ಅನುಷ್ಕಾಗಿಂತಲೂ ಸಖತ್‌ ಬ್ಯೂಟಿ ವಿರಾಟ್‌ ಕೊಹ್ಲಿ `ತಂಗಿ`: ಈಕೆ ಖ್ಯಾತ ನಟಿಯೂ ಹೌದು...ಸಿನಿರಂಗವನ್ನೇ ಆಳುತ್ತಿರುವ ಈ ಅತಿಲೋಕ ಸುಂದರಿ ಯಾರು ಗೊತ್ತಾ?

Fri, 06 Sep 2024-2:07 pm,

ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಬಾಲಿವುಡ್‌ʼನ ಸುಂದರ ಜೋಡಿಗಳಲ್ಲಿ ಒಂದು ಎಂಬುದು ತಿಳಿದ ವಿಚಾರವೇ. ಆದರೆ ನಾವಿಂದು ಈ ವರದಿಯಲ್ಲಿ ಓರ್ವ ನಟಿಯ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈಕೆ ಕೊಹ್ಲಿ ಮತ್ತು ಅನುಷ್ಕಾಗೆ ಬಹಳ ಹತ್ತಿರದ ಸಂಬಂಧಿಯೂ ಹೌದು.

 

ಸೈಂಧವದಂತಹ ಹಿಟ್ ಸಿನಿಮಾಗಳ ಮೂಲಕ ಜನಪ್ರಿಯತೆ ಗಳಿಸಿರುವ ನಾಯಕಿ ರುಹಾನಿ ಶರ್ಮಾ, ದಿನದಿಂದ ದಿನಕ್ಕೆ ತನ್ನ ಸೌಂದರ್ಯ ಹೆಚ್ಚಿಸಿಕೊಳ್ಳುತ್ತಿದ್ದಾರೆ.

 

ಬಾಲಿವುಡ್ ಇಂಡಸ್ಟ್ರಿಯಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚಿದ್ದ ಅನುಷ್ಕಾ ಮದುವೆಯ ನಂತರ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡಿದ್ದರು. ಆದರೆ ಅವರ ತಂಗಿ ಟಾಲಿವುಡ್ ಇಂಡಸ್ಟ್ರಿಯಲ್ಲಿ ಕ್ರೇಜಿ ಹೀರೋಯಿನ್ ಎಂಬುದೇ ಹೆಚ್ಚು ಜನರಿಗೆ ತಿಳಿದಿಲ್ಲ.

 

ತೆಲುಗಿನಲ್ಲಿ ಒಳ್ಳೆಯ ಪಾತ್ರಗಳನ್ನು ಮಾಡಿ ಪ್ರೇಕ್ಷಕರಿಗೆ ಹತ್ತಿರವಾದ ಚೆಲುವೆ ರುಹಾನಿ ಶರ್ಮಾ. ತನ್ನ ಸೌಂದರ್ಯ ಮತ್ತು ನಟನೆಯಿಂದ ಹೆಸರು ಮಾಡಿದವರು ಇವರು.

 

ಚೊಚ್ಚಲ ಬಾರಿಗೆ ತಮಿಳು ಚಿತ್ರರಂಗಕ್ಕೆ ಕಾಲಿಟ್ಟ ಈ ಚೆಲುವೆ.. ಚಿ...ಲ.. ಸೌ.. ಚಿತ್ರದ ಮೂಲಕ ತೆಲುಗು ತೆರೆಗೆ ಪರಿಚಯವಾದರು.

 

ಮೊದಲ ಚಿತ್ರದಲ್ಲೇ ತಮ್ಮ ಸಹಜ ನಟನೆಯಿಂದ ಮೆಚ್ಚಿಕೊಂಡಿದ್ದ ಈ ನಾಯಕಿ ಆ ನಂತರ ತೆಲುಗಿನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

 

ಹಿಟ್, ಡರ್ಟಿ ಹರಿ, ಸೈಂಧವ ಸಿನಿಮಾ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ಇವರು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ಆಕ್ಟೀವ್‌ ಆಗಿದ್ದಾರೆ.

 

ಇನ್ನು ರುಹಾನಿ ಶರ್ಮಾ, ತನ್ನ ಅಕ್ಕನ ಗಂಡ ವಿರಾಟ್‌ ಕೊಹ್ಲಿ ಜೊತೆ ಸಹೋದರ ಬಾಂಧವ್ಯವನ್ನು ಹೊಂದಿದ್ದಾರಂತೆ. ಈ ಹಿಂದೆ ಈ ಬಗ್ಗೆ ರುಹಾನಿ ಹೇಳಿಕೆ ಕೊಟ್ಟಿದ್ದರು,

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link