ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿಗಿಂತಲೂ ಹೆಚ್ಚು ಹಣ ಗಳಿಸುವ ಕ್ರಿಕೆಟಿಗರು
)
ಇಂಗ್ಲೆಂಡ್ ನ ಟೆಸ್ಟ್ ನಾಯಕ ಜೋ ರೂಟ್ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಯೊಂದಿಗೆ ವಾರ್ಷಿಕ ಒಪ್ಪಂದವನ್ನು ಹೊಂದಿದ್ದು, ಇದು ಅವರನ್ನು ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗರಲ್ಲಿ ಒಬ್ಬರನ್ನಾಗಿಸಿದೆ. ರೂಟ್ ತನ್ನ ವಾರ್ಷಿಕ ECB ಒಪ್ಪಂದದಿಂದ ಸುಮಾರು 7.22 ಕೋಟಿ ರೂ. ಗಳಿಸುತ್ತಾರೆ. ಇದು ವಿರಾಟ್ ಕೊಹ್ಲಿಗಿಂತಲೂ ಹೆಚ್ಚು.
)
ಪ್ರಸ್ತುತ ಕ್ರಿಕೆಟ್‌ನಿಂದ ವಿರಾಮದಲ್ಲಿರುವ ಇಂಗ್ಲೆಂಡ್‌ನ ಅಬ್ಬರದ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಇಸಿಬಿಯ ಒಪ್ಪಂದದಿಂದ ವಾರ್ಷಿಕ ಸುಮಾರು 8.75 ಕೋಟಿ ರೂ. ಪಡೆಯುತ್ತಾರೆ. ಸ್ಟೋಕ್ಸ್ 2019ರಲ್ಲಿ ಇಂಗ್ಲೆಂಡ್ ತಂಡವು ಚೊಚ್ಚಲ ಏಕದಿನ ವಿಶ್ವಕಪ್ ಜಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
)
ಜೋಸ್ ಬಟ್ಲರ್ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗಿಂತ ಹೆಚ್ಚು ಸಂಪಾದಿಸುವ ಇನ್ನೊಬ್ಬ ಇಂಗ್ಲೆಂಡ್ ಕ್ರಿಕೆಟಿಗ. ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ತನ್ನ ವಾರ್ಷಿಕ ಇಸಿಬಿ ಒಪ್ಪಂದದಿಂದ ಸುಮಾರು 9 ಕೋಟಿ ರೂ.ಗಳನ್ನು ಗಳಿಸುತ್ತಾರೆ.
ಜೋಫ್ರಾ ಆರ್ಚರ್ ಇತ್ತೀಚಿನ ದಿನಗಳಲ್ಲಿ ಅದ್ಭುತ ಬೌಲರ್ ಆಗಿ ಗಮನ ಸೆಳೆಯುತ್ತಿದ್ದಾರೆ. ಅತ್ಯಂತ ಮಾರಕ ಬೌಲರ್‌ಗಳಲ್ಲಿ ಒಬ್ಬರಾಗಿರುವ ಆರ್ಚರ್ ಮೌಲ್ಯವು ಇಸಿಬಿಗೆ ತಿಳಿದಿದೆ. ಹೀಗಾಗಿ ಅವರು ವಾರ್ಷಿಕ ಒಪ್ಪಂದದ ಭಾಗವಾಗಿ ಸುಮಾರು 9.39 ಕೋಟಿ ರೂ.ಗಳನ್ನು ಗಳಿಸುತ್ತಿದ್ದಾರೆ.
ಸ್ಟೀವ್ ಸ್ಮಿತ್ ಅವರು ಕ್ರಿಕೆಟ್ ಆಸ್ಟ್ರೇಲಿಯಾದೊಂದಿಗೆ ಬಹಳ ಲಾಭದಾಯಕ ಒಪ್ಪಂದವನ್ನು ಹೊಂದಿದ್ದಾರೆ. ಏಕೆಂದರೆ ಅವರು ವಾರ್ಷಿಕವಾಗಿ ಸುಮಾರು 4 ಮಿಲಿಯನ್ ಅಮೆರಿಕನ್ ಡಾಲರ್ ಗಳಿಸುತ್ತಿದ್ದಾರೆ. ಇದರಿಂದಾಗಿ ಅವರು ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಕೊಹ್ಲಿಗಿಂತಲೂ ಹೆಚ್ಚು ಹಣ ಸಂಪಾದಿಸುತ್ತಿದ್ದಾರೆ.