ಮೊಹಮ್ಮದ್‌ ಸಿರಾಜ್‌ ಸೇರಿ ಡಿಎಸ್‌ಪಿ ಹುದ್ದೆ ಅಲಂಕರಿಸಿದ ನಾಲ್ವರು ಕ್ರಿಕೆಟಿಗರಿವರು..!

Mon, 14 Oct 2024-2:30 pm,

Indian Cricket Team: ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರಿಗೆ ತೆಲಂಗಾಣ ಸರ್ಕಾರ ದೊಡ್ಡ ಜವಾಬ್ದಾರಿಯನ್ನು ನೀಡಿದೆ. ಪೊಲೀಸ್ ಇಲಾಖೆಯಲ್ಲಿ ಡಿಎಸ್ಪಿಯಾಗಿ ಮೊಹಮ್ಮದ್‌ ಸಿರಾಜ್‌ ಅವರನ್ನು ನೇಮಿಸಲಾಗಿದೆ. 2024ರ ಟಿ20 ವಿಶ್ವಕಪ್‌ನಲ್ಲಿ ಮೊಹಮ್ಮದ್‌ ಅದ್ಭುತ ಪ್ರದರ್ಶನ ನೀಡಿದ ಕಾರಣಕ್ಕಾಗಿ ಸಿರಾಜ್‌ಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ತೆಲಂಗಾಣ ಸರ್ಕಾರ ಘೋಷಿಸಿದ್ದು, ಇದೀಗ ಅದರಂತೆಯೇ ಸಿರಾಜ್‌ ಡಿಎಸ್‌ಪಿ ಹುದ್ದೆಯನ್ನು ಅಲಂಕರಿಸಿದ್ದಾರೆ.   

ಆದರೆ, ಈ ರೀತಿ ಕ್ರಿಕೆಟ್‌ನಲ್ಲಿ ನೀಡಿದ ಒಳ್ಳೆಯ ಪ್ರದರ್ಶನಕ್ಕಾಗಿ ಪೋಲಿಸ್‌ ಹುದ್ದೆ ಗಿಟ್ಟಿಸಿಕೊಂಡ ಕ್ರಿಕೆಟಿಗರಲ್ಲಿ ಮೊಹಮ್ಮದ್‌ ಸಿರಾಜ್‌ ಮೊದಲನೇಯವರಲ್ಲ. ಇದಕ್ಕೂ ಮೊದಲು ಹಲವು ಕ್ರಿಕೆಟಿಗರು ಪೊಲೀಸ್ ಆಡಳಿತದಲ್ಲಿ ದೊಡ್ಡ ಹುದ್ದೆಗಳನ್ನು ಅಲಂಕರಿಸಿದ್ದಾರೆ.   

ಜೋಗಿಂದರ್ ಶರ್ಮಾ 2007ರ ಟಿ20 ವಿಶ್ವಕಪ್‌ನಲ್ಲಿ ಭಾರತದ ಪರ ಪ್ರಮುಖ ಪಾತ್ರ ವಹಿಸಿದ್ದ ಜೋಗಿಂದರ್ ಶರ್ಮಾ ಕೂಡ ಪೊಲೀಸ್ ಇಲಾಖೆಯಲ್ಲಿದ್ದಾರೆ. ಹರಿಯಾಣ ಸರ್ಕಾರ ಅವರನ್ನು ಡಿಎಸ್ಪಿಯಾಗಿ ನೇಮಿಸಿತು. ಈಗಲೂ ಕೂಡ ಜೋಗಿಂದರ್‌ ಶರ್ಮಾ ಅವರು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಹರ್ಭಜನ್ ಸಿಂಗ್ ಭಾರತೀಯ ಕ್ರಿಕೆಟಿಗ ಹರ್ಭಜನ್ ಸಿಂಗ್ ಕೂಡ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದ್ದಾರೆ. ಅವರ ಅತ್ಯುತ್ತಮ ಪ್ರದರ್ಶನದಿಂದಾಗಿ, ಹರ್ಭಜನ್ ಸಿಂಗ್ ಅವರಿಗೆ ಪಂಜಾಬ್ ಸರ್ಕಾರವು ಡಿಎಸ್ಪಿ ಹುದ್ದೆಯನ್ನು ನೀಡಿತು. ಆದರೆ, ಅವರು ಈಗ ಆಮ್ ಆದ್ಮಿ ಪಕ್ಷದಿಂದ ರಾಜ್ಯಸಭಾ ಸಂಸದರಾದ ಕಾರನದಿಂದಾಗಿ ಅವರು ತಮ್ಮ  ಪೊಲೀಸ್ ಕೆಲಸವನ್ನು ತೊರೆದರು.

ಬಲ್ವಿಂದರ್ ಸಂಧು 1983 ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾದ ಬಲ್ವಿಂದರ್ ಸಿಂಗ್ ಸಂಧು ಅವರನ್ನು ಮಹಾರಾಷ್ಟ್ರ ಸರ್ಕಾರವು ಮುಂಬೈ ಪೊಲೀಸ್‌ನಲ್ಲಿ ಸಹಾಯಕ ಪೊಲೀಸ್ ಕಮಿಷನರ್ (ACP) ಆಗಿ ನೇಮಿಸಿದೆ.

ಹರ್ಮನ್‌ಪ್ರೀತ್ ಕೌರ್ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಕೂಡ ಪಂಜಾಬ್ ಪೊಲೀಸ್‌ನ ಡಿಎಸ್‌ಪಿಯಾಗಿ ನೇಮಕಗೊಂಡಿದ್ದಾರೆ. 2017 ರ ಮಹಿಳಾ ವಿಶ್ವಕಪ್‌ನಲ್ಲಿ ಹರ್ಮನ್‌ಪ್ರೀತ್ ಅವರ ಅದ್ಭುತ ಪ್ರದರ್ಶನದ ನಂತರ, ಪಂಜಾಬ್ ಸರ್ಕಾರ ಅವರನ್ನು ಡಿಎಸ್‌ಪಿ ಎಂದು ಘೋಷಿಸಿತು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link