Photo Gallery: ಕ್ರಿಕೆಟ್ ಇತಿಹಾಸದಲ್ಲಿನ ಅತ್ಯಂತ ಪ್ರಸಿದ್ಧ ಬಾಲ್ ಟ್ಯಾಂಪರಿಂಗ್ ವಿವಾದಗಳಿವು..!

Tue, 17 Aug 2021-3:08 pm,

1977ರಲ್ಲಿ ಚೆನ್ನೈನಲ್ಲಿ ಭಾರತ ವಿರುದ್ಧ ನಡೆದ 3ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವೇಗದ ಬೌಲರ್ ಜಾನ್ ಲಿವರ್ ವಿರುದ್ಧ ಚೆಂಡಿನ ಮೇಲೆ ವ್ಯಾಸಲೀನ್ ಹಚ್ಚಿದ್ದ ಆರೋಪ ಕೇಳಿಬಂದಿತ್ತು. ಆ ಸಮಯದಲ್ಲಿ ಭಾರತ ತಂಡದ ನಾಯಕರಾಗಿದ್ದ ಬಿಶನ್ ಸಿಂಗ್ ಬೇಡಿ ಈ ಬಗ್ಗೆ ದೂರು ದಾಖಲಿಸಿದ್ದರು. ವಿಚಾರಣೆಯ ಸಮಯದಲ್ಲಿ ಚೆಂಡಿನ ಮೇಲೆ ವ್ಯಾಸಲೀನ್ ಪತ್ತೆಯಾಗಿತ್ತು.

1994ರ ಸಮಯದಲ್ಲಿ ಇಂಗ್ಲೆಂಡ್ ನಾಯಕನಾಗಿದ್ದ ಮೈಕೆಲ್ ಅಥರ್ಟನ್ ಮೇಲೆ  ಬಾಲ್ ಟ್ಯಾಂಪರಿಂಗ್ ಮಾಡಿದ ಆರೋಪ ಹೊರಿಸಲಾಗಿತ್ತು. ದಕ್ಷಿಣ ಆಫ್ರಿಕಾ ವಿರುದ್ಧ ಲಾರ್ಡ್ಸ್ ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ ಅಥರ್ಟನ್ ತನ್ನ ಜೇಬಿನಿಂದ ಚೆಂಡಿನ ಮೇಲೆ ಧೂಳು ಉಜ್ಜುತ್ತಿರುವ ದೃಶ್ಯ ಟಿವಿಯಲ್ಲಿ ಸೆರೆಯಾಗಿತ್ತು. ಈ ರೀತಿ ಮಾಡುವುದು ಅಪರಾಧವೇ ಅಥವಾ ಇಲ್ಲವೇ ಅಂತಾ ನನಗೆ ತಿಳಿದಿಲ್ಲವೆಂದು ಅಥರ್ಟನ್ ಹೇಳಿದ್ದರು. ಅವರಿಗೆ  2 ಸಾವಿರ ಪೌಂಡ್ ದಂಡ ವಿಧಿಸಲಾಯಿತು. ಈ ಘಟನೆಯು ಬ್ರಿಟಿಷ್ ಮಾಧ್ಯಮಗಳಲ್ಲಿ ವ್ಯಾಪಕ ಆಕ್ರೋಶವನ್ನು ಹುಟ್ಟುಹಾಕಿತ್ತು.

2009-10ರಲ್ಲಿ ಪಾಕಿಸ್ತಾನ ತಂಡವು ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಪಾಕ್ ನಾಯಕ ಶಾಹಿದ್ ಆಫ್ರಿದಿ ಪರ್ತ್ ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಬಾಲ್ ಟ್ಯಾಂಪರಿಂಗ್ ಮಾಡಿ ಸಿಕ್ಕಿಬಿದ್ದಿದ್ದರು. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಅವರು ಹಲ್ಲಿನಿಂದ ಕಚ್ಚಿ ಚೆಂಡನ್ನೂ ವಿರೂಪಗೊಳಿಸಲು ಪ್ರಯತ್ನಿಸಿದ್ದರು. ಹೀಗಾಗಿ ಅಫ್ರಿದಿಗೆ 2 ಪಂದ್ಯಗಳ ಅಮಾನತು ಶಿಕ್ಷೆ ವಿಧಿಸಲಾಗಿತ್ತು.   

