ಪ್ರವೇಶ ಪಡೆಯದೆ ಯುಪಿಎಸ್‌ಸಿ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದರು. ನಂತರ UPSC ಮುಖ್ಯ ಪರೀಕ್ಷೆಗೆ ತಯಾರಾಗಲು ಅವರು ಪರೀಕ್ಷಾ ಸರಣಿ ಸೇರಿದಂತೆ ವಿವಿಧ ಆನ್‌ಲೈನ್ ಸಂಪನ್ಮೂಲಗಳನ್ನು ಬಳಸಿಕೊಂಡರು. ದಿವ್ಯಾರ ತಾಯಿ ಬಬಿತಾ ಒಂಟಿಯಾಗಿಯೇ ಮೂವರು ಒಡಹುಟ್ಟಿದವರನ್ನು ನೋಡಿಕೊಳ್ಳುವ ಜವಾಬ್ದಾರಿ ಹೊತ್ತುಕೊಂಡಿದ್ದರು.

ಇಂದು ದಿವ್ಯಾ ತನ್ವಾರ್ ಸಾಮಾಜಿಕ ಮಾಧ್ಯಮದಲ್ಲಿ ಅಪಾರ ಜನಪ್ರಿಯತೆಯನ್ನು ಹೊಂದಿದ್ದಾರೆ. ಅವರು ನಿರಂತರವಾಗಿ ತನ್ನ ಸ್ನೇಹಿತರು ಮತ್ತು ಅನುಯಾಯಿಗಳೊಂದಿಗೆ ಅನೇಕ ವಿಷಯವನ್ನು ಹಂಚಿಕೊಳ್ಳುತ್ತಿರುತ್ತಾರೆ. ಐಎಎಸ್ ಅಧಿಕಾರಿ ದಿವ್ಯಾ ತನ್ವಾರ್ ಪ್ರಸ್ತುತ 97,000ಕ್ಕೂ ಹೆಚ್ಚು Instagram ಫಾಲೋವರ್ಸ್‍ಗಳನ್ನು ಹೊಂದಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link