ಸ್ಟಾರ್‌ ಕ್ರಿಕೆಟಿಗ ವಿರಾಟ್‌ ಕೊಹ್ಲಿ ನಾದಿನಿ ದಕ್ಷಿಣ ಭಾರತದ ಜನಪ್ರಿಯ ನಟಿ: ಸಿನಿರಂಗವನ್ನೇ ಆಳುತ್ತಿರುವ ಹಾಟ್‌ ಬ್ಯೂಟಿ ಈಕೆ! ಯಾರೆಂದು ಗೆಸ್‌ ಮಾಡುವಿರಾ?

Tue, 20 Aug 2024-8:56 pm,

ಕೆಲವು ನಾಯಕಿಯರು ಚಿತ್ರರಂಗದಲ್ಲಿ ಜನಪ್ರಿಯತೆ ಗಳಿಸಲು ಬಹಳ ಸಮಯ ಹಿಡಿಯುತ್ತದೆ. ಕೆಲವರಿಗೆ ಒಂದೋ ಎರಡೋ ಸಿನಿಮಾಗಳಿಂದಲೇ ಒಳ್ಳೆಯ ಕ್ರೇಜ್ ಸಿಗುತ್ತದೆ.

 

ಆದರೆ ರುಹಾನಿ ಶರ್ಮಾ ಎಂಬವರು ಮಾತ್ರ ತನ್ನ ಚೊಚ್ಚಲ ಸಿನಿಮಾದ ಮೂಲಕವೇ ಜನಮನ ಗೆದ್ದಿದ್ದಾರೆ. ಈ ಚೆಲುವೆ ʼಚಿ ಲ ಸೌʼ ಚಿತ್ರದ ಮೂಲಕ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದಾರೆ.

 

ಆ ಬಳಿಕ ತೆಲುಗಿನ ಪ್ರಖ್ಯಾತ ನಟ ವಿಶ್ವಕ್ ಸೇನ್ ಜೊತೆಯೂ ಹಿಟ್ ಸಿನಿಮಾದಲ್ಲಿ ರುಹಾನಿ ನಟಿಸಿದ್ದರು. ಈ ಸಿನಿಮಾ ಕೂಡ ಸೂಪರ್ ಹಿಟ್ ಆಗಿತ್ತು. ಆದರೆ ಅದಾದ ಬಳಿಕ ನಟಿಸಿದ ಎರಡು ಸಿನಿಮಾಗಳು ಸಹ ಪ್ಲಾಪ್‌ ಆಗಿವೆ.

 

ಅಂದಹಾಗೆ ರುಹಾನಿ ಶರ್ಮಾ ಈ ವರ್ಷ ಸೈಂಧವ್ ಚಿತ್ರದಲ್ಲಿ ನಟಿಸಿದ್ದರು. ಆದರೆ ಆ ಸಿನಿಮಾ ಕೂಡ ಅಟ್ಟರ್‌ ಪ್ಲಾಪ್‌ ಆಗಿದೆ.

 

ಇತ್ತೀಚಿಗೆ ಈ ಬ್ಯೂಟಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ‘ಆಗ್ರಾ’ ಸಿನಿಮಾದಲ್ಲಿ ಈ ಚೆಲುವೆ ಬೋಲ್ಡ್ ಆಗಿದ್ದ ನಟಿಸಿದ್ದರು. ಆ ವೀಡಿಯೋ ನೋಡಿ ನೆಟ್ಟಿಗರೆಲ್ಲಾ ಶಾಕ್ ಆಗಿದ್ದಾರೆ.

 

ಇನ್ನು ಇಂತಹ ಸಿನಿಮಾಗಳಲ್ಲಿ ಅವಕಾಶ ಪಡೆಯಬೇಕೆಂದರೆ ನಟಿಸಲೇ ಬೇಕೆಂದು ಅನೇಕರು ಕಾಮೆಂಟ್ ಮಾಡುತ್ತಿದ್ದಾರೆ.

 

ಅಂದಹಾಗೆ ಈ ಸುಂದರಿ ಬಾಲಿವುಡ್ ನಾಯಕಿ ಅನುಷ್ಕಾ ಶರ್ಮಾಗೆ ತಂಗಿಯಾಗುತ್ತಿದ್ದು, ಕೊಹ್ಲಿಗೆ ನಾದಿನಿಯಾಗುತ್ತಾರೆ. ಈ ವಿಚಾರವನ್ನಿಟ್ಟುಕೊಂಡು ಸಹ ಹಲವಾರು ಮಂದಿ ಕಮೆಂಟ್‌ ಮಾಡುತ್ತಿದ್ದಾರೆ.

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link