ದಕ್ಷಿಣ ಆಫ್ರಿಕಾದ ನಾಯಕ ಫಾಫ್ ಡು ಪ್ಲೆಸಿಸ್ ಮೇಲೆ 2 ಬಾರಿ ಚೆಂಡು ವಿರೂಪಗೊಳಿಸಿದ ಆರೋಪವಿದೆ. ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಡು ಪ್ಲೆಸಿಸ್ ತಮ್ಮ ಟ್ರೌಸರ್ ಜಿಪ್ ಮೇಲೆ ಚೆಂಡು ಉಜ್ಜಿರುವುದು ಕಂಡುಬಂದಿತ್ತು. 2ನೇ ಬಾರಿಗೆ ಅವರು ಚೆಂಡಿನ ಮೇಲೆ ಚೂಯಿಂಗ್ ಗಮ್ ಉಜ್ಜುತ್ತಿರುವುದು ಕಂಡುಬಂದಿತ್ತು. ಈ ಅಪರಾಧಕ್ಕೆ ಅವರಿಗೆ ಪಂದ್ಯದ ಅರ್ಧ ಶುಲ್ಕವನ್ನು ದಂಡ ವಿಧಿಸಲಾಗಿತ್ತು.

ಆಸ್ಟ್ರೇಲಿಯಾದ ಆಟಗಾರರು ಬಾಲ್ ಟ್ಯಾಂಪರಿಂಗ್ ಮಾಡಿದ ಘಟನೆ ಕ್ರಿಕೆಟ್ ಜಗತ್ತನ್ನು ಬೆಚ್ಚಿಬೀಳಿಸಿತ್ತು. ಮಾರ್ಚ್ 2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟೆಸ್ಟ್‌ ನಲ್ಲಿ ಆಸೀಸ್ ಆಟಗಾರರಾದ ಸ್ಟೀವ್ ಸ್ಮಿತ್ (ಆಗಿನ ನಾಯಕ), ಡೇವಿಡ್ ವಾರ್ನರ್ (ಆಗಿನ ಉಪನಾಯಕ) ಮತ್ತು ಕ್ಯಾಮರೂನ್ ಬ್ಯಾನ್‌ಕ್ರಾಫ್ಟ್ (ಅಗ್ರ ಕ್ರಮಾಂಕದ ಬ್ಯಾಟ್ಸ್‌ ಮನ್) ಚೆಂಡು ವಿರೂಪಗೊಳಿಸಿ ಸಿಕ್ಕಿಬಿದ್ದಿದ್ದರು. ಮೂವರೂ ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದರು. ಹೀಗಾಗಿ ಇವರ ಅಪರಾಧಕ್ಕೆ 1 ವರ್ಷದವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವುದಕ್ಕೆ ನಿಷೇಧ ಹೇರಲಾಗಿತ್ತು.   

ಚೆಂಡನ್ನು ವಿರೂಪಗೊಳಿಸಿದ ಘಟನೆಗಳಲ್ಲಿ ಆಟಗಾರರನ್ನು ತಪ್ಪಾಗಿ ಆರೋಪಿಸಿದ ಉದಾಹರಣೆಗಳೂ ಇವೆ. 15 ವರ್ಷಗಳ ಹಿಂದೆ ಓವಲ್ ನಲ್ಲಿ ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದ ವೇಳೆ ಡಾರೆಲ್ ಹೇರ್ ಮತ್ತು ಬಿಲ್ಲಿ ಡಾಕ್ಟ್ರೋವ್ ಅವರು ಚೆಂಡನ್ನು ವಿರೂಪಗೊಳಿಸಿದ ಆರೋಪದ ಮೇಲೆ ಇಂಗ್ಲೆಂಡ್ ಗೆ 5 ಪೆನಾಲ್ಟಿ ರನ್ ನೀಡಿದ್ದರು.

ಈ ಆರೋಪದಿಂದ ಬೇಸರ ವ್ಯಕ್ತಪಡಿಸಿದ್ದ ಅಂದಿನ ಪಾಕಿಸ್ತಾನದ ನಾಯಕ ಇಂಜಮಾಮ್ ಉಲ್ ಹಕ್ ಟೀ ವಿರಾಮದ ಬಳಿಕ ಮೈದಾನಕ್ಕೆ ಮರಳಲು ನಿರಾಕರಿಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿದ್ದರು. ಪರಿಣಾಮವಾಗಿ ಇಂಗ್ಲೆಂಡ್ ಗೆಲುವು ಸಾಧಿಸಿತು. ನಂತರ ಐಸಿಸಿ (ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ) ನಡೆಸಿದ ಬಾಲ್ ಟ್ಯಾಂಪರಿಂಗ್‌ ತನಿಖೆಯಲ್ಲಿ ಪಾಕಿಸ್ತಾನ ತಪ್ಪಿತಸ್ಥನಲ್ಲ ಎಂದು ತೀರ್ಪು ನೀಡಿತು. ಇಂಗ್ಲೆಂಡ್ ಗೆಲುವು ಸಾಧಿಸಿದ್ದ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯ್ತು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link