ಮೈದಾನಲ್ಲೇ ಕಣ್ಣಿಗೆ ಬಲವಾಗಿ ಬಡಿದ ಬಾಲ್… ಕಣ್ಣಿನ ಜೊತೆ ಕ್ರಿಕೆಟ್ ವೃತ್ತಿಜೀವನವನ್ನು ಕಳೆದುಕೊಂಡ ಸ್ಟಾರ್ ಕ್ರಿಕೆಟಿಗ
2010ರ T20 ವಿಶ್ವಕಪ್’ನ ಅಂತಿಮ ಪಂದ್ಯದಲ್ಲಿ ಕ್ರೇಗ್ ಕೀಸ್ವೆಟರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಕ್ರೇಗ್ ಕೀಸ್ವೆಟರ್ ಅವರು ಆಸ್ಟ್ರೇಲಿಯಾ ವಿರುದ್ಧ 2010 ರ T20 ವಿಶ್ವಕಪ್’ನ ಅಂತಿಮ ಪಂದ್ಯದಲ್ಲಿ 49 ಎಸೆತಗಳಲ್ಲಿ 63 ರನ್’ಗಳ ಇನ್ನಿಂಗ್ಸ್’ಗಳನ್ನು ಆಡಿದರು.
ಕ್ರೇಗ್ ಕೀಸ್ವೆಟರ್ ಅವರ ಇನ್ನಿಂಗ್ಸ್’ನಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್’ಗಳು ಸೇರಿದ್ದವು. 2010ರ T20 ವಿಶ್ವಕಪ್’ನ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ 18 ಎಸೆತಗಳು ಬಾಕಿ ಇರುವಂತೆಯೇ 7 ವಿಕೆಟ್’ಗಳಿಂದ ಜಯಗಳಿಸಿತು.
ಆದರೆ ಕ್ರೇಗ್ ಕೀಸ್ವೆಟರ್ ಅಪಘಾತದಿಂದಾಗಿ ಜೂನ್ 2015 ರಲ್ಲಿ 25 ನೇ ವಯಸ್ಸಿನಲ್ಲಿ ನಿವೃತ್ತಿ ಘೋಷಿಸಬೇಕಾಯಿತು. ಕ್ರೇಗ್ ಕೀಸ್ವೆಟರ್ ಇಂಗ್ಲೆಂಡ್ ಕ್ರಿಕೆಟ್ ತಂಡದ ಉದಯೋನ್ಮುಖ ತಾರೆಯಾಗಿದ್ದರು. ಆದರೆ ದುರದೃಷ್ಟವಶಾತ್ ಇಂಗ್ಲೆಂಡ್ ತಂಡದ ಈ ಸ್ಟಾರ್ ಹೆಚ್ಚು ಕಾಲ ಮಿಂಚಲು ಸಾಧ್ಯವಾಗಲಿಲ್ಲ ಮತ್ತು ಗಂಭೀರವಾದ ಕಣ್ಣಿನ ಗಾಯದಿಂದಾಗಿ ಅವರು ಕ್ರಿಕೆಟ್ ಮೈದಾನದಿಂದ ದೂರ ಉಳಿಯಬೇಕಾಯಿತು.
ಆ T20 ವಿಶ್ವಕಪ್ ಪಂದ್ಯಾವಳಿಯಲ್ಲಿ, ಕ್ರೇಗ್ 261 ರನ್ ಗಳಿಸಿದರು. ಆದರೆ 2014 ರಲ್ಲಿ ಕೌಂಟಿ ಕ್ರಿಕೆಟ್ ಪಂದ್ಯದ ಸಂದರ್ಭದಲ್ಲಿ, ಅವರ ಸಹ ಆಟಗಾರ ಡೇವಿಡ್ ವಿಲ್ಲಿ ಎಸೆದ ಚೆಂಡು ಅವರ ಹೆಲ್ಮೆಟ್‌ಗೆ ಬಡಿದು ಅವರ ಕಣ್ಣಿಗೆ ತಾಗಿತು.
ಆ ಗಾಯದ ನಂತರ ಇಂಗ್ಲೆಂಡಿನ ಈ ಪ್ರತಿಭಾವಂತ ಆಟಗಾರ ಮತ್ತೆ ಕ್ರಿಕೆಟ್ ಕ್ಷೇತ್ರಕ್ಕೆ ಮರಳಲು ಸಾಧ್ಯವಾಗದೇ 25ನೇ ವಯಸ್ಸಿನಲ್ಲಿ ನಿವೃತ್ತಿ ಪಡೆದು ಮರೆಯಾದರು.