Photos: ಬೆಸ್ಟ್ ಫ್ರೆಂಡ್ ಜೊತೆ ಸಲಿಂಗ ಮದುವೆಯಾದ 4 ವಿಶ್ವಕಪ್ ಗೆದ್ದ ಸ್ಟಾರ್ ಕ್ರಿಕೆಟ್ ಆಟಗಾರ್ತಿ!

Mon, 17 Apr 2023-1:33 am,

ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಆಲ್ ರೌಂಡರ್ ಜೆಸ್ಸಿಕಾ ಜೊನಾಸ್ಸೆನ್ ತನ್ನ ಸ್ನೇಹಿತೆ ಸಾರಾಜ್ ವೇರ್ನ್ ಅವರೊಂದಿಗೆ ಹವಾಯಿಯ ಮ್ಯಾಜಿಕ್ ದ್ವೀಪದಲ್ಲಿ ವಿವಾಹವಾಗಿದ್ದಾರೆ.

4 ಬಾರಿ ವಿಶ್ವಕಪ್  ಗೆದ್ದಿರುವ ಜೆಸ್ಸಿಕಾ, ಮಹಿಳಾ ಪ್ರೀಮಿಯರ್ ಲೀಗ್’ನಲ್ಲಿಯೂ ಸಹ ಭಾಗವಹಿಸಿದ್ದರು. ಇನ್ನು ತಮ್ಮ ಮದುವೆಯ ಫೋಟೋಗಳನ್ನು ಟ್ವಿಟ್ಟರ್’ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

“ಸರ್ಪೈಸ್…! 3 ನೇ ಬಾರಿಗೆ ಅದೃಷ್ಟ. ಅಂತಿಮವಾಗಿ ನನ್ನ ಅತ್ಯುತ್ತಮ ಸ್ನೇಹಿತೆಯನ್ನು ವಿವಾಹವಾದೆ. ಏಪ್ರಿಲ್ 6 ಯಾವಾಗಲೂ ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿರುವ ದಿನ ”ಎಂದು ಜೆಸ್ಸಿಕಾ ಜೊನಾಸ್ಸೆನ್ ಟ್ವಿಟ್ಟರ್’ನಲ್ಲಿ ಫೋಟೋ ಶೇರ್ ಮಾಡಿ ಹೇಳಿದ್ದಾರೆ.

ಈ ಫೋಟೋಗಳಲ್ಲಿ ಜೆಸ್ಸಿಕಾ ಮತ್ತು ಸಾರಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

ಈ ಫೋಟೋವನ್ನು ಹಂಚಿಕೊಂಡ ತಕ್ಷಣ, ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಸುಮಾರು 1.8 ಲಕ್ಷಕ್ಕೂ ಹೆಚ್ಚು ಜನರು ಈ ಫೋಟೋಗಳನ್ನು ನೋಡಿದ್ದು, 3000 ಹೆಚ್ಚು ಲೈಕ್ಸ್ ಬಂದಿವೆ.

ಇವರ ಫೋಟೋಗಳಿಗೆ ಅಭಿನಂದನೆ ತಿಳಿಸಿರುವ ಫ್ಯಾನ್ಸ್ ಹೀಗೆ ಹೇಳಿದ್ದಾರೆ. “ಗ್ರೇಟ್, ನಿಮ್ಮಿಬ್ಬರಿಗೂ ಅಭಿನಂದನೆಗಳು” ಎಂದು ಒಬ್ಬರು ಹೇಳಿದರೆ, ಇನ್ನೊಬ್ಬರು " ಸಂತೋಷದ ದಾಂಪತ್ಯ ಜೀವನ ನಿಮ್ಮದಾಗಲಿ" ಎಂದು ಹರಸಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link