ರವಿಚಂದ್ರನ್ ಪ್ರೀತಿಸಿ ಮದುವೆಯಾಗಬೇಕು ಅಂದುಕೊಂಡಿದ್ದು ಈ ನಟಿಯನ್ನಂತೆ! ತಂದೆಯ ಮಾತಿಗೆ ಕಟ್ಟು ಬಿದ್ದು ತನ್ನ ಪ್ರೇಮಲೋಕದಿಂದಲೇ ದೂರವಾದರಂತೆ!
ರವಿಚಂದ್ರನ್ ತಂದೆ ಎನ್. ರಾಸ್ವಾಮಿ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ. ಹಾಗಾಗಿ ಕ್ರೇಜಿಸ್ಟಾರ್ ಚಿತ್ರರಂಗಕ್ಕೆ ಕಾಲಿಡುವುದು ಕಷ್ಟವಾಗಲಿಲ್ಲ. ಸಿನಿಮಾದ ಗೀಳು ಇಲ್ಲಿಂದಲೇ ಶುರುವಾಗಿದ್ದು ಎಂದರೂ ತಪ್ಪಲ್ಲ.
ರವಿಚಂದ್ರನ್ ಪತ್ನಿ ಸುಮತಿ.ತನ್ನ ಬದುಕಿನ ಏಳು ಬೀಳುಗಳಲ್ಲಿ ಜೊತೆ ನಿಂತ ಪತ್ನಿ ಬಗ್ಗೆಯೂ ರವಿಚಂದ್ರನ್ ಬಹಳ ಹೆಮ್ಮೆಯಾಗುತ್ತಾರೆ. ತನ್ನ ಕುಟುಂಬವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾ ಬಂದ ಪತ್ನಿ ಸುಮತಿ ಬಗ್ಗೆ ವಿಶೇಷ ಗೌರವ, ಪ್ರೀತಿ ಇದೆ.
ರವಿಚಂದ್ರನ್ ಸಿನಿಮಾದಲ್ಲಿ ಅನೇಕ ನಟಿಯರೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದಾರೆ.ಈ ನಟಿಯರ ಪೈಕಿ ಒಬ್ಬರನ್ನು ರವಿಚಂದ್ರನ್ ಬಹಳವಾಗಿ ಪ್ರೀತಿಸುತ್ತಿದ್ದರಂತೆ.
ಆದರೆ ರವಿಚಂದ್ರನ್ ತಂದೆ ಅದಾಗಲೇ ಸುಮತಿ ಅವರನ್ನು ರವಿಚಂದ್ರನ್ ಗೆ ತಂದುಕೊಳ್ಳುವ ಬಗ್ಗೆ ನಿರ್ಧಾರ ಮಾಡಿ ಆಗಿತ್ತಂತೆ.ಈ ಮಧ್ಯೆ ತನ್ನ ಪ್ರೀತಿಯ ಮಾತು ತಂದೆಗೆ ಹೇಳಿ ಮನಸ್ಸು ನೋಯಿಸಬಾರದು ಎಂದು ಸುಮ್ಮನಾದ್ರಂತೆ ರವಿಮಾಮ.
ಅಪ್ಪ ತನಗೆ ನೀಡಿದ ಪ್ರೀತಿ ದೊಡ್ಡದು. ಅವರ ಪ್ರೀತಿ ಮುಂದೆ ತನ್ನ ಪ್ರೀತಿ ಏನೂ ಅಲ್ಲ ಅಂದುಕೊಂಡು ತನ್ನ ಪ್ರೀತಿ ಬಗ್ಗೆ ಬಾಯಿ ಬಿಡಲೇ ಇಲ್ಲವಂತೆ. ಈ ವಿಚಾರವನ್ನು ರವಿಚಂದ್ರನ್ ಅನೇಕ ಬಾರಿ ಹೇಳಿಕೊಂಡಿದ್ದಾರೆ.