Credit Card Rules: ಕ್ರೆಡಿಟ್ ಕಾರ್ಡ್‌ನ ಬದಲಾಗಿರುವ ಈ ನಿಯಮಗಳ ಬಗ್ಗೆ ತಿಳಿದಿದೆಯೇ?

Tue, 05 Mar 2024-8:04 am,

ಕಳೆದ ಕೆಲವು ವರ್ಷಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಕೆದಾರರ ಸಂಖ್ಯೆ ವೇಗವಾಗಿ ಹೆಚ್ಚಾಗಿದೆ. ದೇಶದ ಪ್ರಮುಖ ಖಾಸಗಿ ಮತ್ತು ಸಾರ್ವಜನಿಕ ಕ್ರೆಡಿಟ್ ಕಾರ್ಡ್ ನೀಡುವ ಬ್ಯಾಂಕ್‌ಗಳು ಕ್ರೆಡಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ನಿಯಮಗಳನ್ನು ಬದಲಾಯಿಸಿವೆ.  ಆ ನಿಮಯಗಳು ಯಾವುವು ಎಂಬುದರ ಬಗ್ಗೆ ತಿಳಿಯೋಣ... 

ನೀವು ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದರೆ ಈಗ ಮೊದಲಿಗಿಂತ ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗಬಹುದು. ಹೊಸ ನಿಯಮಗಳ ಪ್ರಕಾರ, ಪ್ರತಿ ಶುಲ್ಕ ಪಾವತಿಗೆ 1% ಶುಲ್ಕ ವಿಧಿಸಲಾಗುತ್ತದೆ. ಇದರ ಹೊರತಾಗಿ, ನೀವು ವಿದೇಶದಲ್ಲಿ ಭಾರತೀಯ ಕರೆನ್ಸಿಯನ್ನು ಬಳಸಿಕೊಂಡು ಯಾವುದೇ ರೀತಿಯ ವಹಿವಾಟು ಮಾಡಿದರೆ ಅಥವಾ ವಿದೇಶದಲ್ಲಿ ನೋಂದಾಯಿಸಲಾದ ಭಾರತೀಯ ಅಂಗಡಿಯವರಿಗೆ ಪಾವತಿ ಮಾಡಿದರೆ, ನೀವು 1% ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ನಿಯಮವು ಇಂದಿನಿಂದ ಅಂದರೆ ಮಾರ್ಚ್ 5, 2024 ರಿಂದ ಅನ್ವಯವಾಗುತ್ತದೆ.

ನೀವು ಎಸ್‌ಬಿ‌ಐ ಕ್ರೆಡಿಟ್ ಕಾರ್ಡ್‌ನಲ್ಲಿ ಕನಿಷ್ಠ ಪಾವತಿಯ ಲೆಕ್ಕಾಚಾರ ಬದಲಾಗಿದೆ. ಇದರನ್ವಯ ಇದುವರೆಗೆ ಕನಿಷ್ಠ ಪಾವತಿಯನ್ನು ಒಟ್ಟು GST, EMI ಮೊತ್ತ, ನೀವು ಮಾಡಿದ ಎಲ್ಲಾ ಶುಲ್ಕಗಳು ಮತ್ತು ವೆಚ್ಚಗಳ 100% ಮತ್ತು ಮುಂಗಡದ 5% ಎಂದು ಲೆಕ್ಕ ಹಾಕಲಾಗುತ್ತಿತ್ತು. ಆದರೆ ಅದರ ನಿಯಮಗಳು ಮಾರ್ಚ್ 15 ರಿಂದ ಬದಲಾಗಲಿವೆ. 

