Snacks Recipe: ಗರಿಗರಿಯಾದ ಮಸಾಲಾ ವಡಾ.. ಕೇವಲ ಹತ್ತು ನಿಮಿಷದಲ್ಲಿ ತಯಾರಿಸಿ.!
ಇದನ್ನು ವಿವಿಧ ರೀತಿಯ ಬೇಳೆಕಾಳುಗಳೊಂದಿಗೆ ತಯಾರಿಸಲಾಗುತ್ತದೆ. ಹಾಗಾಗಿ ದೇಹಕ್ಕೂ ಆರೋಗ್ಯ ನೀಡುತ್ತದೆ. ಈ ಮಸಾಲಾ ವಡಾ ತುಂಬಾ ಗರಿಗರಿ..ಟೇಸ್ಟಿ ಆಗಿರುತ್ತದೆ. ಈ ವಡಾ ಮಾಡುವ ಸುಲಭ ವಿಧಾನವನ್ನು ತಿಳಿಯಿರಿ.
ಮಸಾಲಾ ವಡಾಗೆ ಬೇಕಾಗುವ ಸಾಮಾಗ್ರಿಗಳು- ಕಡಲೆ ಬೇಳೆ, ಅಕ್ಕಿ ಹಿಟ್ಟು, ಶುಂಠಿ, ಕರಿಬೇವಿನ ಎಲೆ, ಪುದಿನಾ, ಉಪ್ಪು, ಎಣ್ಣೆ, ಈರುಳ್ಳಿ.
ಮೊದಲು ಈ ಮಸಾಲಾ ವಡಾ ತಯಾರಿಸಲು ಕಡಲೆಬೇಳೆಯನ್ನು ನಾಲ್ಕು ಗಂಟೆ ನೆನೆಸಿಡಬೇಕು. ಬಳಿಕ ಮಿಕ್ಸಿಂಗ್ ಜಾರ್ ತೆಗೆದುಕೊಂಡು ಅದಕ್ಕೆ ಕಡಲೆಬೇಳೆ, ಶುಂಠಿ, ಹಸಿಮೆಣಸಿನಕಾಯಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಒಂದು ದೊಡ್ಡ ಬಟ್ಟಲಿನಲ್ಲಿ ಎಲ್ಲಾ ಮಿಶ್ರಣ ಪದಾರ್ಥಗಳನ್ನು ಹಾಕಿ. ಅದರಲ್ಲಿ ಅಕ್ಕಿ ಹಿಟ್ಟು ಸೇರಿಸಿ.
ಬೇಕಾದಷ್ಟು ಉಪ್ಪು, ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು ಹಾಕಿ ಚೆನ್ನಾಗಿ ಕಲಸಿ. ಮಿಶ್ರಣವನ್ನು 15 ನಿಮಿಷಗಳ ಕಾಲ ಮುಚ್ಚಿಡಿ.
ಪ್ಯಾನ್ ಅನ್ನು ಒಲೆಯ ಮೇಲೆ ಇರಿಸಿ. ಬೇಕಾದಷ್ಟು ಎಣ್ಣೆಯನ್ನು ಹಾಕಿ ಚೆನ್ನಾಗಿ ಬಿಸಿ ಮಾಡಿ. ಹಿಟ್ಟಿನ ಮಿಶ್ರಣವನ್ನು ಕೈಯಲ್ಲಿ ತಟ್ಟಿ, ಎಣ್ಣೆಯಲ್ಲಿ ಗೋಲ್ಡನ್ ಬಣ್ಣ ಬರುವವರೆಗೆ ಕರಿಯಿರಿ. ಈಗ ಕ್ರಿಸ್ಪಿ ಮಸಾಲಾ ವಡಾ ಸವಿಯಲು ಸಿದ್ಧ.