ಬಡತನದ ಹಾದಿ ಹಿಡಿದ ಆ ಕಾಲದ ಕ್ರಿಕೆಟ್ ಲೋಕದ ಶ್ರೀಮಂತರು!
ಮ್ಯಾಥ್ಯೂ ಸಿಂಕ್ಲೇರ್ ಎಂಬವರು ನ್ಯೂಜಿಲೆಂಡ್ ಮೂಲದ ಕ್ರಿಕೆಟಿಗ. 2013 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು. ನಿವೃತ್ತಿಯ ನಂತರ ಅವರ ಕುಟುಂಬ ಅನೇಕ ಸಮಸ್ಯೆಗಳಿಗೆ ಒಳಗಾಯಿತು. ಇದೀಗ ಸಿಂಕ್ಲೇರ್ ತನ್ನ ಕುಟುಂಬವನ್ನು ಸಮಸ್ಯೆಯಿಂದ ಹೊರತರಲು ರಿಯಲ್ ಎಸ್ಟೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ನ್ಯೂಜಿಲೆಂಡ್‌ನ ಮಾಜಿ ಕ್ರಿಕೆಟಿಗ ಕ್ರಿಸ್ ಕೈರ್ನ್ಸ್ 2004 ರಲ್ಲಿ ನಿವೃತ್ತರಾದರು. ನಿವೃತ್ತಿಯ ನಂತರ, ಕ್ರಿಸ್ ಹೀರೋ ವ್ಯವಹಾರವನ್ನು ಪ್ರಾರಂಭಿಸಿದರು. ಅದರಲ್ಲಿ ಸಾಕಷ್ಟು ನಷ್ಟವನ್ನು ಎದುರಿಸಬೇಕಾಯಿತು. ಇದಾದ ನಂತರ ಟ್ರಕ್ ಡ್ರೈವರ್ ಹಾಗೂ ಕ್ಲೀನರ್ ಆಗಿ ಕೆಲ ಮಾಡಲು ಪ್ರಾರಂಭಿಸಿದರು. ಇದೀಗ ಈ ಮೂಲಕ ಕೆಲಸ ಮಾಡಿಕೊಂಡು ಸಂಸಾರ ನಡೆಸುತ್ತಿದ್ದಾರೆ.
ಅರ್ಷದ್ ಖಾನ್ ಅವರು ಪಾಕಿಸ್ತಾನ ಕ್ರಿಕೆಟ್ ತಂಡದ ಅದ್ಭುತ ಸ್ಪಿನ್ ಬೌಲರ್ ಆಗಿದ್ದವರು. 58 ಏಕದಿನ ಮತ್ತು 9 ಟೆಸ್ಟ್ ಪಂದ್ಯಗಳನ್ನು ಆಡಿದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು. ಅರ್ಷದ್ ಖಾನ್, ನಿವೃತ್ತಿಯ ನಂತರ ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡಬೇಕಾಯಿತು. ಆಸ್ಟ್ರೇಲಿಯಾಕ್ಕೆ ಹೋಗಿ ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡಿದ ಬಳಿಕ ಅವರು ಮತ್ತೆ ತಮ್ಮ ಉತ್ತಮ ದಿನಗಳನ್ನು ಕಂಡರು
ಇಂಗ್ಲೆಂಡ್ ಪರ ಆಡಿದ ಆಡಮ್ ಹೋಲಿಯೊಕ್ ಅವರ ಕಾಲದ ಅತ್ಯುತ್ತಮ ಆಲ್ ರೌಂಡರ್ ಎಂದು ಪರಿಗಣಿಸಲ್ಪಟ್ಟಿದ್ದರು. ಆಡಮ್ ಕ್ರಿಕೆಟ್‌ನಿಂದ ನಿವೃತ್ತಿಯಾದಾಗ, ಅವರು ಸಾಕಷ್ಟು ಆರ್ಥಿಕ ತೊಂದರೆಗಳನ್ನು ಎದುರಿಸಬೇಕಾಯಿತು. ಬಳಿಕ ಕಂಪನಿಗಳಲ್ಲಿ ಕೆಲಸ ಮಾಡುವ ಮೂಲಕ ತಮ್ಮ ಕುಟುಂಬವನ್ನು ಮುನ್ನಡೆಸಲು ಮುಂದಾದರು.
ಈ ಪಟ್ಟಿಯಲ್ಲಿ ಭಾರತೀಯ ಕ್ರಿಕೆಟಿಗ ಸಹ ಸೇರಿದ್ದಾರೆ. ಜನಾರ್ದನ್ ನವ್ಲೆ ಎಂಬವರು 1934 ರಲ್ಲಿ ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು ಪ್ರಾರಂಭಿಸಿದರು. ಕ್ರಿಕೆಟ್‌ನಿಂದ ನಿವೃತ್ತರಾದ ಬಳಿಕ ಸಕ್ಕರೆ ಕಾರ್ಖಾನೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಅವರು 7 ಸೆಪ್ಟೆಂಬರ್ 1979 ರಂದು ನಿಧನರಾದರು.