ಕ್ರಿಕೆಟಿಗ ಇಶಾನ್‌ ಕಿಶನ್‌ ಗರ್ಲ್‌ ಫ್ರೆಂಡ್‌ ಸದ್ಯ ದೇಶದಲ್ಲಿ ಮಿಂಚುತ್ತಿರುವ ಖ್ಯಾತ ನಟಿ! ಈ ಬ್ಯೂಟಿ 3 ಮಿಲಿಯನ್‌ ಡಾಲರ್‌ ಆಸ್ತಿ ಒಡತಿ

Thu, 01 Aug 2024-3:26 pm,

ಭಾರತ ಕ್ರಿಕೆಟ್ ತಂಡದ ಅದ್ಭುತ ಆಟಗಾರ ಎಂದೇ ಖ್ಯಾತರಾಗಿರುವ ಇಶಾನ್ ಕಿಶನ್ ಸದ್ಯ ಅವಕಾಶಗಳನ್ನು ಪಡೆದುಕೊಳ್ಳುತ್ತಿರುವುದು ಕಡಿಮೆಯಾಗಿದೆ. ಆದರೆ ನಾವಿಂದು ಅವರ ಗೆಳತಿ ಅದಿತಿ ಹುಂಡಿಯಾ ಬಗ್ಗೆ ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ.

ಇಶಾನ್ ಕಿಶನ್ ಬಗ್ಗೆ ಯಾವುದೇ ಪರಿಚಯ ಅಗತ್ಯವಿಲ್ಲ. ಬಾಂಗ್ಲಾದೇಶ ವಿರುದ್ಧ ಬಿರುಸಿನ 210 ರನ್ ಗಳಿಸಿದ ಇಶಾನ್ ಕಿಶನ್ ಎಲ್ಲೆಡೆ ಪ್ರಶಂಸೆ ಪಡೆದಿದ್ದರು. ಇಶಾನ್ ಕಿಶನ್ ಜೊತೆಗೆ ಅವರ ರೂಮರ್ಡ್‌ ಗರ್ಲ್‌ ಫ್ರೆಂಡ್‌ ಅದಿತಿ ಹುಂಡಿಯಾ ಕೂಡ ಸಾಕಷ್ಟು ಸುದ್ದಿಯಾಗುತ್ತಿದ್ದಾರೆ.

 

ಅದಿತಿ ಹುಂಡಿಯಾ, ವೃತ್ತಿಯಲ್ಲಿ ಮಾಡೆಲ್ ಆಗಿದ್ದು, ಸೋಶಿಯಲ್‌ ಮೀಡಿಯಾ ಕ್ವೀನ್‌ ಎಂದೇ ಹೆಸರು ಮಾಡಿದವರು. ಅಷ್ಟೇ ಅಲ್ಲದೆ, ಜಾಹೀರಾತುಗಳು ಮತ್ತು ಮ್ಯೂಸಿಕ್ ವೀಡಿಯೊಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಾರೆ.

 

ಇಶಾನ್ ಕಿಶನ್ ಅವರ ರೂಮರ್ಡ್‌ ಗರ್ಲ್‌ ಫ್ರೆಂಡ್‌ ಅದಿತಿ 2017 ರಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಗಮನ ಸೆಳೆದಿದ್ದರು ಅಷ್ಟೇ ಅಲ್ಲದೆ, ಫೈನಲಿಸ್ಟ್ ಕೂಡ ಆಗಿದ್ದರು. ಇದಾದ ನಂತರ, ಮುಂದಿನ ವರ್ಷ ಅಂದರೆ 2018 ರಲ್ಲಿ, ಅದಿತಿ ಮಿಸ್ ಸುಪ್ರಾನ್ಯಾಷನಲ್ ಇಂಡಿಯಾ ಪ್ರಶಸ್ತಿಯನ್ನು ಗೆದ್ದರು.

 

ಬ್ಯೂಟಿ ಮತ್ತು ಫಿಟ್ ನೆಸ್ ವಿಚಾರದಲ್ಲಿ ಅದಿತಿ ಬಾಲಿವುಡ್ ಹೀರೋಯಿನ್ʼಗಳಿಗಿಂತ ಕಡಿಮೆ ಇಲ್ಲ. ಸಾಮಾಜಿಕ ಮಾಧ್ಯಮ ಖಾತೆ Instagram ನಲ್ಲಿ, ಲಕ್ಷಾಂತರ ಫಾಲೋವರ್ಸ್‌ ಹೊಂದಿರುವ ಇವರು, ಅನೇಕ ಪೋಸ್ಟ್ʼಗಳನ್ನು ಶೇರ್‌ ಮಾಡುತ್ತಲೇ ಇರುತ್ತಾರೆ.

 

ಇನ್ನು ಇಶಾನ್‌ ಕಿಶನ್‌ ಆಗಲಿ, ಅದಿತಿಯಾಗಲಿ ತಮ್ಮ ಸಂಬಂಧದ ಬಗ್ಗೆ ಇನ್ನೂ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲವಾದರೂ, ಅಭಿಮಾನಿಗಳು ಅವರನ್ನು ಜೋಡಿಯಾಗಿ ನೋಡಲು ಕಾಯುತ್ತಿದ್ದಾರೆ.

ಅದಿತಿ ಮ್ಯೂಸಿಕ್ ವೀಡಿಯೊಗಳು, ಜಾಹೀರಾತುಗಳು ಮತ್ತು ಅನುಮೋದನೆಗಳ ಮೂಲಕ ಉತ್ತಮ ಸಂಭಾವನೆ ಪಡೆಯುತ್ತಾರೆ. ಮುಂಬೈನಲ್ಲಿರುವ ತನ್ನ ಮನೆಯಲ್ಲಿ ವಾಸಿಸುತ್ತಿರುವ ಅದಿತಿ ಅನೇಕ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಜೊತೆಗೆ ಈಕೆಯ ಅಂದಾಜು ಆಸ್ತಿ ಮೌಲ್ಯ ಸುಮಾರು 3 ಮಿಲಿಯನ್ ಡಾಲರ್.

ZEENEWS TRENDING STORIES

By continuing to use the site, you agree to the use of cookies. You can find out more by Tapping this link