Cricketers Meal: ಕ್ರಿಕೆಟ್ ಪಂದ್ಯದ ವೇಳೆ ಕ್ರಿಕೆಟಿಗರ ಆಹಾರ ಪದ್ದತಿ ಹೇಗಿರುತ್ತೆ ಗೊತ್ತಾ?

Fri, 25 Aug 2023-7:42 am,

ಭಾರತದಲ್ಲಿ ಬೇರೆ ಕ್ರೀಡೆಗಳಿಗಿಂತ ಕ್ರಿಕೆಟ್ ಬಗ್ಗೆ ಜನರಿಗೆ ಹೆಚ್ಚಿನ ಒಲವಿದೆ. ಮಾತ್ರವಲ್ಲ, ಕ್ರಿಕೆಟಿಗರ ಬಗ್ಗೆಯೂ ಅಷ್ಟೇ ಆಸಕ್ತಿಯಿದೆ. ಆಟವಾಡಲು ಶಕ್ತಿ, ಸದೃಢವಾದ ಮೈಕಟ್ಟು ತುಂಬಾ ಮುಖ್ಯ. ಪ್ರತಿಯೊಬ್ಬ ಕ್ರೀಡಾಪಟುವೂ ಫಿಟ್‌ನೆಸ್‌ನ ವಿಷಯದಲ್ಲಿ ಸ್ಟ್ರಾಂಗ್ ಆಗಿರಲು ಇದು ಪ್ರಮುಖ ಕಾರಣವೂ ಹೌದು. ಆದರೆ, ಕ್ರಿಕೆಟ್ ಪಂದ್ಯದ ವೇಳೆ ಕ್ರಿಕೆಟಿಗರ ಆಹಾರ ಪದ್ದತಿ ಹೇಗಿರುತ್ತೆ. ಈ ಸಮಯದಲ್ಲಿ ಅವರು ಎಂತಹ ಆಹಾರಗಳನ್ನು ಸೇವಿಸುತ್ತಾರೆ ಗೊತ್ತಾ? 

ಯಾವುದೇ ಆಟಗಾರನಾಗಿರಲಿ ಆದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ಪಂದ್ಯವನ್ನು ಆಡಲು ಫಿಟ್ನೆಸ್ ತುಂಬಾ ಅವಶ್ಯಕ.  ಇದು ಅವರ ಆಹಾರ ಪದ್ದತಿಯನ್ನು ಸಹ ಅವಲಂಬಿಸಿರುತ್ತದೆ. ವೃತ್ತಿಪರ ಕ್ರಿಕೆಟಿಗರೊಬ್ಬರು ಪಂದ್ಯಾವಳಿಯ ಸಮಯದಲ್ಲಿ ಕ್ರಿಕೆಟಿಗರು ಎಂತಹ ಆಹಾರಗಳನ್ನು ಸೇವಿಸುತ್ತಾರೆ ಎಂಬ ಬಗ್ಗೆ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. 

Quora ನಲ್ಲಿನ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ವೃತ್ತಿಪರ ಕ್ರಿಕೆಟಿಗರೊಬ್ಬರು , ಟೆಸ್ಟ್ ಪಂದ್ಯದ ಸಮಯದಲ್ಲಿ ನಮ್ಮ ದೇಶದ ಹೆಸರಾಂತ ಕ್ರಿಕೆಟಿಗರೊಬ್ಬರು ಕೇವಲ ಲಘು ಆಹಾರಗಳನ್ನಷ್ಟೇ ಆಯ್ಕೆ ಮಾಡುತ್ತಾರೆ ಎಂದು ಹೇಳಿದ್ದಾರೆ. 

ಸಾಮಾನ್ಯವಾಗಿ ಟೆಸ್ಟ್ ಪಂದ್ಯದ ಸಮಯದಲ್ಲಿ ಕ್ರಿಕೆಟಿಗರಿಗೆ ಮಾರ್ನಿಂಗ್ ಬ್ರೇಕ್ಫಾಸ್ಟ್ ಅಥವಾ ಯಾವುದೇ ರೀತಿಯ ಆಹಾರವನ್ನು ಸೇವಿಸಲು ಅನುಮತಿಸಲಾಗುವುದಿಲ್ಲ. ಆದರೆ, ಪಂದ್ಯ ಆರಂಭವಾಗುವ ಮೊದಲು ಆಟಗಾರರು ಪೀನಟ್ ಬಟರ್ ಜೊತೆಗೆ ಬ್ರೌನ್ ಬ್ರೆಡ್, ಪ್ರೋಟೀನ್ ಬಾರ್ ಮತ್ತು ಬಾಳೆಹಣ್ಣನ್ನು ಸೇವಿಸುತ್ತಾರೆ. 

ಇದಲ್ಲದೆ, ಆಟಗಾರರು ಸುಲಭವಾಗಿ ಜೀರ್ಣವಾಗುವ ಆಹಾರಗಳನ್ನು ಈ ಸಮಯದಲ್ಲಿ ತೆಗೆದುಕೊಳ್ಳುತ್ತಾರೆ. ಮಧ್ಯಾಹ್ನದ ಊಟದ ಸಮಯದಲ್ಲಿ  ಕಾರ್ಬೋಹೈಡ್ರೇಟ್‌ಗಳು ಮತ್ತು ಪ್ರೋಟೀನ್‌ಗಳಲ್ಲಿ ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸುತ್ತಾರೆ. 

ಪಂದ್ಯಾವಳಿ ಸಂದರ್ಭದಲ್ಲಿ ಪ್ರತಿ ಆಟಗಾರಗೂ ಕೂಡ ಸಲಾಡ್ ಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಇದರಲ್ಲಿ ಬೇಯಿಸಿದ ಚಿಕನ್, ಸಲಾಡ್, ಬ್ರೌನ್ ರೈಸ್, ಪ್ರೋಟೀನ್ ಬಾರ್‌ಗಳು ಮತ್ತು ತರಕಾರಿಗಳನ್ನು ಹೆಚ್ಚಾಗಿ ಕಾಣಬಹುದು. ಇದರೊಂದಿಗೆ ಅವರ ವಿಶ್ರಾಂತಿಗೂ ಕೂಡ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link