ಈ ಮನಮೋಹಕ ಸುಂದರಿ ಒಲಂಪಿಕ್ಸ್ ಆಟಗಾರ್ತಿ.. ಈಕೆಯ ಪತಿ MI ತಂಡದ ಸ್ಟಾರ್ ಆಟಗಾರ..ಯಾರು ಗೊತ್ತಾ..?
ಪ್ಯಾರಿಸ್ ಒಲಿಂಪಿಕ್ಸ್ ಆರಂಭಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇವೆ. ಆಸ್ಟ್ರೇಲಿಯನ್ ಆಟಗಾರರು ತಮ್ಮ ಪ್ರತಿಭೆಯನ್ನು ತೋರಿಸಲು ಸಜ್ಜಾಗಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪುರುಷ ಮತ್ತು ಮಹಿಳಾ ಹಾಕಿ ಆಸ್ಟ್ರೇಲಿಯಾ ತಂಡಗಳು ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದೆ. ಆಸ್ಟ್ರೇಲಿಯಾದ ಮಹಿಳಾ ತಂಡದಲ್ಲಿ, ಕ್ರಿಕೆಟಿಗ ಟಿಮ್ ಡೇವಿಡ್ ಅವರ ಪತ್ನಿ ಸ್ಟೆಫನಿ ಕೆರ್ಶಾ ಕೂಡ ಸೇರಿದ್ದಾರೆ.
ಸ್ಟೆಫನಿ ಕೆರ್ಶಾ ಸುಮಾರು ಒಂದು ದಶಕದಿಂದ ಆಸ್ಟ್ರೇಲಿಯನ್ ಹಾಕಿ ತಂಡದ ಪ್ರಮುಖ ಸದಸ್ಯರಾಗಿ ಆಟವಾಡುತ್ತಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ನಂತರ ಎರಡನೇ ಒಲಿಂಪಿಕ್ಸ್‌ಗೆ ಸ್ಟೆಫನಿ ಇದೀಗ ಸಜ್ಜಾಗಿದ್ದಾಳೆ. ಟೋಕಿಯೊದಲ್ಲಿ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಭಾರತ ಸೋಲಿಸಿತು. ಈ ಸೋಲಿನೊಂದಿಗೆ ಆಸ್ಟ್ರೇಲಿಯಾದ ಮಹಿಳಾ ಹಾಕಿ ತಂಡದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಕನಸು ಕೂಡ ಭಗ್ನಗೊಂಡಿದೆ.
ಆಸ್ಟ್ರೇಲಿಯದ ಮಹಿಳಾ ಹಾಕಿ ತಂಡ ಪ್ಯಾರಿಸ್‌ನಲ್ಲಿ ತನ್ನ ಶಕ್ತಿ ಪ್ರದರ್ಶಿಸಲು ಉತ್ಸುಕವಾಗಿ ಕಾಯುತ್ತಿದೆ. 24 ವರ್ಷಗಳ ಚಿನ್ನದ ಪದಕದ ಬರವನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿರುವ ಆಸ್ಟ್ರೇಲಿಯಾ ತಂಡದ ಸ್ಟೆಫನಿ ಕೆರ್ಶಾ ಅವರ ಅನುಭವ ಇದರಲ್ಲಿ ಮಹತ್ವದ್ದಾಗಿದೆ. ಆಸ್ಟ್ರೇಲಿಯಾ 2000ನೇ ಇಸವಿಯಲ್ಲಿ ಕೊನೆಯ ಬಾರಿಗೆ ಮಹಿಳಾ ಹಾಕಿಯಲ್ಲಿ ಚಿನ್ನದ ಪದಕ ಗೆದ್ದಿತ್ತು.
ಆಸ್ಟ್ರೇಲಿಯಾದ ಮಹಿಳಾ ಹಾಕಿ ತಂಡವು 2000 ರಿಂದ ಒಲಿಂಪಿಕ್ ಚಿನ್ನದ ಪದಕವನ್ನು ಗೆದ್ದಿಲ್ಲ. ಸ್ಟೆಫನಿ ಕೆರ್ಶಾ ಈ ದೀರ್ಘ ಕಾಯುವಿಗೆ ಕೊನೆ ಬೀಳಲಿದೆ ಎನ್ನುವ ಆಶಯದಿಂದ ಕಣಕ್ಕಿಳಿಯಲು ಸಜಜಾಗಿದ್ದಾರೆ. ಮತ್ತೊಂದೆಡೆ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಬೌಲರ್ ಗಳನ್ನು ನಾಶ ಮಾಡಿರುವ ಟಿಮ್ ಡೇವಿಡ್ ಸದ್ಯ ಕ್ರಿಕೆಟ್ ನಿಂದ ವಿರಾಮ ಪಡೆದಿದ್ದಾರೆ. ಏತನ್ಮಧ್ಯೆ, ಅವರ ಪತ್ನಿ ಸ್ಟೆಫನಿ ಪ್ಯಾರಿಸ್‌ನಲ್ಲಿ ನಡೆಯಲಿರುವ ಮುಂಬರುವ ಪಂದ್ಯಗಳ ತಯಾರಿಯಲ್ಲಿ ಸಂಪೂರ್ಣವಾಗಿ ಗಮನಹರಿಸಿದ್ದಾರೆ.
ಆಸ್ಟ್ರೇಲಿಯಾದ ಆಲ್ ರೌಂಡರ್ ಟಿಮ್ ಡೇವಿಡ್ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ತಂಡ ಪ್ರತಿ ಋತುವಿನಲ್ಲಿ ಟಿಮ್ ಡೇವಿಡ್‌ಗೆ 8 ಕೋಟಿ 25 ಲಕ್ಷ ರೂ. ಬಿಡ್ ಮಾಡಿ ಆಟಗಾರರನನ್ನು ತಂಡದಲ್ಲಿ ಉಳಿಸಿಕೊಂಡಿದೆ. ಸ್ಟೆಫನಿ ತನ್ನ ಆಟದಿಂದ ಅಷ್ಟೇ ಅಲ್ಲ ತನ್ನ ಸೌಂದರ್ಯದಿಂದಾಗಿ ಕೂಡ ಸದಾ ಸುದ್ದಿಯಲ್ಲಿರುತ್ತಾರೆ.