ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ತಂದೆ ಯಾರು ಗೊತ್ತಾ? ಇವರು ದೇಶದ ಪ್ರಖ್ಯಾತ ಕವಿ ಮತ್ತು ಬರಹಗಾರ
ಇಂದು ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ತಂದೆ ರಮೇಶ್ ತೆಂಡೂಲ್ಕರ್ ಅವರ 25ನೇ ಪುಣ್ಯತಿಥಿ. ಈ ಸಂದರ್ಭದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
‘ಬಾಬಾ ನಮ್ಮನ್ನು ಅಗಲಿ 25 ವರ್ಷಗಳು ಕಳೆದಿವೆ. ಆದರೆ ಇಂದು ಅವರ ಹಳೆಯ ಕುರ್ಚಿಯ ಬಳಿ ನಿಂತರೆ ಅವರು ಇಲ್ಲೇ ಇದ್ದಾರೆ ಎಂಬಂತೆ ಭಾಸವಾಗುತ್ತದೆ’ ಎಂದು ಬರೆದಿದ್ದಾರೆ.
“ಆ ಸಮಯದಲ್ಲಿ ನಾನು ಕೇವಲ 26 ವರ್ಷ ವಯಸ್ಸಿನವನಾಗಿದ್ದೆ. ಈಗ, 51 ವರ್ಷ ವಯಸ್ಸು… ನನ್ನ ಜೀವನದಲ್ಲಿ ಮತ್ತು ಇತರ ಅನೇಕರ ಜೀವನದಲ್ಲಿ ಎಷ್ಟು ಪ್ರಭಾವ ಬೀರಿದನೆಂದು ನಾನು ಸ್ಪಷ್ಟವಾಗಿ ನೋಡಿದ್ದೇನೆ. 25ನೇ ವರ್ಷದ ಪುಣ್ಯತಿಥಿ. 43 ವರ್ಷಗಳ ನಂತರ ಈ ಸ್ಥಳದಲ್ಲಿರುವುದು ನಂಬಲಾಗದಷ್ಟು ಭಾವನಾತ್ಮಕವಾಗಿದೆ” ಎಂದು ಬರೆದುಕೊಂಡಿದ್ದಾರೆ.
ಸಚಿನ್ ತೆಂಡೂಲ್ಕರ್ ತಂದೆ ರಮೇಶ್ ತೆಂಡೂಲ್ಕರ್ ಅವರು 19 ಮೇ 1999 ರಂದು ಹೃದಯಾಘಾತದಿಂದ ನಿಧನರಾದರು. ಆಗ ಅವರಿಗೆ 68 ವರ್ಷ.
ಅಂದಹಾಗೆ ರಮೇಶ್ ತೆಂಡೂಲ್ಕರ್ ಒಬ್ಬ ಭಾರತೀಯ ಮರಾಠಿ ಕವಿ ಮತ್ತು ಕಾದಂಬರಿಕಾರ.