ಐ‌ಸಿ‌ಐ‌ಸಿ‌ಐ ಕ್ರೆಡಿಟ್ ಕಾರ್ಡ್‌ನಲ್ಲಿ ಏರ್ಪೋರ್ಟ್  ಲಾಂಜ್ ಪ್ರವೇಶದ ನಿಯಮಗಳು ಏಪ್ರಿಲ್ 1, 2024 ರಿಂದ  ಬದಲಾಗಲಿದೆ. ಈ ನಿಯಮದ ಪ್ರಕಾರ, ನೀವು ಹಿಂದಿನ ತ್ರೈಮಾಸಿಕದಲ್ಲಿ (ಜನವರಿ-ಫೆಬ್ರವರಿ-ಮಾರ್ಚ್ 2024) ರೂ. 35,000 ಖರ್ಚು ಮಾಡಿದ್ದರೆ, ಮುಂದಿನ ತ್ರೈಮಾಸಿಕದಲ್ಲಿ (ಏಪ್ರಿಲ್-ಮೇ-ಜೂನ್ 2024) ನೀವು ಒಮ್ಮೆ ಉಚಿತ ಲೌಂಜ್ ಅನ್ನು ಬಳಸಬಹುದು. ಇದರರ್ಥ ನೀವು ಏಪ್ರಿಲ್‌ನಿಂದ ಜೂನ್ 2024 ರವರೆಗೆ ಏರ್‌ಪೋರ್ಟ್ ಲಾಂಜ್‌ಗೆ ಉಚಿತ ಪ್ರವೇಶವನ್ನು ಬಯಸಿದರೆ, ನಂತರ ನೀವು ಜನವರಿಯಿಂದ ಮಾರ್ಚ್ 2024 ರ ನಡುವೆ ಕಾರ್ಡ್‌ನಲ್ಲಿ ಕನಿಷ್ಠ 35,000 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಗಮನಾರ್ಹವಾಗಿ, ಈ ನಿಯಮಾವು ಪ್ರತಿ ತ್ರೈಮಾಸಿಕದ ಆಧಾರದ ಮೇಲೆ ಅನ್ವಯವಾಗುತ್ತದೆ. 

ಎಚ್‌ಡಿ‌ಎಫ್‌ಸಿ ಬ್ಯಾಂಕ್ ಸಹ ರೆಗಾಲಿಯಾ ಮತ್ತು ಮಿಲೇನಿಯಾ ಕ್ರೆಡಿಟ್ ಕಾರ್ಡ್‌ಗಳ ನಿಯಮಗಳನ್ನು ಬದಲಾಯಿಸಿದೆ. ರೆಗಾಲಿಯಾ ಕಾರ್ಡ್‌ನಲ್ಲಿ ಲಾಂಜ್ ಪ್ರವೇಶ ನಿಯಮಗಳನ್ನು ಡಿಸೆಂಬರ್ 1, 2023 ರಿಂದ ಜಾರಿಗೆ ಬರುವಂತೆ ಬದಲಾಯಿಸಲಾಗಿದೆ. ಹೊಸ ನಿಯಮಗಳ ಪ್ರಕಾರ, ಲೌಂಜ್ ಪ್ರವೇಶವು ಕ್ರೆಡಿಟ್ ಕಾರ್ಡ್ ವೆಚ್ಚವನ್ನು ಆಧರಿಸಿರುತ್ತದೆ. ಇದರ ಪ್ರಕಾರ, ಪ್ರತಿ ಕ್ಯಾಲೆಂಡರ್ ತ್ರೈಮಾಸಿಕದಲ್ಲಿ ನೀವು 1 ಲಕ್ಷ ರೂ.ಗಳಿಗಿಂತ ಹೆಚ್ಚು ಖರ್ಚು ಮಾಡಿದರೆ  ಎರಡು ಲೌಂಜ್ ಪ್ರವೇಶ ವೋಚರ್‌ಗಳನ್ನು ಪಡೆಯುತ್ತೀರಿ. ಅಂತೆಯೇ, ಎಚ್‌ಡಿ‌ಎಫ್‌ಸಿ ಮಿಲೇನಿಯಾ ಕಾರ್ಡ್‌ನೊಂದಿಗೆ ಪ್ರತಿ ತ್ರೈಮಾಸಿಕದಲ್ಲಿ  1 ಲಕ್ಷ  ರೂ. ಖರ್ಚು ಮಾಡಿದರೆ, ನೀವು ಒಂದು ಲಾಂಜ್ ಪ್ರವೇಶವನ್ನು ಪಡೆಯಬಹುದಾಗಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link